ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ಆರು ಡಿಸಿಪಿಗಳ ವರ್ಗ

ಪಟ್ಟಿಯಲ್ಲಿ 29 ಐಪಿಎಸ್‌, ಐವರು ಐಎಎಸ್‌
Last Updated 31 ಜುಲೈ 2014, 20:39 IST
ಅಕ್ಷರ ಗಾತ್ರ

ಬೆಂಗಳೂರು: ಸರಣಿ ಅತ್ಯಾಚಾರ ಪ್ರಕರಣಗಳಿಂದ ಸಾರ್ವಜನಿಕರ ಟೀಕೆಗೆ ಗುರಿಯಾಗಿದ್ದ ಬೆಂಗಳೂರು ನಗರ ಪೊಲೀಸ್‌ ವಿಭಾಗದಲ್ಲಿ ಸರ್ಕಾರ ವ್ಯಾಪಕ ಬದಲಾವಣೆ ಮಾಡಿದೆ. ನಗರದ ಪೂರ್ವ ವಿಭಾಗದ ಕಾನೂನು ಸುವ್ಯವಸ್ಥೆ ಜಂಟಿ ಪೊಲೀಸ್‌ ಕಮಿಷನರ್‌, ಆರು ಡಿ.ಸಿ.ಪಿ.ಗಳು ಸೇರಿದಂತೆ 29 ಐಪಿಎಸ್‌ ಅಧಿಕಾರಿಗಳನ್ನು ಗುರುವಾರ ವರ್ಗಾಯಿಸಲಾಗಿದೆ.

ಇದಲ್ಲದೆ ಐವರು ಐ.ಎ.ಎಸ್‌ ಅಧಿಕಾರಿಗಳನ್ನೂ ವರ್ಗಾಯಿಸಲಾಗಿದೆ. ಡಿಸಿಪಿಗಳಾಗಿದ್ದ ಟಿ.ಡಿ.­ಪವಾರ್‌, ಬಿ.ಆರ್‌. ರವಿಕಾಂತೇಗೌಡ

ಮತ್ತು ಎಂ.ಮುತ್ತು­ರಾಯ ಅವರನ್ನು ಬೇರೆ ಜಿಲ್ಲೆಗಳಿಗೆ ಹಾಗೂ ಇತರ ಮೂವರು ಡಿ.ಸಿ.ಪಿಗಳನ್ನು ನಗರದ ಬೇರೆ ವಿಭಾಗಗಳಿಗೆ ವರ್ಗ ಮಾಡಲಾಗಿದೆ.

ಅನೇಕ ರಾಜಕಾರಣಿಗಳು, ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಮೊಕದ್ದಮೆ ದಾಖಲಿಸಿದ್ದ ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್‌) ಮುಖ್ಯಸ್ಥ ಆರ್‌.ಪಿ. ಶರ್ಮಾ ಅವರನ್ನೂ ವರ್ಗಾಯಿಸಲಾಗಿದೆ.

ಐಎಎಸ್‌ ಅಧಿಕಾರಿಗಳು: ಜಿ.ಲತಾ ಕೃಷ್ಣರಾವ್‌– ಅಭಿವೃದ್ಧಿ ಆಯುಕ್ತರು. ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ರವಿ ಕುಮಾರ್‌ ಅವರಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಪಿ.ಮಣಿವಣ್ಣನ್‌– ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ. ಡಾ.ರಾಮೇಗೌಡ– ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು. ಎಸ್‌.ಜಿಯಾವುಲ್ಲಾ– ಆಯುಕ್ತರು, ಹಿಂದುಳಿದ ವರ್ಗಗಳ ಇಲಾಖೆ. ಐಪಿಎಸ್‌ ಅಧಿಕಾರಿಗಳು: ಪ್ರವೀಣ್‌ ಸೂದ್‌– ಪ್ರಧಾನ ಕಾರ್ಯದರ್ಶಿ, ಗೃಹ ಇಲಾಖೆ. ಆರ್‌.ಪಿ. ಶರ್ಮ–ಎಡಿಜಿಪಿ, ರೈಲ್ವೆ. ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಎಡಿಜಿಪಿ ಟಿ.ಸುನಿಲ್‌ ಕುಮಾರ್‌ ಅವರಿಗೆ ಬಿಎಂಟಿಎಫ್‌ನ ಹೆಚ್ಚುವರಿ ಹೊಣೆ ವಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT