ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆದರಿಕೆ: ಬಿಜೆಪಿ ಶಾಸಕ ಅಮಾನತು

Last Updated 19 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಜೈಪುರ (ಪಿಟಿಐ): ನರ್ಸ್‌ ಒಬ್ಬರ ವರ್ಗಾ­­ವಣೆಗೆ ಸಂಬಂಧಿ­ಸಿದಂತೆ ಕೋಟಾ ಜಿಲ್ಲೆಯ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅ­­ಧಿಕಾರಿ ಆರ್‌.ಎನ್‌. ಯಾದವ್‌ ಅವರಿಗೆ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿ­ಸಿದಂತೆ ರಾಜಸ್ತಾ­ನ ಬಿಜೆಪಿ ಶಾಸಕ ಪ್ರಹ್ಲಾದ್‌ ಗುಂಜಲ್‌ ಅವರನ್ನು ಪಕ್ಷ ಅಮಾನತುಗೊಳಿಸಿದೆ.

ಪಕ್ಷದ ಅಧ್ಯಕ್ಷ ಅಮಿತ್‌ ಷಾ ಅವರ ನಿರ್ದೇಶನದಂತೆ ಕೋಟಾ (ಉತ್ತರ) ಶಾಸಕ ಗುಂಜಲ್‌ ಅವರನ್ನು ಅಮಾ­ನತು ಮಾಡಲಾಗಿದೆ ಎಂದು ಬಿಜೆಪಿ ಪ್ರಕಟಣೆ­ಯಲ್ಲಿ ತಿಳಿಸಿದೆ.

‘ಭಾವೋದ್ವೇಗಕ್ಕೆ ಒಳಗಾಗಿ ಬಳಸ­ಬಾರದ ಶಬ್ದಗಳನ್ನು ಬಳಸಿದ್ದೇನೆ. ನನ್ನ ಮಾತುಗಳಿಂದ ಯಾರಿಗಾದರೂ ನೋವಾ­­ಗಿದ್ದರೆ ಅದಕ್ಕೆ ವಿಷಾದ ವ್ಯಕ್ತ­ಪಡಿಸುತ್ತೇನೆ’ ಎಂದು ಗುಂಜಲ್‌ ಪಕ್ಷದ ರಾಜ್ಯ ಘಟಕ ಅಧ್ಯಕ್ಷ ಅಶೋಕ ಪರ್ಣಮಿ ಮತ್ತು ಮುಖ್ಯಮಂತ್ರಿ ವಸುಂಧರಾರಾಜೆ ಅವರಿಗೆ ಬರೆದಿರುವ ಕ್ಷಮಾಪಣೆ ಪತ್ರ­ದಲ್ಲಿ ತಿಳಿಸಿದ್ದಾರೆ.

ನನಗೆ ಒತ್ತಡದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಈ ಮಧ್ಯೆ ಆರೋಗ್ಯಾ­ಧಿ­ಕಾರಿ ಯಾದವ್‌ ಅವರು ಸ್ವಯಂ ನಿವೃತ್ತಿ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಆರೋಗ್ಯಾಧಿಕಾರಿಗೆ ಬೆದರಿಕೆ­ಯೊಡ್ಡಿದ ಸಂಭಾಷಣೆಯ ಆಡಿಯೋ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡಿ ವಿವಾದಕ್ಕೆ ಕಾರಣವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT