ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: ಸ್ನೇಹಿತನಿಂದ ಕೃತ್ಯ

Last Updated 22 ಆಗಸ್ಟ್ 2014, 20:07 IST
ಅಕ್ಷರ ಗಾತ್ರ

ಬೆಂಗಳೂರು: ಬಿಹಾರ ಮೂಲದ ಬಿಬಿಎಂ ವಿದ್ಯಾರ್ಥಿನಿ ಮೇಲೆ ಅತ್ಯಾ­ಚಾರ ಎಸಗಿದ ಆರೋಪದ ಮೇಲೆ ವಿಕ್ರಂಸಿಂಗ್‌ (19) ಎಂಬ ನರ್ಸಿಂಗ್‌ ವಿದ್ಯಾರ್ಥಿ­ಯನ್ನು ಕಲಾಸಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ರಾಜಸ್ತಾನ ಮೂಲದ ವಿಕ್ರಂಸಿಂಗ್‌, ಬನಶಂಕರಿಯ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಆತ ಅದೇ ಕಾಲೇ­­ಜಿ­­ನಲ್ಲಿ ಎರಡನೇ ವರ್ಷದ ಬಿಬಿಎಂ ವಿದ್ಯಾರ್ಥಿನಿಯನ್ನು ಆ.17­ರಂದು ಕಲಾಸಿಪಾಳ್ಯದ ವಸತಿಗೃಹಕ್ಕೆ ಕರೆ­ದು­­ಕೊಂಡು ಹೋಗಿ ಅತ್ಯಾಚಾರ ಎಸ­ಗಿ­ದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಲೇಜಿನ ಸಮೀಪವೇ ಪ್ರತ್ಯೇಕ ಪೇಯಿಂಗ್‌ ಗೆಸ್ಟ್‌ ಕಟ್ಟಡಗಳಲ್ಲಿ ವಾಸ­­ವಾ­­ಗಿದ್ದ ಆರೋಪಿ ಮತ್ತು ವಿದ್ಯಾರ್ಥಿನಿ ಫೇಸ್‌­ಬುಕ್‌ ಮೂಲಕ ಪರಸ್ಪರ ಪರಿ­ಚಿತ­­ರಾ­ಗಿದ್ದರು. ಅಲ್ಲದೇ, ನಾಲ್ಕೈದು ಬಾರಿ ಮುಖಾಮುಖಿ ಭೇಟಿ­ಯಾಗಿ­ದ್ದರು ಎಂದು ಪೊಲೀಸರು ಹೇಳಿದ್ದಾರೆ.

ವಿಕ್ರಂಸಿಂಗ್‌, ತನ್ನ ತಂದೆಯು ರಾಜ­ಸ್ತಾನ­ದಿಂದ ವಿಮಾನದಲ್ಲಿ ನಗರಕ್ಕೆ ಬರು­ತ್ತಿ­­ದ್ದಾರೆ. ಅವರನ್ನು ಕೆಂಪೇ­ಗೌಡ ಅಂತರ­ರಾ­ಷ್ಟ್ರೀಯ ವಿಮಾನ ನಿಲ್ದಾ­ಣ­ದಲ್ಲಿ (ಕೆಐ­­­­ಎಎಲ್‌) ಭೇಟಿ ಮಾಡಿಸು­ತ್ತೇ­ನೆಂದು ಸುಳ್ಳು ಹೇಳಿ ವಿದ್ಯಾರ್ಥಿನಿಯನ್ನು ಆ.17­ರಂದು ಬನ­ಶಂಕರಿ ಬಸ್‌ ನಿಲ್ದಾ­ಣಕ್ಕೆ ಕರೆಸಿ­ಕೊಂಡಿದ್ದ. ಬಳಿಕ ತಂದೆಯ ವಾಸ್ತ­­­­­­­ವ್ಯಕ್ಕೆ ಕೊಠಡಿ ಕಾಯ್ದಿರಿಸಬೇಕೆಂದು ನಂಬಿಸಿ ವಿದ್ಯಾರ್ಥಿನಿಯನ್ನು ವಸತಿಗೃಹಕ್ಕೆ ಕರೆ­­ದೊಯ್ದು ಈ ದುಷ್ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿ, ವಿದ್ಯಾರ್ಥಿನಿ ತನ್ನ ಸಂಬಂಧಿ ಎಂದು ವಸತಿಗೃಹದ ಸಿಬ್ಬಂ­ದಿಗೆ ಸುಳ್ಳು ಹೇಳಿ ಕೊಠಡಿ ಬಾಡಿಗೆಗೆ ಪಡೆ­ದಿದ್ದ. ಘಟನೆ ನಂತರ ಅತ್ಯಾಚಾರದ ಸಂಗತಿ­ಯನ್ನು ಯಾರಿಗೂ ತಿಳಿಸಿದಂತೆ ಆತ ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ್ದ. ವಿದ್ಯಾ­­ರ್ಥಿನಿ ಆ.18ರಂದು ನೀಡಿದ ದೂರು ಆಧರಿಸಿ ಆತನನ್ನು ಬಂಧಿಸಿ ಪರ­­ಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳು­­ಹಿಸಲಾಯಿತು ಎಂದು ಹಿರಿಯ ಅಧಿ­ಕಾರಿ­ಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT