ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಕ್ಕಿಂಗ್ ವ್ಯವಸ್ಥೆ ಉನ್ನತಿಕರಣಕ್ಕೆ ಆದ್ಯತೆ

Last Updated 8 ಜುಲೈ 2014, 14:11 IST
ಅಕ್ಷರ ಗಾತ್ರ

ರೈಲ್ವೆ ಟಿಕೆಟ್ ವ್ಯವಸ್ಥೆಯನ್ನು ಪರಿಷ್ಕರಣೆ. ಪ್ರತಿ ನಿಮಿಷಕ್ಕೆ 7 ಸಾವಿರ ಟಿಕೆಟ್ ಪಡೆಯಲು ಅನುಕೂಲವಾಗುವಂತೆ ಬುಕ್ಕಿಂಗ್ ವ್ಯವಸ್ಥೆ ಸಜ್ಜುಗೊಳಿಸಲು ರೂಪುರೇಷೆ ಸೇರಿದಂತೆ ಹಲವು ವಿಷಯಗಳಿಗೆ ರೈಲ್ವೆ ಬಜೆಟ್ ನಲ್ಲಿ ಆದ್ಯತೆ ನೀಡಲಾಗಿ

ಕ್ಷಣಕ್ಷಣದ ಮಾಹಿತಿ...

01:19pm :  ಹೊಸ ರೈಲುಗಳು: 8 ಪ್ಯಾಸೆಂಜರ್, 5 ಜನಸಾಧಾರಣ, 5 ಪ್ರೀಮಿಯಂ, 6 ಎಸಿ ಹಾಗೂ 27 ಎಕ್ಸ್ ಪ್ರೆಸ್


01:13pm : ಸದಾನಂದಗೌಡ ಅವರು ನೂತನ ರೈಲುಗಳನ್ನು ಪ್ರಕಟಿಸುತ್ತಿದಂತೆ ವಿರೋಧಪಕ್ಷಗಳ ಸದಸ್ಯರಿಂದ ಗದ್ದಲ... ಮಂಕುತ್ತಿಮ್ಮನ ಕಗ್ಗದ ಸಾಲುಗಳನ್ನು ಉಲ್ಲೇಖಿಸಿದ ರೈಲ್ವೆ ಸಚಿವ..

01:08pm : ಹತ್ತು ಪ್ರಮುಖ ನಿಲ್ದಾಣಗಳನ್ನು ಅಂತರರಾಷ್ಟ್ರೀಯ ದರ್ಜೆಯ ಮಟ್ಟದಲ್ಲಿ ಅಭಿವೃದ್ಧಿಗೆ ಚಿಂತನೆ.. ಪ್ರಮುಖ ನಿಲ್ದಾಣಗಳಲ್ಲಿ ಆಹಾರ ಮಳಿಗೆ ನಿರ್ಮಾಣ.. ಎಸ್ಎಂಎಸ್ ಮೂಲಕವೂ ಆಹಾರ ಬುಕ್ಕಿಂಗ್ ಸೌಲಭ್ಯ ನೀಡಲು ಚಿಂತನೆ

01:01pm : ಸರಕು ಸಾಗಣೆಗೆ ಆದ್ಯತೆ.. ಹಾಲು ಸಾಗಣೆಗೆ ವಿಶೇಷ ಟ್ಯಾಂಕರ್ ಗಳು...ಹಣ್ಣು ಹಾಗೂ ತರಕಾರಿ ಸಾಗಣೆಗೂ ಎಸಿ ಸಂಗ್ರಹಣದಲ್ಲಿ ಸ್ಥಳಾವಕಾಶ.. ಸರಕು ಸಂಗ್ರಹಣೆಗೆ ...ಆಧುನಿಕ ಗೋದಾಮುಗಳ ನಿರ್ಮಾಣ

12:58pm : ಮಾನವ ರಹಿತ ಲೆವೆಲ್ ಕ್ರಾಸಿಂಗ್ ಗಳ ನಿರ್ಮಾಣಕ್ಕೆ 1780 ಕೋಟಿ ರೂಪಾಯಿ.

12:57pm : ಮುಂದಿನ ಐದು ವರ್ಷಗಳಲ್ಲಿ ರೈಲ್ವೆ ಕಚೇರಿಗಳಲ್ಲಿ ಕಾಗದ ರಹಿತ ಸೇವೆ. A1 ನಿಲ್ದಾಣಗಳಲ್ಲಿ ವೈಫೈ ಸೇವೆ 

12:53pm : ಮೆಟ್ರೋ ನಗರಗಳ ಮಧ್ಯೆ ವೇಗದೂತ ರೈಲುಗಳಿಗೆ 100 ಕೋಟಿ ರೂಪಾಯಿ

12:50pm : ಮುಂಬೈ -ಅಹಮದಾಬಾದ್ ನಡುವೆ ಮೊದಲ ಬುಲೆಟ್ ರೈಲು

12:49pm : 4 ಸಾವಿರ ಮಹಿಳಾ ಕಾನ್ ಸ್ಟೇಬಲ್ ಗಳನ್ನು ನೇಮಿಸಿಕೊಳ್ಳಲು ಚಿಂತನೆ. ಸುರಕ್ಷತೆ ದೃಷ್ಟಿಯಿಂದ ಅಲ್ಟ್ರಾಸೋನಿಕ್ ತಪಾಸಣಾ ಘಟಕ ಅಳವಡಿಕೆ.

12:47pm : ರೈಲ್ವೆ ಟಿಕೆಟ್ ವ್ಯವಸ್ಥೆಯನ್ನು ಪರಿಷ್ಕರಣೆ. ಪ್ರತಿ ನಿಮಿಷಕ್ಕೆ 7 ಸಾವಿರ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಸಜ್ಜುಗೊಳಿಸಲು ಯೋಜನೆ. ಸದ್ಯ ಪ್ರತಿ ನಿಮಿಷಕ್ಕೆ 2 ಸಾವಿರ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಇದೆ.

12:42pm : ಆಹಾರದ ಗುಣಮಟ್ಟ ಹಾಗೂ ಸ್ವಚ್ಛತೆಯ ನಿಗಾ ವಹಿಸಲು ಸಿಸಿಟಿವಿ ಅಳವಡಿಕೆ.

12:41pm : 2014-15ನೇ ಸಾಲಿನ ರೈಲ್ವೆ ಬಜೆಟ್ ಗಾತ್ರ 47650 ಕೋಟಿ ರೂಪಾಯಿ. ಸರಕು ಸಾಗಣೆ ದರದಲ್ಲಿ ಶೇ 4.9 ಹಾಗೂ ಪ್ರಯಾಣಿಕರ ದರ ಶೇ 2 ರಷ್ಟು ಅಭಿವೃದ್ಧಿಯ ಗುರಿ.

12:32pm : ಚತುಷ್ಕೋನ ಮಾರ್ಗಗಳ ಜಾಲ ನಿರ್ಮಾಣಕ್ಕೆ 9 ಲಕ್ಷ ಕೋಟಿ ರೂಪಾಯಿ ಅಗತ್ಯವಿದೆ.

12:31pm : ಇತ್ತೀಚೆಗೆ ಮಾಡಲಾದ ದರ ಏರಿಕೆಯಿಂದ ಹೆಚ್ಚುವರಿಯಾಗಿ ಇಲಾಖೆಗೆ 8 ಸಾವಿರ ಕೋಟಿ ರೂಪಾಯಿ ಆದಾಯ ತರಲಿದೆ.

12:29pm : ರೈಲ್ವೆ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಸಂಪುಟದ ಅನುಮತಿ ಕೋರಿದ ಸದಾನಂದಗೌಡ

12:28pm : ಕಳೆದ 10 ವರ್ಷಗಳಲ್ಲಿ ಅದಕ್ಷತೆಯ ಫಲವಾಗಿ ಭಾರತೀಯ ರೈಲ್ವೆ ಸೊರಗಿದೆ. 30 ವರ್ಷಗಳಲ್ಲಿ ಘೋಷಣೆ ಮಾಡಲಾದ 676 ಯೋಜನೆಗಳ ಪೈಕಿ ಇನ್ನೂ 356 ಯೋಜನೆಗಳು ಅಪೂರ್ಣವಾಗಿವೆ. 4 ಯೋಜನೆಗಳು ಒಂದಿಲ್ಲ ಒಂದು ಕಾರಣಕ್ಕಾಗಿ 30 ವರ್ಷಗಳಿಂದ ಪೂರ್ಣಗೊಂಡಿಲ್ಲ.

12:22pm : ಪ್ರತಿ ಪ್ರಯಾಣಿಕ ಪ್ರತಿ ಕಿ.ಮೀ ಪ್ರಯಾಣದ ನಷ್ಟ 10 ಪೈಸೆಯಿಂದ ಇದೀಗ 23ಕ್ಕೆ ಹೆಚ್ಚಳ. ಸದ್ಯ ಚಾಲ್ತಿಯಿರುವ ಯೋಜನೆಗಳ ವೆಚ್ಚ ನಿರ್ವಹಣೆಗೆ ಮುಂದಿನ ಹತ್ತು ವರ್ಷಗಳಲ್ಲಿ 5 ಲಕ್ಷ ಕೋಟಿ ರೂಪಾಯಿ ಅಗತ್ಯವಿದೆ.

12:22pm :  ದ್ವಿಪಥ ಹಾಗೂ ತ್ರಿಪಥ ಮಾರ್ಗಗಳಲ್ಲಿನ ಹೂಡಿಕೆ ಇಲಾಖೆಗೆ ಆದಾಯ ತರುತ್ತದೆ. ಆದರೆ ಹೊಸ ಮಾರ್ಗಗಳಲ್ಲಿ ಹೆಚ್ಚಿನ ಹೂಡಿಕೆಯಿಂದ ನಷ್ಟ ತರಬಲ್ಲದು.

12:21pm : ಒಂದು ರೂಪಾಯಿಯಲ್ಲಿ 94 ಪೈಸೆಗಳಷ್ಟು ಖರ್ಚಿದ್ದು, ಕೇವಲ ಆರು ಪೈಸೆ ಆದಾಯವಿದೆ.

12:18pm : ದರ ನೀತಿ ಈವರೆಗೂ ತರ್ಕಹೀನವಾಗಿತ್ತು.

12:14pm :  ಭಾರತೀಯ ರೈಲ್ವೆಯನ್ನು ವಿಶ್ವದ ಅತಿದೊಡ್ಡ ಸರಕು ಸಾಗಣೆ ಮಾಧ್ಯಮವಾಗಿಸುವ ಗುರಿ

12:08pm : ಲೋಸಕಭೆಯಲ್ಲಿ ಬಜೆಟ್‌ ಭಾಷಣ ಆರಂಭಿಸಿದ ಸದಾನಂದಗೌಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT