ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲೂರ ಸಾಧಕರು ಪುಸ್ತಕ ಲೋಕಾರ್ಪಣೆ

Last Updated 6 ಜುಲೈ 2015, 6:52 IST
ಅಕ್ಷರ ಗಾತ್ರ

ರಾಯಚೂರು: ಹೃದಯವಂತಿಕೆ ಇಲ್ಲದೇ ಬರಹಗಾರರಾಗಲು ಸಾಧ್ಯವಿಲ್ಲ. ಹೃದಯ ವಿಶಾಲತೆ ಮೈಗೂಡಿಸಿಕೊಂಡವರು ಮಾತ್ರ ಕವಿಗಳಾಗಲು ಸಾಧ್ಯ ಎಂದು ಜಿಲ್ಲೆಯ ಸಾಹಿತಿ ಅಯ್ಯಪ್ಪಯ್ಯ ಹುಡಾ ಹೇಳಿದರು. ಭಾನುವಾರ ನಗರದ ಕನ್ನಡ ಭವನದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಆಯೋಜಿಸಿದ್ದ ಯುವ ಕವಿ ಈರಣ್ಣ ಬೆಂಗಾಲಿ ರಚಿಸಿದ ಬಿಸಿಲೂರ ಸಾಧಕರು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪುಸ್ತಕ ಪರಿಚಯ ಕುರಿತು ಮಾತನಾಡಿದರು.

ಹೃದಯವಂತಿಕೆ ಮೈಗೂಡಿಸಿಕೊಂಡವರ ಮನಸ್ಸು ಯಾವಾಗಲೂ ಕ್ರಿಯಾಶೀಲವಾಗಿರುತ್ತದೆ. ಅಂತಹವರಿಗೆ ಮಾತ್ರ ಬರವಣಿಗೆ ರೂಡಿಸಿಕೊಳ್ಳಲು ಸಾಧ್ಯ. ಹೃದಯವಂತಿಕೆ ಹೊಂದಿರುವ ಈರಣ್ಣ ಬೆಂಗಾಲಿ ರಚಿಸಿದ ಕೃತಿ ಅನನ್ಯವಾಗಿದೆ.

ಜಿಲ್ಲೆಯಲ್ಲಿರುವ ಸಾಧಕರ ಕುರಿತು ಪರಿಚಯ ಮಾಡಿರುವುದು ಒಳ್ಳೆಯ ಕಾರ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಬೆಂಗಾಲಿ ಅವರು ಕವಿಗಳನ್ನು ಪರಿಚಯಿಸುವ ಕಾರ್ಯವನ್ನು ಹೀಗೆ ಮುಂದುವರೆಸಿಕೊಂಡು ಹೈದರಾಬಾದ್‌ ಕರ್ನಾಟಕ ಪ್ರದೇಶದ ಎಲ್ಲ ಜಿಲ್ಲೆಗಳ ಕವಿಗಳ ಪರಿಚಯವನ್ನು ಮಾಡಬೇಕು ಎಂದು ಸಲಹೆ ನೀಡಿದರು.

ಕೃತಿ ಲೋಕಾರ್ಪಣೆ ಮಾಡಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದಾದಾಪೀರ್ ಮಂಜರ್ಲಾ ಮಾತನಾಡಿ, ಯುವ ಕವಿ ಈರಣ್ಣ ಬೆಂಗಾಲಿ ಅವರ ಕಾರ್ಯ ಅಭಿನಂದನೀಯ. ಜಿಲ್ಲೆಯ ಕವಿಗಳ ಬಗ್ಗೆ ತಿಳಿದುಕೊಳ್ಳಲು ಅನುಕೂಲವಾಗುವಂತೆ ಪುಸ್ತಕ ರಚಿಸಿದ್ದಾರೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಎಲೆಮರೆ ಕಾಯಿಯಂತೆ ಕಾರ್ಯನಿರ್ವಹಿಸಿದ ಕವಿಗಳನ್ನು ಪರಿಚಯಿಸುವ ಪ್ರಯತ್ನ ಮಾಡಿದ್ದಾರೆ. ಪ್ರತಿಯೊಬ್ಬರೂ ಓದಬೇಕಾದ ಪುಸ್ತಕವನ್ನೇ ರಚನೆ ಮಾಡಿದ್ದಾರೆ ಎಂದು ತಿಳಿಸಿದರು. ಸಾಹಿತಿ ವೀರಹನುಮಾನ ಮಾತನಾಡಿ, ಸಾಹಿತಿಗಳು ಇನ್ನೊಬ್ಬ ಸಾಹಿತಿಯ ಬಗ್ಗೆ ಗೌಣವಾಗಿ ನೋಡುತ್ತಿರುತ್ತಾರೆ. ಸಾಹಿತಿಗಳ ಬಗ್ಗೆ ಸರಿಯಾದ ಅಭಿಪ್ರಾಯ ಇರುವುದಿಲ್ಲ. ಚಿಕ್ಕ ವಯಸ್ಸಿನವರಾದರೂ ಬೆಂಗಾಲಿ ಕಾರ್ಯ ನಿಜವಾಗಿಯೂ ಒಳ್ಳೆಯ ಕಾರ್ಯವಾಗಿದೆ ಎಂದು ಹೇಳಿದರು.

ಮುಖ್ಯ ಶಿಕ್ಷಕ ದಂಡಪ್ಪ ಬಿರಾದಾರ ಪ್ರಾಸ್ತಾವಿಕ ಮಾತನಾಡಿ, ಜಿಲ್ಲೆಯಲ್ಲಿ ಸಾಹಿತಿಗಳಿಗೆ  ದಾನಿಗಳ ಕೊರತೆ ಪ್ರಮುಖ ಸಮಸ್ಯೆಯಾಗಿದ್ದು ಯುವ ಕವಿ ಈರಣ್ಣ ಬೆಂಗಾಲಿ ಅವರಿಗೆ ಬಸವರಾಜ ಕಳಸ ಮತ್ತು ರಾಮಯ್ಯ ನಾಯಕ ದಾನಿಗಳಾಗಿ ಪ್ರೋತ್ಸಾಹ ನೀಡಿರುವುದು ಸಂತೋಷದ ಸಂಗತಿ ಎಂದು ತಿಳಿಸಿದರು. ತಾಲ್ಲೂಕ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಲಿಂಗಣ್ಣ ಗಾಣಧಾಳ, ಸಾಹಿತಿ ಎಸ್.ಎಂ. ಶಶಿಧರ, ದಾನಿಗಳಾದ ಬಸವರಾಜ ಕಳಸ, ರಾಮಯ್ಯ ನಾಯಕ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT