ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ: ಎಎಪಿ ನಾಯಕಿ ಮೇಲೆ ಹಲ್ಲೆ

Last Updated 4 ಜುಲೈ 2014, 19:30 IST
ಅಕ್ಷರ ಗಾತ್ರ

ಪಟ್ನಾ: ಬಿಹಾರದ ಬಕ್ಸರ್‌ ಜಿಲ್ಲೆಯಲ್ಲಿ ಕಿಡಿಗೇಡಿಗಳು ಮತ್ತು ಬೀದಿಪುಂಡರ ವಿರುದ್ಧ ಧ್ವನಿ ಎತ್ತಿದ ಆಮ್‌ ಆದ್ಮಿ ಪಕ್ಷ (ಎಎಪಿ) ನಾಯಕಿ ಮತ್ತು ಸಾಮಾ­ಜಿಕ ಕಾರ್ಯಕರ್ತೆ ಶ್ವೇತಾ ಪಾಠಕ್‌ ಅವರು ಎರಡು ರೀತಿಯ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.

ದೂರು ನೀಡಲು ಠಾಣೆಗೆ ಹೋದ 36 ವರ್ಷದ ಶ್ವೇತಾ ಅವರಿಗೆ ಪೊಲೀಸ್‌ ಸಬ್‌ಇನ್‌­ಸ್ಪೆಕ್ಟರ್‌ ಎಸ್‌.ಎನ್‌. ಸಿಂಗ್‌ ಕಪಾ­ಳಕ್ಕೆ ಹೊಡೆದಿ­ದ್ದಾರೆ. ದೂರು ನೀಡಿ­ದ್ದಕ್ಕಾಗಿ ಅವ­ರನ್ನು ದುಷ್ಕ­ರ್ಮಿಗಳು ಅಪ­ಹರಿಸಿ, ಹಲ್ಲೆ ಮಾಡಿ, ಅತ್ಯಾಚಾರಕ್ಕೆ ಯತ್ನಿಸಿ, ಗಾಯದ ಮೇಲೆ ಉಪ್ಪು ಸುರಿ­ದಿದ್ದು, ಈ ಸಂದರ್ಭದಲ್ಲಿ ಸ್ಥಳಿಯರು ಅವರನ್ನು ರಕ್ಷಿಸಿದ್ದಾರೆ.

ಈ ಕುರಿತು ಎಸ್‌ಪಿಗೆ ದೂರು ನೀಡಲು ಹೋದಾಗ, ರಾತ್ರಿ ಪೊಲೀಸ್‌ ಠಾಣೆಗೆ ಹೋಗುವ ತುರ್ತು ಏನಿತ್ತು ಎಂದು ಅವರು ಪ್ರಶ್ನಿಸಿದ ಘಟನೆಯೂ ನಡೆದಿದೆ.  ನಂತರ ಶ್ವೇತಾ ಅವರ ದೂರನ್ನು ಸ್ವೀಕರಿಸಿದ ಮಹಿಳಾ ಪೊಲೀಸ್‌ ಠಾಣೆ ಅಧಿ­ಕಾರಿ ಅನಾಮಿಕಾ, ಕಿಡಿಗೇಡಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿ­ದ್ದಾರೆ.

  ಈ ಘಟನೆಗಳಿಂದ ನೊಂದ ಶ್ವೇತಾ, ಬಿಹಾರದ ಇನ್ನೊಬ್ಬ ಎಎಪಿ ನಾಯಕಿ  ಪರ್ವೀನ್‌ ಅಮಾನುಲ್ಲಾ (ಮಾಜಿ ಸಚಿವೆ ಮತ್ತು ಮಾಜಿ ಗೃಹ ಕಾರ್ಯ­ದರ್ಶಿ ಪತ್ನಿ) ಅವರೊಡನೆ ಸುದ್ದಿ­ಗೋಷ್ಠಿ ನಡೆಸಿ, ತಪ್ಪಿತಸ್ಥ ಪೊಲೀಸ್‌ ಅಧಿಕಾರಿ­ಗಳನ್ನು ಅಮಾನತು­ಗೊಳಿಸಿ,  ಆರೋಪಿ­ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ರಾಜ್ಯದ ನೂತನ ಡಿಜಿಪಿ ಪಿ.ಕೆ. ಠಾಕೂರ್‌ ಅವ­ರನ್ನು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT