ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ ಮಾಜಿ ಸಚಿವನಿಗೆ ಇರಿತ: ಬಂಧನ

Last Updated 4 ಜುಲೈ 2015, 17:12 IST
ಅಕ್ಷರ ಗಾತ್ರ

ಪಾಟ್ನಾ(ಪಿಟಿಐ): ಬಿಹಾರದ ಮಾಜಿ ಸಚಿವ ಎಜಾಝ್‌-ಉಲ್‌- ಹಕ್‌ ಮೇಲೆ ಪರಿಚಿತ ವ್ಯಕ್ತಿಯೊಬ್ಬ ಅವರ ನಿವಾಸದಲ್ಲೇ ದಾಳಿ ನಡೆಸಿದ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.

ಘಟನೆಯಲ್ಲಿ ಎಜಾಝ್‌ ತೀವ್ರವಾಗಿ ಗಾಯಗೊಂಡಿದ್ದಾರೆ. ಎಜಾಝ್‌-ಉಲ್‌- ಹಕ್‌  ಅವರು ಈಗಾಗಲೇ ಜೈಲುಪಾಲಾಗಿರುವ ಕುಖ್ಯಾತ ರೌಡಿ–ರಾಜಕಾರಣಿ ಮಹಮ್ಮದ್‌ ಶಹಾಬುದ್ದೀನ್‌ ಅವರ ಬಾವ. 

ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿ ರಾಘವೇಂದ್ರ ಸಿಂಗ್‌ ಎಂಬಾತನನ್ನು ಪೊಲೀಸರು ಬೋಜ್‌ಪುರ್‌ ಜಿಲ್ಲೆಯಿಂದ ವಶಕ್ಕೆ ಪಡೆದಿದ್ದಾರೆ. ಈ ದಾಳಿಯ ಹಿಂದಿನ ಉದ್ದೇಶ ಏನು ಎನ್ನುವುದರ ಕುರಿತು ತನಿಖೆ ನಡೆದಿದೆ ಎಂದು   ಪಾಟ್ನಾದ ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿ ವಿಕಾಸ್‌ ವೈಭವ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT