ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ನಗರದಲ್ಲಿ ಇಂದು

Last Updated 20 ಡಿಸೆಂಬರ್ 2014, 20:04 IST
ಅಕ್ಷರ ಗಾತ್ರ

ದೇಸಿ ಧರ್ಮದರ್ಶಿ ಸಂಸ್ಥೆ: ಗಾಂಧಿ ಭವನ, ಕುಮಾರ ಪಾರ್ಕ್‌ ಈಸ್ಟ್‌, ಚಿತ್ರಕಲಾ ಪರಿಷತ್ತಿನ ಹತ್ತಿರ. ‘2012–13ನೇ ಸಾಲಿನ ದೇಸಿ ರಾಷ್ಟ್ರೀಯ ಕೈಮಗ್ಗ ಪ್ರಶಸ್ತಿ ಪ್ರದಾನ ಸಮಾರಂಭ’. ಪ್ರಶಸ್ತಿ ಪ್ರದಾನ– ನಿರ್ದೇಶಕ ಶ್ಯಾಮ್‌ ಬೆನಗಲ್‌, ಅಧ್ಯಕ್ಷತೆ– ಕವಿ ಅಜಯ್‌ ಕುಮಾರ್‌ ಸಿಂಹ, ಪ್ರಶಸ್ತಿ ಪುರಸ್ಕೃತರು– ಸಂಗಪ್ಪ ಬಸಪ್ಪ ಮಂಟೆ, ಶಿವಶಂಕರ ಈಶ್ವರಪ್ಪ ಮೂಡಲಗಿ, ಜಗದಾ ರಾಜಪ್ಪ, ಎಂ.ವಿ. ಚಂದ್ರಶೇಖರ್‌, ಯು. ರವಿಕಿರಣ್‌. ಬೆಳಿಗ್ಗೆ 10.30.

ಪ್ರಿಯದರ್ಶನ ಸಾಂಸ್ಕೃತಿಕ ವೇದಿಕೆ, ಭೈರಪ್ಪ ಅಭಿಮಾನಿ ಬಳಗ: ಆರ್‌.ವಿ.ಟೀಚರ್ಸ್ ಕಾಲೇಜ್ ಸಭಾಂಗಣ, ಜಯನಗರ 2ನೇ ಬ್ಲಾಕ್. ಎಸ್.ಎಲ್.ಭೈರಪ್ಪ ಅವರ  ಕಾದಂಬರಿ ‘ಯಾನ’ ವಿಚಾರ ಸಂಕಿರಣ. ಬೆಳಿಗ್ಗೆ 10ಕ್ಕೆ ಉದ್ಘಾಟನೆ–ಸಾಹಿತಿ ಪ್ರೊ.ಜಿ.ವೆಂಕಟಸುಬ್ಬಯ್ಯ. ಮೂರು ಪುಸ್ತಕಗಳ ಲೋಕಾರ್ಪಣೆ–‘ಭೈರಪ್ಪನವರ ಸೂಕ್ತಿ ಸಂಪದ’, ‘ಭೈರಪ್ಪನವರ ಸಾಹಿತ್ಯ: ಮರಾಠಿ ವಿಮರ್ಶೆ’, ‘ಖಿಲ’ (ಕಾದಂಬರಿ)–ಶಶಿಧರ್ ವಿಶ್ವಾಮಿತ್ರ. ಬೆಳಿಗ್ಗೆ 11ಕ್ಕೆ ಪ್ರಬಂಧ ಮಂಡನೆ. ಶತಾವಧಾನಿ ಆರ್.ಗಣೇಶ್–‘ಯಾನ’ದಲ್ಲಿ ಅಧ್ಯಾತ್ಮ ತತ್ತ್ವ’, ಪ್ರಧಾನ ಗುರುದತ್ತ–ವೈಜ್ಞಾನಿಕ ಕಾದಂಬರಿಯಾಗಿ ‘ಯಾನ’, ದಿವಾಕರ ಹೆಗಡೆ–ವಿಜ್ಞಾನ ಯಾನ, ಎಸ್.ಸತೀಶ್–ವೈಜ್ಞಾನಿಕ ಚೌಕಟ್ಟಿನಲ್ಲಿ ಮಾನವ ಸ್ವಭಾವ ಶೋಧ, ಕೆ.ಸಿ.ರಘು–ಯಾನದಲ್ಲಿ ವಿಜ್ಞಾನ ಕೌತುಕ. ಮಧ್ಯಾಹ್ನ 3ರ ಪ್ರಬಂಧ ಮಂಡನೆಯಲ್ಲಿ ಎಸ್.ರಾಮಸ್ವಾಮಿ– ಬಾಹ್ಯಾಂತರಿಕ್ಷದಲ್ಲಿ ಆಂತರಿಕಯಾನ, ಸಂದೀಪ ಬಾಲಕೃಷ್ಣ–ವಿಜ್ಞಾನ ತಂದ ಸಾಂಸ್ಕೃತಿಕ ಪಲ್ಲಟ ಮತ್ತು ನೈತಿಕ ಬದಲಾವಣೆ, ಅಜಕ್ಕಳ ಗಿರೀಶ್ ಭಟ್–‘ಯಾನ’ದಲ್ಲಿ ಕಥನ ತಂತ್ರ. ಸಂಜೆ 4.15ಕ್ಕೆ ಸಮಾರೋಪ–ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಗಂಗಾವತಿ ಪ್ರಾಣೇಶ್ ಅವರಿಂದ ‘ನನ್ನ ಪ್ರೀತಿಯ ಲೇಖಕ ಎಸ್.ಎಲ್.ಭೈರಪ್ಪ’, ಎಸ್.ಆರ್.ರಾಮಸ್ವಾಮಿ ಅವರಿಂದ ಅಧ್ಯಕ್ಷೀಯ ನುಡಿಗಳು. ಪ್ರಶ್ನೋತ್ತರ–ಎಸ್.ಎಲ್.ಭೈರಪ್ಪ.

ಅಂಕಿತ ಪ್ರಕಾಶನ: ‘ವಾಡಿಯಾ ಸಭಾಂಗಣ’. ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ವರ್ಲ್ಡ್‌ ಕಲ್ಚರ್‌, ನಂ. 6, ಬಿ.ಪಿ.ವಾಡಿಯಾ ರಸ್ತೆ, ಬಸವನಗುಡಿ. ಪುಸ್ತಕಗಳ ಬಿಡುಗಡೆ ಸಮಾರಂಭ. ಬಿಡುಗಡೆಯಾಗಲಿರುವ ಪುಸ್ತಕಗಳು– ಜೋಗಿ ಅವರ ‘ಮಸಾಲೆದೋಸೆಗೆ ಕೆಂಪು ಚಟ್ನಿ’ (ಅಂಕಣ ಬರಹಗಳು) ಮತ್ತು ‘ಎಲ್ಲಾನೂ ಮಾಡೋದು ಹೊಟ್ಟೆಗಾಗಿ’ (ಅನುಭವ ಕಥನ). ಎಸ್‌. ಸುರೇಂದ್ರನಾಥ್‌ ಅವರ ಕಾದಂಬರಿ ‘ಗಾಳಿಗೆ ಬಿದ್ದ ಚಂದ್ರನ ತುಂಡುಗಳು’. ಸು. ಕೃಷ್ಣ ನೆಲ್ಲಿ ಕನ್ನಡಕ್ಕೆ ಅನುವಾದಿಸಿರುವ ಜಾನ್‌ ಸ್ಟೆನ್‌ಬೆಕ್‌ ಅವರ ‘ದಿ ಮೂನ್‌ ಈಸ್‌ ಡೌನ್‌’ ಕಾದಂಬರಿ. ಪುಸ್ತಕಗಳ ಬಿಡುಗಡೆ– ನಟ ಪ್ರಕಾಶ್‌ ರೈ, ಅತಿಥಿಗಳು– ಸಾಹಿತಿಗಳಾದ ಶ್ರೀನಿವಾಸ ವೈದ್ಯ ಮತ್ತು ಎಂ.ಎಸ್. ಶ್ರೀರಾಮ್‌. ಉಪಸ್ಥಿತಿ– ಎಸ್‌. ಸುರೇಂದ್ರನಾಥ್‌ ಮತ್ತು ಗಿರೀಶ್‌ ರಾವ್‌. ಬೆಳಿಗ್ಗೆ 10.30.

ಆದರ್ಶ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್: ಗಾಯನ ಸಮಾಜ, ಕೆ.ಆರ್.ರಸ್ತೆ. ‘ಡಾ.ಸಿ.ಅಶ್ವತ್ಥ್–75’ ಗೀತಯಾನ. ಗಾಯಕ ವೈ.ಕೆ.ಮುದ್ದುಕೃಷ್ಣ ಅವರಿಗೆ ‘ಸಿ.ಅಶ್ವತ್ಥ್ ಪ್ರಶಸ್ತಿ’ ಪ್ರದಾನ–ಶಾಸಕ ಎಲ್.ಎ.ರವಿಸುಬ್ರಹ್ಮಣ್ಯ. ಸಾನ್ನಿಧ್ಯ–ಶಾಂತವೀರ ಸ್ವಾಮೀಜಿ, ಉದ್ಘಾಟನೆ–ಬಿ.ಕೆ.ಚಂದ್ರಶೇಖರ್, ಅಧ್ಯಕ್ಷತೆ–ಗಾಯನ ಸಮಾಜದ ಅಧ್ಯಕ್ಷ ಎಂ.ಆರ್.ವಿ.ಪ್ರಸಾದ್, ಅತಿಥಿ– ವಿಧಾನ ಪರಿಷತ್‌ ಸದಸ್ಯ ಟಿ.ಎ.ಶರವಣ. ನುಡಿ ನಮನ–ಗಾಯಕ ಶ್ರೀನಿವಾಸ ಉಡುಪ, ವಿಮರ್ಶಕ ಸುರೇಶ್ಚಂದ್ರ. ಸಂಜೆ 6.30.

ಐ ಸೈಕಲ್‌ ಡಾಟ್‌ ಇನ್‌: ಶಾಲಿನಿ ಮೈದಾನ, ಜಯನಗರ. ‘ಸೈಕಲಿಸ್ಟ್ಸ್‌ ಡೇ’. ಮುಖ್ಯ ಅತಿಥಿಗಳು: ಶಾಸಕ ವಿಜಯ ಕುಮಾರ್‌ ಹಾಗೂ ಪಾಲಿಕೆ ಸದಸ್ಯ ಬಿ.ಸೋಮಶೇಖರ್‌. ಬೆಳಿಗ್ಗೆ 9.

ರಾಜಾಜಿನಗರ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ: ವಿವೇಕಾನಂದ ಆಟದ ಮೈದಾನ, ಶಂಕರಮಠ ವೃತ್ತ. ‘13ನೇ ವರ್ಷದ ವಾಜಪೇಯಿ ಕಪ್‌’. ಉದ್ಘಾಟನೆ: ಕೇಂದ್ರ ಸಚಿವ ಅನಂತಕುಮಾರ್‌. ದೀಪ ಬೆಳಗಿಸುವವರು: ಉಪಮೇಯರ್‌ ಆರ್.ರಂಗಣ್ಣ. ವಿಶೇಷ ಆಹ್ವಾನಿತರು: ವಿಧಾನ ಪರಿಷತ್ತು ಸದಸ್ಯ ಅಶ್ವತ್ಥನಾರಾಯಣ, ಬಿಬಿಎಂಪಿ ಆಯುಕ್ತ ಲಕ್ಷ್ಮೀನಾರಾಯಣ, ಪಾಲಿಕೆ ಸದಸ್ಯರಾದ ಎಸ್‌.ಕೆ.ನಟರಾಜ್‌, ಕಟ್ಟೆ ಸತ್ಯನಾರಾಯಣ, ಸದಾಶಿವ, ಕರ್ನಾಟಕ ವಾಲಿಬಾಲ್‌ ಅಸೋಸಿಯೇಶನ್‌ನ ಅಧ್ಯಕ್ಷ ಬೆಟ್ಟೆಗೌಡ. ಸಂಜೆ 5.

ಭಾರತೀಯ ಕರ್ನಾಟಕ ಸಂಘ: ಕಪಿಲಾ ಸಭಾಂಗಣ, ಇಂದಿರಾನಗರ ಕ್ಲಬ್, 8ನೇ ಮುಖ್ಯರಸ್ತೆ, ಎಚ್.ಎ.ಎಲ್. 2ನೇ ಹಂತ. ಡಾ.ಟಿ.ವಿ.ನೀಲಮ್ಮನವರು ರಚಿಸಿರುವ ಕವನ ಸಂಕಲನ ‘ಚಂದ್ರಮ–ಚೆಲುವು’ ಬಿಡುಗಡೆ–ಲೇಖಕಿ ಕೆ.ಆರ್.ಸಂಧ್ಯಾರೆಡ್ಡಿ. ಸಾಯಿ ತೇಜಸ್ ಮತ್ತು ತಂಡದವರಿಂದ ಸುಗಮ ಸಂಗೀತ. ಅಧ್ಯಕ್ಷತೆ–ಎಂ.ಬಿ.ನಂಜಪ್ಪ. ಉಪಸ್ಥಿತಿ–ಡಾ.ಟಿ.ವಿ.ನೀಲಮ್ಮ. ಸಂಜೆ 4.

ಸಕ್ಷಮ: ಶೇಷಾದ್ರಿಪುರ ಕಾಲೇಜು ಸಭಾಂಗಣ, ನಾಗಪ್ಪ ಬೀದಿ, ನೆಹರೂ ಪಾರ್ಕ್ ಹತ್ತಿರ, ಶೇಷಾದ್ರಿಪುರ. ಪಂಡಿತ್ ಪುಟ್ಟರಾಜ ಗವಾಯಿ ಮತ್ತು ಯಾದವ್‌ರಾವ್ ಜೋಶಿ ಅವರ ಜನ್ಮಶತಮಾನೋತ್ಸವ ಹಾಗೂ ವಿಶ್ವ ಅಂಗವಿಕಲರ ದಿನಾಚರಣೆ. ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಹಿರಿಯ ಸಾಮಾಜಿಕ ಚೇತನಗಳ ಕುರಿತ ನುಡಿನಮನ ಮತ್ತು ಪುಟ್ಟರಾಜ ಗವಾಯಿಗಳ ಜೀವನ ಕುರಿತ ಸಂಗೀತ ರೂಪಕ ಹಾಗೂ ಸಂಗೀತೋತ್ಸವ. ಬೆಳಿಗ್ಗೆ 10.30ಕ್ಕೆ ಉದ್ಘಾಟನೆ–ಮೇಯರ್ ಎನ್.ಶಾಂತಕುಮಾರಿ. ನುಡಿನಮನ ಕಾರ್ಯಕ್ರಮ. ಅಧ್ಯಕ್ಷತೆ–ಎಂ.ದೊರೆಸ್ವಾಮಿ, ಅತಿಥಿ–ಗಾಯಕ ಎಂ. ವೆಂಕಟೇಶ್ ಕುಮಾರ್, ಪ.ರಾ.ಕೃಷ್ಣಮೂರ್ತಿ, ಜಿ.ಎಸ್.ನಿಲುಗಲ್. ಮಧ್ಯಾಹ್ನ 2.30ಕ್ಕೆ ಸಂಗೀತ ರೂಪಕ. ಪರಿಕಲ್ಪನೆ–ಚಿತ್ರ ಸಾಹಿತಿ ಗೋಟೂರಿ. ಪ್ರಸ್ತುತಿ–ಗೋಟೂರಿ ಕಲಾ ತಂಡ. ಸಂಗೀತ–ಆಶಾ ಜಗದೀಶ್. ಮಧ್ಯಾಹ್ನ 3.30ಕ್ಕೆ ಸ್ವರಸಕ್ಷಮ ಸಂಗೀತ ಕಾರ್ಯಕ್ರಮ. ಗಾಯಕ ಎಂ.ವೆಂಕಟೇಶ್ ಕುಮಾರ್ ಅವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ. ಹಂಸಿಣಿ ನಾಗೇಂದ್ರ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ. ಗೀತ ನಮನ–ಆಶಾ ಜಗದೀಶ್, ದೇವರೆಡ್ಡಿ.

ಕಲ್ಲಹಳ್ಳಿ ಶ್ರೀ ಶ್ರೀನಿವಾಸಸ್ವಾಮಿ ಸೇವಾ ಸಮಿತಿ: ಶ್ರೀನಿಧಿ ಕನ್ವೆನ್‌ಷನನ್‌ ಸೆಂಟರ್‌, 1ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಮೈಸೂರು ಡ್ರೈಕ್ಲೀನರ್‌್ಸ ಎದುರು, ಚಾಮರಾಜಪೇಟೆ. ‘2015ರ ನೂತನ ವರ್ಷದ ವಿನೂತನ ಕ್ಯಾಲೆಂಡರ್‌ ಬಿಡುಗಡೆ ಸಮಾರಂಭ’. ಅಧ್ಯಕ್ಷತೆ: ಸಂಸದ ಪಿ.ಸಿ.ಮೋಹನ್‌. ಕ್ಯಾಲೆಂಡರ್‌ ಬಿಡುಗಡೆ: ಕೇಂದ್ರ ಸಚಿವ ಅನಂತಕುಮಾರ್‌. ಮುಖ್ಯ ಅತಿಥಿಗಳು: ವೇಣು ಗೋಪಾಲ ಫ್ಲೋರ್‌ ಮಿಲ್ಸ್‌ ಮಾಲೀಕ ಎಸ್‌.ಎಂ.ಪ್ರಭಾಕರ್‌, ವಾಸ್ತುಶಿಲ್ಪಿ ವಿ.ರವೀಂದ್ರ ಕುಮಾರ್‌, ಬಿ.ವಿ.ಗಣೇಶ್‌. ಭಾಷಣ: ಹ.ರ.ನಾಗರಾಜ
ಚಾರ್ಯ. ಬೆಳಿಗ್ಗೆ 11.

ಬಿಪ್ಯಾಕ್‌: ಶ್ರೀ ಚೌಡಪ್ಪ ಗೀತಾಶ್ರಮ, 6ನೇ ಮುಖ್ಯರಸ್ತೆ, 12ನೇ ಅಡ್ಡರಸ್ತೆ, ಕೃಷ್ಣದೇವರಾಯ ರೈಲ್ವೆ ನಿಲ್ದಾಣದ ಪಕ್ಕ, ಬಾಪೂಜಿನಗರ, ಮೈಸೂರು ರಸ್ತೆ. ‘ಸಸಿ ನೆಡುವ ಕಾರ್ಯಕ್ರಮ ಮತ್ತು ಪರಿಸರ ಜಾಗೃತಿ ಅಭಿಯಾನ’. ಅಧ್ಯಕ್ಷತೆ: ಚೌಡಪ್ಪ ಗೀತಾಶ್ರಮದ ಶಿವಾನಂದ ಸರಸ್ಪತಿ ಮಹಾರಾಜ್‌. ವಿಶೇಷ ಆಹ್ವಾನಿತರು: ಸಾಲು ಮರದ ತಿಮ್ಮಕ್ಕ. ಮುಖ್ಯ ಅತಿಥಿ: ಜೆಡಿಎಸ್‌ನ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ಶಾಸಕ ಎಂ.ಕೃಷ್ಣಪ್ಪ, ಮೇಯರ್‌ ಎನ್‌.ಶಾಂತಕುಮಾರಿ, ಉಪಮೇಯರ್‌ ರಂಗಣ್ಣ, ಶಾಸಕ ಗೋಪಾಲಯ್ಯ. ಬಿ ಪ್ಯಾಕ್‌ ವ್ಯವಸ್ಥಾಪಕ ನಿರ್ದೇಶಕಿ ರೇವತಿ ಅಶೋಕ್‌. ಬೆಳಿಗ್ಗೆ 10.

ಭಾರತೀಯ ಜನತಾ ಪಕ್ಷ, ದ ಫಾರ್ವರ್ಡ್‌ ಫೌಂಡೇಶನ್‌: ಬಾಪು ಪ್ರೌಢಶಾಲೆ, ತ್ರಿವೇಣಿ ರಸ್ತೆ, ಯಶವಂತಪುರ ವೃತ್ತದ ಹತ್ತಿರ, ಯಶವಂತಪುರ. 5ನೇ ಬಿಬಿಎಂಪಿ ಪೌರಕಾರ್ಮಿಕರ ಆರೋಗ್ಯ ತಪಾಸಣೆ ಶಿಬಿರ. ಮುಖ್ಯ ಅತಿಥಿ: ಶಾಸಕ ಸಿ.ಎನ್‌.ಅಶ್ವತ್ಥನಾರಾಯಣ. ಬೆಳಿಗ್ಗೆ 8.

ಸ್ವಭಾನು ಸಂಗೀತ ಶಾಲೆ: ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ. ‘9ನೇ ವಾರ್ಷಿಕೋತ್ಸವ ಸ್ವಭಾನುಶ್ರೀ ವಾರ್ಷಿಕ ಪ್ರಶಸ್ತಿ ಪ್ರದಾನ’ ಹಾಗೂ ‘ಸಿ.ಡಿ ಬಿಡುಗಡೆ ಸಮಾರಂಭ’. ಉದ್ಘಾಟನೆ–ಲೇಖಕಿ ಜಯಶ್ರೀ ಅರವಿಂದ್, ಅಧ್ಯಕ್ಷತೆ–ಸಾಹಿತಿ ಎಚ್.ಎಸ್.ಎಂ.ಪ್ರಕಾಶ್, ಅತಿಥಿಗಳು–ಮೈಸೂರಿನ ಡಾ.ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯದ ಕುಲಪತಿ ಡಾ.ಸರ್ವಮಂಗಳ, ಗಾಯಕ ಬಿ.ಎಸ್.ನಾಗರಾಜ್. ಸಂಜೆ 4.

ಜವಾಹರ್‌ಲಾಲ್ ನೆಹರು ತಾರಾಲಯ: ಟಿ.ಚೌಡಯ್ಯ ರಸ್ತೆ, ಹೈ ಗ್ರೌಂಡ್ಸ್. ‘ಸೀಕ್ರೆಟ್ಸ್ ಆಫ್ ದಿ ಸನ್’ ಚಿತ್ರ ಪ್ರದರ್ಶನ. ಅವಧಿ–55 ನಿಮಿಷ. ಅರ್ಹತೆ–ಹತ್ತು ವರ್ಷ ಹಾಗೂ ಮೇಲ್ಪಟ್ಟವರಿಗೆ. ಸಂಜೆ 6.

ಫೋರ್ಟಿಸ್‌: ಸಭಾಂಗಣ, ನೆಲಮಹಡಿ, ಫೋರ್ಟಿಸ್‌ ಆಸ್ಪತ್ರೆಗಳು, ಬನ್ನೇರುಘಟ್ಟ ರಸ್ತೆ. ‘ಸಾಮಾನ್ಯ ಮೂತ್ರನಾಳದ ಸಮಸ್ಯೆಗಳು ಮತ್ತು ಪರಿಹಾರಗಳು’ ವಿಷಯದ ಕುರಿತು ಸಂವಾದ. ಮಾತನಾಡುವವರು: ಡಾ.ಮೋಹನ್‌ ಕೇಶವಮೂರ್ತಿ. ಬೆಳಿಗ್ಗೆ 10.30.

ಕಾವೇರಿ ಸ್ಕೂಲ್‌: ಡಬಲ್‌ ರಸ್ತೆ, ಇಂದಿರಾನಗರ 2ನೇ ಹಂತ. ‘32ನೇ ವಾರ್ಷಿಕ ದಿನ’. ಮುಖ್ಯ ಅತಿಥಿ: ಶಾಸಕ ಎನ್‌.ಎ.ಹ್ಯಾರಿಸ್‌. ಅತಿಥಿ: ಕೊಡವ ಸಮಾಜ ಸಂಘದ ಅಧ್ಯಕ್ಷ ಸಿ.ಎಂ.ಸುಬ್ಬಯ್ಯ. ಸಂಜೆ 4.30. 

ಭಾರತೀಯ ವೈದ್ಯಕೀಯ ಸಂಸ್ಥೆ, ವೈದ್ಯಕೀಯ ಮತ್ತು ಸಂಶೋಧನ ಟ್ರಸ್ಟ್‌, ಭಾರತೀಯ ಹೃದಯ ರೋಗ ತಜ್ಞರ ಸಂಸ್ಥೆ: ಐಎಂಎ ಸಭಾಂಗಣ, ಆಲೂರು ವೆಂಕಟರಾವ್‌ ರಸ್ತೆ, ಟಿಪ್ಪುಸುಲ್ತಾನ್‌ ಅರಮನೆ ಹತ್ತಿರ, ಚಾಮರಾಜಪೇಟೆ. ‘ಸಾರ್ವಜನಿಕ ಆರೋಗ್ಯದ ಬಗ್ಗೆ ವೈದ್ಯಕೀಯ ಉಪನ್ಯಾಸ’. ಉದ್ಘಾಟನೆ: ಐಎಂಎ–ಕೆಎಸ್‌ಬಿ ನಿಯೋಜಿತ ಅಧ್ಯಕ್ಷ ಡಾ.ಜಿ.ಎನ್‌.ಪ್ರಭಾಕರ. ಅಧ್ಯಕ್ಷತೆ: ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷೆ ಡಾ.ಉಮಾ ಶೇಷಗಿರಿ. ಉಪನ್ಯಾಸ: ಹೃದಯ ರೋಗ ತಜ್ಞ ಡಾ.ರಾಜ್‌ಪಾಲ್‌. ವಿಷಯ: ಹೃದಯ ವೈಫಲ್ಯದ ಇತ್ತೀಚಿನ ರೋಗ ವಿಧಾನ ಹಾಗೂ ಚಿಕಿತ್ಸೆ. ಸಂಜೆ 6.

ಚಿತ್ಪಾವನ ಸಮಾಜ: ಶ್ರೀ ಕೃಷ್ಣ ಧಾರ್ಮಿಕ ಸಭಾಂಗಣ, ನಂ.24, 4ನೇ ಅಡ್ಡರಸ್ತೆ, ಪಾಪಯ್ಯ ಗಾರ್ಡನ್‌, ಬನಶಂಕರಿ 3ನೇ ಹಂತ. ‘ವಾರ್ಷಿಕ ಸ್ನೇಹ ಸಮ್ಮಿಲನ ಮತ್ತು ಪ್ರತಿಭಾ ಪುರಸ್ಕಾರ–2014’. ಮುಖ್ಯಅತಿಥಿ: ಚಲನಚಿತ್ರ ನಿರ್ದೇಶಕ ಕೆ.ಎಸ್.ಎಲ್‌.ಸ್ವಾಮಿ. ಸನ್ಮಾನಿತರು: ವಿದುಷಿ ಗುರು ಶ್ಯಾಮಲಾ ಜಿ.ಭಾವೆ, ಸಮಾಜ ಸೇವಕಿ ಸತೀಶ್‌ ಸಹಸ್ರಬುದ್ಧ್ಯೆ, ಉಪಸ್ಥಿತಿ: ಡಿ.ವಿಷ್ಣು ಭಟ್‌ ಡೋಂಗ್ರೆ, ಎಂ.ಗಣಪತಿ ಜೋಷಿ, ಎಂ.ದಿವಾಕರ ಡೋಂಗ್ರೆ. ಬೆಳಿಗ್ಗೆ 11.30.

ಸುರಾನ ಕಾಲೇಜು: ಜಿ.ಸಿ.ಸುರಾನ ಸಭಾಂಗಣ, ತುಮಕೂರು–ಮೈಸೂರು ರಸ್ತೆ, ಕೆಂಗೇರಿ ಉಪನಗರ. ‘ಹಳೆಯ ಸ್ನಾತಕೋತ್ತರ ವಿದ್ಯಾರ್ಥಿಗಳ ಸಮ್ಮಿಲನ 2014’. ಬೆಳಿಗ್ಗೆ 10.30.

ಅಖಿಲ ಕರ್ನಾಟಕ ಸುಗಮ ಸಂಗೀತ ಸಂಸ್ಥೆಗಳ ಒಕ್ಕೂಟ: ನಾದಬ್ರಹ್ಮ ಕಲಾಕೇಂದ್ರ ಸಭಾಂಗಣ, 27/28 ಆನಂದ ನಿಲಯ, ವೇಣುಗೋಪಾಲರೆಡ್ಡಿ ಬಡಾವಣೆ, ಅರಕೆರೆ. ‘ಕಾವ್ಯ–ಸ್ವರ ಸೌರಭ’. ಎಚ್‌.ಕೆ.ನಾರಾಯಣ ಸ್ವರಸಂಯೋಜಿತ ಗೀತೆಗಳ ಗಾಯನ ಮತ್ತು ವ್ಯಾಖ್ಯಾನ. ಪ್ರಸ್ತಾವನೆ: ಆನಂದ ಮಾದಲಗೆರೆ. ಕವಿತೆಗಳ ವ್ಯಾಖ್ಯಾನ: ಆಕಾಶವಾಣಿ ಬೆಂಗಳೂರಿನ ಸಂಗೀತ ವಿಭಾಗದ ಮುಖ್ಯಸ್ಥ ಡಾ.ಎನ್‌.ರಘು. ಕವಿತೆ ಗಾಯನ: ಕಸ್ತೂರಿ ಶಂಕರ್‌, ಆರತಿ ರಾಣಿ, ಇಂದು ವಿಶ್ವನಾಥ್‌, ಗೀತಾ ಸತ್ಯಮೂರ್ತಿ, ಮಾಲಿನಿ ಕೇಶವಪ್ರಸಾದ್‌, ಶ್ರೀನಿಧಿ ಜಿ ಸಾವಂತ್‌ ನರಸಿಂಹ ಹರೀಶ್‌, ಎಚ್‌.ಕೆ.ಅನುಭವ್. ಸಮೂಹ ಗಾಯನ: ಸಪ್ತಸ್ವರ ಸಂಗೀತ ವಿದ್ಯಾಲಯ ವಿದ್ಯಾರ್ಥಿಗಳಿಂದ.

ಆರುವೇಲು ನಿಯೋಗಿ ಬ್ರಾಹ್ಮಣ ಸಂಘ: ಗಂಜಾಂ ಮಂಟಪ, ಬುಲ್‌ಟೆಂಪಲ್‌ ರಸ್ತೆ, ರಾಮಕೃಷ್ಣಾಶ್ರಮ ಹತ್ತಿರ. ‘6ನೇ ವರ್ಷದ ಸರ್ವಸದಸ್ಯರ ಮಹಾ ಸಭೆ’. ಬೆಳಿಗ್ಗೆ 10.30.

ಕಂಕಣ: ಬಿ.ಡಿ.ಎ.ಕಾಂಪ್ಲೆಕ್ಸ್‌ ಸಮೀಪ, ಜಯನಗರ 4ನೇ ಹಂತ. ‘ಕನ್ನಡ ಮಾತನಾಡಿ ಅಭಿಯಾನ’. ಸಂಜೆ 4.30.

ಕನ್ನಡ ಜಾಗೃತಿ ವೇದಿಕೆ: ಸರ್ಕಾರಿ ಮಾದರಿ ಬಾಲಕರ ಶಾಲೆ, ಅತ್ತಿಬೆಲೆ. ರಾಷ್ಟ್ರಮಟ್ಟದ ಗಡಿನಾಡು ಮತ್ತು ಹೊರನಾಡು ಕನ್ನಡಿಗರ ಸಾಂಸ್ಕೃತಿಕ ಸಮಾವೇಶ. ಜಾನಪದ ಕಲಾತಂಡಗಳ ಮೆರವಣಿಗೆ. ಬೆಳಿಗ್ಗೆ 10.

ಹೊಯ್ಸಳ ಕರ್ನಾಟಕ ಸಂಘ, ಹೊಯ್ಸಳ ಟ್ರಸ್ಟ್‌: ಹೊಯ್ಸಳ ಕರ್ನಾಟಕ ಸಂಘದ ಆವರಣ, 3ನೇ ಅಡ್ಡರಸ್ತೆ, ಹೊಂಬೇಗೌಡನಗರ. ‘ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ 2014’. ಉಪಸ್ಥಿತಿ: ಪ್ರೊ.ಸಿ.ವಿ.ವಿಶ್ವೇಶ್ವರ ಹಾಗೂ ಡಾ.ಶಶಿಧರ ವಿಶ್ವಾಮಿತ್ರ. ಬೆಳಿಗ್ಗೆ 10.

ಕೇಂದ್ರ ಸರ್ಕಾರದ ಪಿಂಚಣಿದಾರರ ಅಸೋಸಿಯೇಷನ್‌: ಉದಯಭಾನು ಕಲಾಸಂಘ, ಗವಿಪುರ ಸಾಲುಛತ್ರಗಳ ಎದುರು, ಕೆಂಪೇಗೌಡನಗರ, ರಾಮಕೃಷ್ಣ ಮಠದ ಹಿಂಭಾಗ. ಉಚಿತ ಆರೋಗ್ಯ ತಪಾಸಣೆ ಶಿಬಿರ. ಬೆಳಿಗ್ಗೆ 10 ರಿಂದ ಮಧ್ಯಾಹ್ನ 2.

ಧಾರ್ಮಿಕ ಕಾರ್ಯಕ್ರಮಗಳು
ಸಾಯಿ ದರ್ಶನ್:
13ನೇ ಮುಖ್ಯರಸ್ತೆ, 2ನೇ ಹಂತ, ಎಚ್.ಎ.ಎಲ್. ‘ಭಜನೆ’ ಸಂಜೆ 6.25.

ಸತ್ಯಸಾಯಿ ಸೇವಾಸಂಸ್ಥೆಗಳು: ಬೃಂದಾವನ, ಕಾಡುಗೋಡಿ, ವೈಟ್‌ಫೀಲ್ಡ್. ವಿ.ಶ್ರೀನಿವಾಸನ್ ಅವರಿಂದ ವಿಶೇಷ ಪ್ರವಚನ. ಸಂಜೆ 4.
ಚಿನ್ಮಯ ಮಿಷನ್‌: ಕಬೀರನಾಥ ಸ್ವಾಮೀಜಿ ಬ್ರಹ್ಮವಿದ್ಯಾ ಟ್ರಸ್ಟ್‌, ಕೆಂಗೇರಿ ಉಪನಗರ. ಸ್ವಾಮಿ ದತ್ತಪಾದಾನಂದ ಅವರಿಂದ ಭಾಗವತ. ಸಂಜೆ 6.30.

ಅಧ್ಯಾತ್ಮ ಪ್ರಕಾಶ ಕಾರ್ಯಾಲಯ: 6ನೇ ಮುಖ್ಯರಸ್ತೆ, 2ನೇ ವಿಭಾಗ, ತ್ಯಾಗರಾಜನಗರ. ಪ್ರೊ.ಮಂಜುನಾಥ ಭಟ್ಟ ವಿನಾಯಕ ಅವರಿಂದ ಬ್ರಹ್ಮಸೂತ್ರ ಭಾಷ್ಯ ಕುರಿತಂತೆ ಪ್ರವಚನ. ಬೆಳಿಗ್ಗೆ 9.30.

ಸಾಯಿ ಗೀತಾಂಜಲಿ: ಸತ್ಯಸಾಯಿ ಸೇವಾಕ್ಷೇತ್ರ, 21ನೇ ಮುಖ್ಯರಸ್ತೆ, 7ನೇ ಕ್ರಾಸ್‌, ಜೆ.ಪಿ.ನಗರ. ಭಜನಾ ಕಾರ್ಯಕ್ರಮ. ಸಂಜೆ 6.15.

ವೇದಾಂತ ಸತ್ಸಂಗ ಕೇಂದ್ರ: ವೇದಾಂತ ನಿಲಯ, ಸಾಕಮ್ಮ ಗಾರ್ಡನ್ಸ್‌, ಬಸವನಗುಡಿ. ಕೆ.ಜಿ. ಸುಬ್ರಾಯಶರ್ಮಾ ಅವರಿಂದ ‘ವಸ್ತುಸ್ವಾಭಾವ್ಯಂ’ ವಿಷಯದ ಕುರಿತು ಉಪನ್ಯಾಸ. ಬೆಳಿಗ್ಗೆ 9.

ಪರಮಾರ್ಥ ವಿಚಾರ ಸಂಘ ಟ್ರಸ್ಟ್‌: ಅಧ್ಯಾತ್ಮ ಮಂದಿರ, ನ್ಯಾಷನಲ್‌ ಹೈಸ್ಕೂಲ್‌ ರಸ್ತೆ, ವಿಶ್ವೇಶ್ವರಪುರ. ಕೆ.ಜಿ.ಸುಬ್ರಾಯ ಶರ್ಮಾ ಅವರಿಂದ ‘ಮನೋಜ್ಯೋತಿಃ’ ವಿಷಯದ ಕುರಿತು ಉಪನ್ಯಾಸ. ಬೆಳಿಗ್ಗೆ 7.45.

ಸುರಭಾರತಿ ಸಂಸ್ಕೃತ ಅಂಡ್‌ ಕಲ್ಚರಲ್‌ ಫೌಂಡೇಷನ್‌: ‘ಜಗದ್ಗುರು ಭಾರತೀತೀರ್ಥ ಸಭಾ ಮಂಟಪ’, 9ನೇ ‘ಸಿ’ ಮುಖ್ಯರಸ್ತೆ, ಸರ್ವಿಸ್‌ ರಸ್ತೆ, ವಾಟರ್‌ ಟ್ಯಾಂಕ್‌ ಹತ್ತಿರ, ಎಚ್‌.ಆರ್‌.ಬಿ.ಆರ್‌. ಬಡಾವಣೆ, ಕಲ್ಯಾಣನಗರ 1ನೇ ಹಂತ. ‘ಮಾರ್ಗಶೀರ್ಷೋತ್ಸವ’ದಲ್ಲಿ ಬೆಳಿಗ್ಗೆ 9.30ಕ್ಕೆ ಪ್ರದ್ಯುಮ್ನಾಚಾರ್ಯ ಜೋಶಿ ಅವರಿಂದ ಭಾಗವತ ಪ್ರವಚನ. ಸಂಜೆ 5.30ಕ್ಕೆ ವೀಣಾ ಮೋಹನ್‌ ಹಾಗೂ ತಂಡದವರಿಂದ ವೀಣಾ ವಾದನ. ಸಂಜೆ 6.30ಕ್ಕೆ ಸಿ.ಚೆಲುವರಾಜು ಮತ್ತು ತಂಡದವರಿಂದ ತಾಳವಾದ್ಯ ಕಛೇರಿ.

ಭಂಡಾರಕೇರಿ ಮಠ, ಉಡುಪಿ ಶ್ರೀಭಾಗವತಾಶ್ರಮ: ಭಂಡಾರಕೇರಿ ಮಠ, ಉಡುಪಿ ಶ್ರೀಭಾಗವತಾಶ್ರಮ, 1343, 1ನೇ ಎಚ್‌.ಮುಖ್ಯರಸ್ತೆ, 8ನೇ ಅಡ್ಡರಸ್ತೆ, 2ನೇ ಹಂತ, ಗಿರಿನಗರ. ಪ್ರವಚನಗಳು. ಸಂಜೆ 5.30ಕ್ಕೆ

ಮಾರುತಿ ಭಕ್ತ ಮಂಡಳಿ ಟ್ರಸ್ಟ್: 21ನೇ ಮುಖ್ಯರಸ್ತೆ, ವಿಜಯನಗರ. ‘ಶ್ರೀವಿಷ್ಣು ಸಹಸ್ರನಾಮ’. ಬೆಳಿಗ್ಗೆ 9.30.

ಸಾಂಸ್ಕೃತಿಕ ಕಾರ್ಯಕ್ರಮಗಳು
ತ್ಯಾಗರಾಜ ಗಾನಸಭಾ ಟ್ರಸ್ಟ್:
ಶ್ರೀವಾಣಿ ವಿದ್ಯಾಕೇಂದ್ರ, 4ನೇ ಮುಖ್ಯ­ರಸ್ತೆ, 2ನೇ ಹಂತ, ರಾಜಾಜಿನಗರ. ವೀಣಾವಾದನ ಕಛೇರಿ. ರೇವತಿ ಸದಾಶಿವಂ ಅವರಿಂದ ವೀಣಾವಾದನ. ಎಚ್.ಎಸ್.ಕೃಷ್ಣಮೂರ್ತಿ (ಮೃದಂಗ), ರಾಘವೇಂದ್ರ ಪ್ರಕಾಶ್ (ಘಟ). ಸಂಜೆ 7.30.

ನಾದಸುರಭಿ: ದಿ ಇಂಡಿಯನ್ ಹೆರಿಟೇಜ್ ಅಕಾಡೆಮಿ ಹಾಲ್, 6ನೇ ಬ್ಲಾಕ್, ಕೋರಮಂಗಲ. ಜಿ.ರವಿಕಿರಣ್ ಅವರಿಂದ ಗಾಯನ. ಶ್ರೀನಿಧಿ–ವಯಲಿನ್, ಬಿ.ರವಿಶಂಕರ್–ಮೃದಂಗ, ಜಿ.ಓಂಕಾರ್ ರಾವ್–ಘಟ. ಸಂಜೆ 4.15.

ದೇವಗಿರಿ ಶ್ರೀ ವೆಂಕಟೇಶ್ವರ ಟ್ರಸ್ಟ್: ಬನಶಂಕರಿ 2ನೇ ಹಂತ. ಕೃತ್ತಿಕಾ ರಾಧಾಕೃಷ್ಣನ್ ಅವರಿಂದ ನೃತ್ಯ. ಲಿಂಗರಾಜು–ಮೃದಂಗ, ಸೌಮ್ಯ ರಾಮಚಂದ್ರನ್–ಪಿಟೀಲು, ಜಯರಾಂ–ಕೊಳಲು, ವರ್ಷಾ ನಟರಾಜನ್–ಗಾಯನ. ಸಂಜೆ 6.30.

ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್: ವಾಡಿಯಾ ಸಭಾಂಗಣ, ಬಸವನಗುಡಿ. ಭಾಗ್ಯ ಮತ್ತು ಅರುಣಾ ಅವರಿಂದ ಗಾಯನ. ಸಂಜೆ 6.

ವಿಜಯನಗರ ಸಂಗೀತ ಸಭಾ ಟ್ರಸ್ಟ್: ದಾಸವರೇಣ್ಯರ ಆರಾಧನಾ ಮಹೋತ್ಸವದ ಅಂಗವಾಗಿ ಭಾನುವಾರ ಸಂಗೀತ ಸ್ಪರ್ಧೆಯನ್ನು ಆಯೋಜಿಸಿದೆ. ಸ್ಥಳ: ಕಾರ್ಡಿಯಲ್ ಸ್ಕೂಲ್ ಆವರಣ, ವಿಜಯನಗರ. ಬೆಳಿಗ್ಗೆ 11. ಮಾಹಿತಿಗೆ–080 2330 0396/ 98451 14516.

ಬಿಟಿಎಂ ಕಲ್ಚರಲ್ ಅಕಾಡೆಮಿ: ಶ್ರೀ ರಮಣ ಮಹರ್ಷಿ ಅಕಾಡೆಮಿ ಫಾರ್ ದಿ ಬ್ಲೈಂಡ್, 3ನೇ ಕ್ರಾಸ್, ಜೆ.ಪಿ.ನಗರ. ಸಾಂಸ್ಕೃತಿಕ ಕಾರ್ಯಕ್ರಮ. ಜಯಂತ್ ಕುಮಾರ್ ದಾಸ್–ಸಿತಾರ್‌, ವಿಶ್ವನಾಥ್ ನಾಕೋಡ್–ತಬಲ, ದಕ್ಷಿಣಾಮೂರ್ತಿ–ವೀಣೆ, ಜಿ.ಎಸ್.ನಾಗರಾಜ್–ಮೃದಂಗ. ಸಂಜೆ 5.30.

ಇಂಡಿಯನ್ ಚರ್ಚ್‌ ಆಫ್‌ ಕ್ರೈಸ್ಟ್: ಮರಿಯಾ ನಿಕೇತನ ಸ್ಕೂಲ್‌, ಎರಡನೇ ಅಡ್ಡರಸ್ತೆ, ಡಿ’ಕೋಸ್ಟಾ ಬಡಾವಣೆ, ಕುಕ್‌ ಟೌನ್‌. ಕ್ರಿಸ್ಮಸ್‌ ಕಾರ್ನಿವಲ್‌. ಬೆಳಿಗ್ಗೆ 9.

ಕಾವ್ಯ ಸಿಂಚನ ಕಲಾಕೇಂದ್ರ ಟ್ರಸ್ಟ್‌: ಕೆನ್‌ ಕಲಾಶಾಲೆ, ಶೇಷಾದ್ರಿಪುರ ಪೊಲೀಸ್‌ ಠಾಣೆ ಹಿಂಭಾಗ. ‘55ನೇ ಕವಿಗೋಷ್ಠಿ ಮತ್ತು ಸನ್ಮಾನ ಸಮಾರಂಭ’ ಸನ್ಮಾನಿತರು– ರಂಗಭೂಮಿ ಕಲಾವಿದ ಸಿ. ರಾಮದಾಸ್‌. ಅತಿಥಿಗಳು– ಯು. ಸಿರಾಜ್‌ ಅಹಮದ್‌, ಎಂ.ಎಸ್‌. ಶಿವಪ್ರಸಾದ್‌. ಅಧ್ಯಕ್ಷತೆ– ಕಾವ್ಯ ಸಿಂಚನ ಕಲಾಕೇಂದ್ರದ ಎಸ್‌.ಜಿ. ಮಾಲತಿ ಶೆಟ್ಟಿ. ಗೀತ ಗಾಯನ– ಭಾಸ್ಕರ್‌ ಕಶ್ಯಪ್‌, ಎಂ.ಆರ್‌. ಅನಂತಮೂರ್ತಿ, ಶಂಕರನಾರಾಯಣ್‌, ಭಾಗ್ಯಲಕ್ಷ್ಮಿ ಮಗ್ಗೆ, ಗಂಗಾಧರ್‌. ಬೆಳಿಗ್ಗೆ 10.

ಕೃಷ್ಣ ಕಲಾ ಕೇಂದ್ರ: ಶ್ರೀ ಪುರಂದರ ಮಂಟಪ, 3ನೇ ಮುಖ್ಯರಸ್ತೆ, ಕಲ್ಯಾಣಿನಗರ, ಇಸ್ರೊ ಬಡಾವಣೆ ಸಮೀಪ, ವಸಂತಪುರ. ‘ಕರ್ನಾಟಕ ಶಾಸ್ತ್ರೀಯ ಹಾರ್‍ಮೋನಿಯಂ ವಾದನ ಕಛೇರಿ’ ಹಾರ್‍ಮೋನಿಯಂ– ಸಿ. ರಾಮದಾಸ್‌, ಪಿಟೀಲು– ಕಟ್ಟೆಪುರ ಆರ್‌. ಸತ್ಯಪ್ರಕಾಶ್‌, ಮೃದಂಗ– ತಿರುಮಲೆ ಶ್ರೀನಿವಾಸ್‌, ಘಟಂ– ದಯಾನಂದ ಮೋಹಿತೆ. ಸಂಜೆ 5.30.

ಶ್ರೀ ರಾಮ ಕಲಾ ವೇದಿಕೆ: ಭಾರತೀಯ ವಿದ್ಯಾಭವನ, ರೇಸ್‌ಕೋರ್ಸ್ ರಸ್ತೆ. ‘ಶ್ರೀ ರಾಮ ಕಲಾ ವೇದಿಕೆಯ ದಿ. ರಾಮಚಂದ್ರ ಯಾವಗಲ್ ಸ್ಮರಣಾರ್ಥ ವಾರ್ಷಿಕ ಸಂಗೀತೋತ್ಸವ’. ಬೆಳಿಗ್ಗೆ 9.30ಕ್ಕೆ ಪೃಥ್ವಿರಾಜ್‌ ಮಿಶ್ರಾ ಅವರಿಂದ ತಬಲಾ ಸೋಲೊ. ನಂತರ ಸಿತಾರ್‌ ವಾದಕ ಉಸ್ತಾದ್‌ ಶಾಹಿದ್‌ ಪರ್ವೇಜ್‌ ಖಾನ್‌ ಅವರಿಗೆ ‘ಕಲಾ ಶೃಂಗ’ ಪ್ರಶಸ್ತಿ ಪ್ರದಾನ. ಅತಿಥಿಗಳು– ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ.ಎ. ದಯಾನಂದ. ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್‌.ಎನ್‌. ಸುರೇಶ್‌. ಉಪಸ್ಥಿತಿ– ತಬಲಾ ಕಲಾವಿದ ಶೇಷಗಿರಿ ಹಾನಗಲ್‌. ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ನಂತರ ಪರ್ವೇಜ್‌ ಖಾನ್‌ ಅವರಿಂದ ಸಿತಾರ್‌ ವಾದನ. ಸಹ ಕಲಾವಿದರು– ಸಿ.ಎನ್‌. ಚಂದ್ರಶೇಖರ್‌ (ವಯಲಿನ್‌). ಸತೀಶ್‌ ಕೊಳ್ಳಿ (ಹಾರ್‍ಮೋನಿಯಂ). ಕಿರಣ್‌ ಯಾವಗಲ್‌, ಗುರುಮೂರ್ತಿ ವೈದ್ಯ, ರವೀಂದ್ರ ಯಾವಗಲ್‌ (ತಬಲಾ). ಸಿ. ಚಲುವರಾಜ್‌ (ಮೃದಂಗ). ಪ್ರವೇಶ ಉಚಿತ.

ವೆಂಕಟೇಶ ನಾಟ್ಯ ಮಂದಿರ: ಎ.ಡಿ.ಎ. ರಂಗಮಂದಿರ, ಜೆ.ಸಿ.ರಸ್ತೆ. ‘ರಸಸಂಜೆ 14–15’. ಸಂಜೆ 6ಕ್ಕೆ ಸುರಭಿ ಎಂ. ಭಾರಜ್‌ ಅವರಿಂದ ಭರತನಾಟ್ಯ. ವೀಣಾ ನಾಯರ್‌ ಮತ್ತು ಧನ್ಯಾ ನಾಯರ್‌ ಅವರಿಂದ ಮೋಹಿನಿಯಾಟ್ಟಂ ನೃತ್ಯ. ಚಿದಂಬರಂ ಡ್ಯಾನ್ಸ್‌ ಕಂಪೆನಿ ಕಲಾವಿದರಿಂದ ‘ಅನುಭೂತಿ– ಒಂದು ಅನುಭವ ಮಾರ್ಗಂ ಸ್ವರೂಪದಲ್ಲಿ’ ನೃತ್ಯ ಕಾರ್ಯಕ್ರಮ. ಪರಿಕಲ್ಪನೆ ಮತ್ತು ನೃತ್ಯ ಸಂಯೋಜನೆ– ಚಿತ್ರಾ ವಿಶ್ವೇಶ್ವರನ್‌. ಕಲಾವಿದರು– ಉಮಾ ನಂಬೂದಿರಿಪಾಡ್‌ ಸತ್ಯನಾರಾಯಣ್‌, ಆರುಪ ಲಾಹಿರಿ, ಸಾಯಿ ಸಂತೋಷ್‌, ರಾಧಾ ಕೃಷ್ಣ ಜತ್‌ ಕ್ಯೂಹೆನಿ ರೆಡ್ಡಿ, ದಿವ್ಯಾ ಶ್ರುತಿ ಹಾಗೂ ಶರ್ಮದಾ ವಿಶ್ವನಾಥ್‌. ಮುಖ್ಯ ಅತಿಥಿ– ಮೈಸೂರು ವಿ. ಸುಬ್ರಹ್ಮಣ್ಯ.

ಕಲೋತ್ಸವ ಸಮಿತಿ, ಕಲಾಮಂದಿರ, ಅಭಿನಯ ತರಂಗ, ಹನುಮಂತನಗರ ಬಿಂಬ: ಹನುಮಂತನಗರದ ಕಲಾಮಂದಿರದ ಆವರಣ ಹಾಗೂ ರಾಮಾಂಜನೇಯ ಗುಡ್ಡ. ‘ಎ.ಎಸ್‌. ಮೂರ್ತಿ ಸವಿನೆನಪಿನ ಕಲೋತ್ಸವ’. ಚಿತ್ರಕಲಾಕೃತಿಗಳ ಪ್ರದರ್ಶನ, ಛಾಯಾಚಿತ್ರ ಸ್ಪರ್ಧೆ ಹಾಗೂ ಪ್ರದರ್ಶನ. ಕಿರುಚಿತ್ರ ಸ್ಪರ್ಧೆ, ಹಾಡಿನ ಶಿಬಿರ, ಬೀದಿ ನಾಟಕಗಳು, ಕವಿತಾ ವಾಚನ, ನೃತ್ಯ ಕಾರ್ಯಕ್ರಮ, ಸಮಕಾಲೀನ ಕಲೆಯ ಆರ್ಟ್‌ ಪರ್ಫಾರ್ಮೆನ್ಸ್‌, ವಾದ್ಯಗೋಷ್ಠಿ ಮತ್ತಿತರ ಕಾರ್ಯಕ್ರಮಗಳು ಬೆಳಿಗ್ಗೆ 9ರಿಂದ ನಡೆಯಲಿವೆ.

ವಸಂತರತ್ನ ಫೌಂಡೇಶನ್‌ ಫಾರ್‌ ಆರ್ಟ್‌, ಸವಿತಾ ಮತ್ತು ಡಾ. ಎನ್‌. ನರಸಿಂಹ: ಭಾರತೀಯ ವಿದ್ಯಾಭವನ, ರೇಸ್‌ ಕೋರ್ಸ್‌ ರಸ್ತೆ. ಶ್ರೇಯಾ ನರಸಿಂಹ ಭರತನಾಟ್ಯ ರಂಗಪ್ರವೇಶ. ಮುಖ್ಯ ಅತಿಥಿಗಳು– ನೂಪುರ ಸ್ಕೂಲ್‌ ಆಫ್ ಭರತನಾಟ್ಯಂ ನಿರ್ದೇಶಕಿ ಲಲಿತಾ ಶ್ರೀನಿವಾಸನ್‌. ಕಾವೇರಿ ನಾಟ್ಯ ಯೋಗ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕ ಶ್ರೀಧರ ಅಕ್ಕಿಹೆಬ್ಬಾಳು. ವಾದ್ಯ ಸಹಕಾರ: ನಟುವಾಂಗ– ಸುಭಾಷಿಣಿ ವಸಂತ್, ಗಾಯನ– ಡಿ.ಎಸ್‌. ಶ್ರೀವತ್ಸ, ಮೃದಂಗ– ಶ್ರೀಹರಿ. ಕೊಳಲು– ನರಸಿಂಹ ಮೂರ್ತಿ. ವೀಣಾ– ವಿ. ಗೋಪಾಲ. ಸಂಜೆ 6.

ರಂಗಭೂಮಿ
ಅಕ್ವೇರಿಯಸ್‌ ಪ್ರೊಡಕ್ಷನ್ಸ್‌ ಮುಂಬೈ:
ರಂಗಶಂಕರ, 2ನೇ ಹಂತ, ಜೆ.ಪಿ.ನಗರ.  ‘ಇಂಟರ್‌ನಲ್‌ ಅಫೇರ್‍ಸ್‌್’ ಇಂಗ್ಲಿಷ್‌ ನಾಟಕ ಪ್ರದರ್ಶನ. ಮಧ್ಯಾಹ್ನ 3.30 ಹಾಗೂ ಸಂಜೆ 7.30.

ನಾಟಕ ಬೆಂಗ್ಳೂರು: ಕಲಾಭವನ, ಕಲಾಗ್ರಾಮ, ವರ್ತುಲ ರಸ್ತೆ, ಮಲ್ಲತ್ತಳ್ಳಿ. ರೂಪಾಂತರ ತಂಡದಿಂದ ‘ವರಾಹ ಪುರಾಣ’ ನಾಟಕ ಪ್ರದರ್ಶನ. ರಚನೆ: ಜಂಬಣ್ಣ ಅಮರಚಿಂತ/ಸಿದ್ಧರಾಮ ಕೊಪ್ಪರ್‌, ನಿರ್ದೇಶನ: ಸಿದ್ಧರಾಮ ಕೊಪ್ಪರ್‌. ಸಂಜೆ 7.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT