ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಬಡಗಣ: ಯುವಪಡೆಯಿಲ್ಲದೇ ಭಣ ಭಣ

Last Updated 17 ಏಪ್ರಿಲ್ 2014, 20:11 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಮತಗಟ್ಟೆಯ ಸರತಿ ಸಾಲಿನಲ್ಲಿ ನಿಂತ ಮತ­ದಾರರಲ್ಲಿ  ಯುವಜನರ ಸಂಖ್ಯೆ ತೀರಾ ಕಡಿಮೆ ಇತ್ತು.

ಮತದಾರರ ಪಟ್ಟಿಯಲ್ಲಿ ಹೆಸರಿನ ಗೊಂದಲ, ಬಹಿರಂಗವಾಗಿ ಪಕ್ಷಗಳ ಕಾರ್ಯಕರ್ತರು ಆಮಿಷ­ವೊಡ್ಡಿದ್ದು, ಮತಯಂತ್ರಗಳ ತಾಂತ್ರಿಕ ದೋಷ  ಸೇರಿದಂತೆ ಕೆಲವೆಡೆ ಸಮಸ್ಯೆಗಳು  ಕಂಡುಬಂದರೆ, ಉಳಿ­ದಂತೆ ಮತದಾ­ನವು ಯಾವುದೇ ಆತಂಕ­ವಿಲ್ಲದೇ ತಣ್ಣಗೆ ನಡೆಯಿತು.

ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಕೋತಿಹೊಸಹಳ್ಳಿ, ಇಂಪ್ಯಾಕ್ಟ್‌ ತಾಂತ್ರಿಕ ನಿರ್ವ­ಹಣಾ  ಶಾಲೆ,  ಬ್ಯಾಟ­ರಾ­ಯ­ನಪುರ ಸರ್ಕಾರಿ ಪ್ರಾಥಮಿಕ ಶಾಲೆ, ಥಣಿಸಂದ್ರ ಸರ್ಕಾರಿ ಮಾದರಿ ಪಾಠಶಾಲೆ, ರಾಮಮೂರ್ತಿ ನಗರ, ಜಯ­­ಗೋಪಾಲ್‌ ಗರೋಡಿಯಾ ರಾಷ್ಟ್ರೋ­ತ್ಥಾನ ವಿದ್ಯಾ­ಕೇಂದ್ರ, ಕೆ.ಆರ್‌.ಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು , ಹೆಬ್ಬಾಳ ಪ್ರಾಥಮಿಕ ಶಾಲೆ ಸೇರಿದಂತೆ ಹಲವು ಮತಗಟ್ಟೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಂಡು­ಬಂದ ಚಿತ್ರಣವಿದು.

ಬೆಳಿಗ್ಗೆ 9.30ರ ಸುಮಾರಿಗೆ ಕೋತಿ­ಹೊಸ­­ಹಳ್ಳಿಯ ಮತಗಟ್ಟೆಯಲ್ಲಿ ಗೃಹಿಣಿ­ಯರು ಗೃಹ ಕೆಲಸ­ಗಳ ಒತ್ತಡದ ನಡುವೆಯೂ ಕಂದಮ್ಮಗಳನ್ನು ಎತ್ತಿ­ಕೊಂಡೇ ಮತ ಚಲಾಯಿಸಿ­ದರು. ಇತರರಿಗೆ ಪ್ರೇರಣೆಯಾದವರು: 70 ವರ್ಷದ ಅಂಧ­ ಬಸಪ್ಪ ಜಾಧವ ಎಂಬುವವರು ಮಗನ ಸಹಾಯದಿಂದ ಮತಗಟ್ಟೆಗೆ ಬಂದು ಮತದಾನ ಮಾಡುವ ಮೂಲಕ ಇತರರಿಗೆ ಪ್ರೇರ­ಣೆ­­­­ಯಾದರೆ,  ಅಂಗವೈಕಲ್ಯದಿಂದ ಬಳಲು­­ತ್ತಿರುವ 26ರ ಹರೆಯದ ಸಾಫ್ಟ್‌ವೇರ್‌ ಎಂಜಿನಿಯರ್‌ ಸುರೇಶ್‌ ಅವರು ಬ್ಯಾಟರಾಯನಪುರ ಪ್ರಾಥ­ಮಿಕ ಶಾಲೆಯ ಮತಗಟ್ಟೆಯಲ್ಲಿ ಮತ­ದಾನದ ಹಕ್ಕನ್ನು ಚಲಾಯಿಸಿ ಇತರ­ರಲ್ಲಿ ಹುರುಪು ಮೂಡಿಸಿದರು.

ಹಲವು ದಿನಗಳಿಂದ ಕಿಡ್ನಿ ವೈಫಲ್ಯ­ದಿಂದ ಬಳಲು­ತ್ತಿದ್ದು, ಮಣಿಪಾಲ ಆಸ್ಪತ್ರೆ­­ಯಲ್ಲಿ ಚಿಕಿತ್ಸೆ ಪಡೆ­ಯು­ತ್ತಿ­ರುವ  26ರ ಸಂದೀಪ್‌, ಆಸ್ಪತ್ರೆಯಿಂದ ನೇರ­ವಾಗಿ ಮಲ್ಲೇಶ್ವರ ಸರ್ಕಾರಿ ಬಾಲಕಿ­ಯರ ಪ್ರೌಢ­ಶಾಲೆಯ ಮತಗಟ್ಟೆಗೆ ಬಂದು ಮತ ಚಲಾಯಿಸಿದರು.

ಬ್ಯಾಟರಾಯನಪುರ ಪ್ರಾಥಮಿಕ ಶಾಲೆಯ ಮತ­ಗಟ್ಟೆಯ ಪಟ್ಟಿಯಲ್ಲಿ ಹೆಸರೇ ಕಾಣೆಯಾಗಿದ್ದರಿಂದ ಆತಂಕ­ಗೊಂಡ 84ರ ಸುಬ್ಬೇಗೌಡ ಅವರು ಕೆಲಹೊತ್ತು ಕಾದರು. ನಂತರ ‘ಪ್ರಜಾ­ವಾಣಿ’ಯೊಂದಿಗೆ ಮಾತನಾಡಿದ  ಅವರು, ‘ನನ್ನ ಇಡೀ ಕುಟುಂಬದ ಸದಸ್ಯರ ಹೆಸರು ಪಟ್ಟಿ­ಯಲ್ಲಿದೆ. ಆದರೆ, ನನ್ನ ಹಾಗೂ ಮೊಮ್ಮ­­ಗಳ ಹೆಸರು ಮಾತ್ರ ನಾಪತ್ತೆ­ಯಾ­ಗಿದೆ’ ಎಂದು ಬೇಸರ ವ್ಯಕ್ತ­ಪಡಿಸಿದರು.

ಪ್ರಥಮ ಚುಂಬನಂ ದಂತ ಭಗ್ನಂ: ಪ್ರಥಮ ಬಾರಿ ಮತದಾನದ ಹಕ್ಕನ್ನು ಚಲಾಯಿಸುವ ಸಲುವಾಗಿ ಸಂಭ್ರಮ­ದಿಂದ ಬಂದಿದ್ದ  ಐಶ್ವರ್ಯ ಗಾಂಧಿ, ಸುನೀತಾ ದಾಮ್ಲೆ ಹಾಗೂ ಕಿರಣ್‌ ಪಾಟೀಲ ಅವರ ಹೆಸರು ಪಟ್ಟಿಯಲ್ಲಿ ಕಾಣಸಿಗದೇ ನಿರಾಶೆ ಅನುಭವಿಸಿ­ದರು.

ಮತಗಟ್ಟೆ ನಾಪತ್ತೆ!: ‘ಬ್ಯಾಟ­ರಾಯನ­ಪುರದ ವಿವಿಧ ಮತ­ಗ­ಟ್ಟೆಗಳಿಗೆ ಅಲೆದಾ­ಡಿ­ದರೂ ನನ್ನ ಹೆಸರಿ­ರುವ ಮತ­ಗಟ್ಟೆ ಸಿಗುತ್ತಿಲ್ಲ. ನನ್ನ­ ಹೆಸರು 169ನೇ ಮತಗಟ್ಟೆ­ಯಲ್ಲಿದೆ. ಆದರೆ, ಬ್ಯಾಟ­ರಾಯ­ನ­ಪುರ ಕ್ಷೇತ್ರದ ವಿವಿಧ ಶಾಲೆ­ಗಳಿಗೆ ಪರ­ದಾ­ಡಿದ್ದೇನೆ. ಮತಗಟ್ಟೆ ದೊರ­ಕು­ತ್ತಿಲ್ಲ’ ಎಂದು ಕಾವೇರಿ ಬಡಾ­ವ­­­ಣೆಯ ನರಸಿಂಹ ದೂರಿದರು.

ಕೈಕೊಟ್ಟ ಮತಯಂತ್ರ: ಇಂಪ್ಯಾಕ್ಟ್‌ ತಾಂತ್ರಿಕ ನಿರ್ವಹಣೆ ಕಾಲೇಜಿನ 234ನೇ ಮತಗಟ್ಟೆಯಲ್ಲಿ ಬೆಳಿಗ್ಗೆ 10 ಗಂಟೆ ಸುಮಾರಿಗೆ ಮತಯಂತ್ರದ ದೋಷದಿಂದಾಗಿ ಅರ್ಧಗಂಟೆ ಸಿಬ್ಬಂದಿ ಹಾಗೂ ಮತದಾರರು ತೊಂದರೆ ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT