ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ಮಹಿಳೆಯರತ್ತ ಫೇಸ್‌ಬುಕ್‌

Last Updated 2 ಮೇ 2016, 19:54 IST
ಅಕ್ಷರ ಗಾತ್ರ

‘ಬೂಸ್ಟ್ ಯುವರ್ ಬ್ಯುಸಿನೆಸ್’ ಎನ್ನುವುದು ಫೇಸ್‌ಬುಕ್‌ ತಂಡ ಮಹಿಳಾ ಉದ್ಯಮಿಗಳಿಗಾಗಿಯೇ ರೂಪಿಸಿರುವ ಅಭಿಯಾನ. ದೇಶದ ಎಲ್ಲಾ ಭಾಗಗಳ ಮಹಿಳೆಯರನ್ನೂ ಗಮನದಲ್ಲಿಟ್ಟುಕೊಂಡು ಇದನ್ನು ರೂಪಿಸಲಾಗಿದೆ.

ದೇಶದ ಎಲ್ಲಾ ನಗರಗಳಲ್ಲಿನ ಮಹಿಳಾ ಉದ್ಯಮಿಗಳನ್ನು ಫೇಸ್‌ಬುಕ್‌ನತ್ತ ಸೆಳೆಯುವುದು ಇದರ ಉದ್ದೇಶ. ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದ ತಂಡ, ಉದ್ಯಮಿಗಳಿಗೆ ಫೇಸ್‌ಬುಕ್‌ ಎಷ್ಟೆಲ್ಲ ಪ್ರಯೋಜನಗಳನ್ನು ಹೊಂದಿದೆ ಎಂದು ಮನವರಿಕೆ ಮಾಡಿತ್ತು.

ಉತ್ತರ ಪ್ರದೇಶದಲ್ಲಿ ಫೇಸ್‌ಬುಕ್‌ನ ‘ಬೂಸ್ಟ್ ಯುವರ್ ಬ್ಯುಸಿನೆಸ್’ ಅಭಿಯಾನ ಮೂರು ಸಾವಿರಕ್ಕೂ ಹೆಚ್ಚು ವ್ಯಾಪಾರಿಗಳಿಗೆ ತರಬೇತಿ ನೀಡಿದೆ. ಇದರ ಬೆನ್ನಲ್ಲೇ ಇದೀಗ ಈ ಅಭಿಯಾನ ಉದ್ಯಾನನಗರಿ ಬೆಂಗಳೂರನ್ನು ತಲುಪಿದೆ.  ಇಲ್ಲಿ ಸುಮಾರು 525 ಮಹಿಳಾ ಉದ್ಯಮಿಗಳು ಈ ಅಭಿಯಾನದ ಭಾಗವಾಗಿದ್ದಾರೆ.

ಸರಣಿ ಕಾರ್ಯಾಗಾರಗಳ ಮೂಲಕ ಮಹತ್ವಾಕಾಂಕ್ಷೆ ಹೊಂದಿದ ಮತ್ತು ಈಗಾಗಾಲೇ ಉದ್ಯಮಿಗಳಾಗಿರುವ ಮಹಿಳೆಯರಿಗೆ ಹಲವು ವಿಧದ ತರಬೇತಿ, ಸಲಹೆ ಸೂಚನೆಗಳನ್ನು ನೀಡಲಾಗುತ್ತದೆ. ಆನ್‌ಲೈನ್ ಸಂಪನ್ಮೂಲಗಳ ಮೂಲಕ ವ್ಯವಹಾರ ಜ್ಞಾನ ವೃದ್ಧಿ, ಕೌಶಲಾಭಿವೃದ್ಧಿ, ವ್ಯವಹಾರಗಳ ಕೊಂಡಿಗಳು, ವ್ಯವಹಾರ ಪ್ರಗತಿಗೆ ಅಗತ್ಯವಾದ ತಂತ್ರಜ್ಞಾನಗಳ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ. ಉದ್ಯಮಿಗಳು, ನಾಗರಿಕ ಸೇವಾ ಸಂಘಗಳು, ಸ್ವಯಂ ಸೇವಾ ಸಂಸ್ಥೆಗಳು ಮತ್ತು ಸಾರ್ವಜನಿಕ ವಲಯಗಳ ಸಹಯೋಗದಲ್ಲಿ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ.

ಈ ಬಗ್ಗೆ ಮಾತನಾಡಿದ ಫೇಸ್‌ಬುಕ್‌ನ ಆರ್ಥಿಕ ಪ್ರಗತಿಯ ಉಪಕ್ರಮಗಳ ವಿಭಾಗದ ಮುಖ್ಯಸ್ಥ  ರಿತೇಶ್ ಮೆಹ್ತಾ ‘ಸಣ್ಣ ಮತ್ತು ಮಧ್ಯಮ ವ್ಯವಹಾರಗಳಿಗೆ ಸಂಬಂಧಿಸಿದಂತೆ ಸುಮಾರು ಐದು ಕೋಟಿ ಫೇಸ್‌ಬುಕ್ ಪೇಜ್‌ಗಳಿವೆ.

ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಹೊಸದಾಗಿ ಆರಂಭವಾದ ಮಹಿಳಾ ಉದ್ಯಮಗಳ ಫೇಸ್‌ಬುಕ್ ಪೇಜ್‌ಗಳ ಸಂಖ್ಯೆ ಆರು ಪಟ್ಟು ಹೆಚ್ಚಳವಾಗಿದೆ. ಈ ಪೇಜ್‌ಗಳ ಮೂಲಕ ಮಹಿಳಾ ಉದ್ಯಮಿಗಳು ಜಾಗತಿಕ ಮಟ್ಟದಲ್ಲಿ ಇರುವ ಗ್ರಾಹಕರನ್ನು ಸಂಪರ್ಕಿಸಲು ಸಾಧ್ಯವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT