ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆನ್ನು ತಟ್ಟಿದ ಕೊಹ್ಲಿ

Last Updated 28 ಮೇ 2016, 19:53 IST
ಅಕ್ಷರ ಗಾತ್ರ

ಬೆಂಗಳೂರು: ನಮ್ಮ ಬೌಲರ್‌ಗಳು ಕಳೆದ ಆರು ಪಂದ್ಯಗಳಲ್ಲಿ ಉತ್ತಮವಾಗಿ ಆಡಿದ್ದಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಚೆನ್ನಾಗಿದ್ದ ಕಾರಣಕ್ಕೆ ನಾವು ಫೈನಲ್ ತಲುಪಿದ್ದೇವೆ ಎಂದು ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಹೇಳಿದರು.

ಶನಿವಾರ ಸಂಜೆ ಟ್ರೋಫಿ ಅನಾವರಣ ಕಾರ್ಯಕ್ರಮದ ನಂತರ ಅವರು ಮಾತನಾಡಿದರು.

‘ಸನ್‌ರೈಸರ್ಸ್ ಹೈದರಾಬಾದ್ ತಂಡವು ಸಮತೋಲನದಿಂದ ಕೂಡಿದೆ. 20 ಓವರ್ ಬ್ಯಾಟಿಂಗ್ ಮಾಡುವ ತಂಡವು 20 ಓವರ್‌ ಬೌಲಿಂಗ್ ಮತ್ತು ಫೀಲ್ಡಿಂಗ್ ಕೂಡ ಮಾಡಲೇಬೇಕು. ಅದ್ದರಿಂದ ಎಲ್ಲ ವಿಭಾಗಗಳಲ್ಲಿಯೂ ಸಮತೋಲನ ಸಾಧಿಸುವುದು ಮಹತ್ವದ ವಿಷಯ. ನಮ್ಮ ತಂಡವು ಆರಂಭಿಕ ಹಂತದಲ್ಲಿ ಬೌಲಿಂಗ್ ವಿಭಾಗದಲ್ಲಿ ನಿರಾಸೆ ಅನುಭವಿಸಿತ್ತು. ಆದರೆ, ಕಳೆದ ಏಳು ಪಂದ್ಯಗಳಲ್ಲಿ ಆರರಲ್ಲಿ ಗೆಲುವು ಸಾಧಿಸಿದ್ದೇವೆ. ಬೌಲರ್‌ಗಳ ಉತ್ತಮ ಆಟವಿಲ್ಲದೇ ಈ ಸಾಧನೆ ಸಾಧ್ಯವೇ ಇಲ್ಲ’ ಎಂದು ಕೊಹ್ಲಿ ತಮ್ಮ ತಂಡದ ಬೌಲರ್‌ಗಳನ್ನು ಸಮರ್ಥಿಸಿಕೊಂಡರು.

ಸಾವಿರ ರನ್ ಸರದಾರನಾಗುವರೇ ಕೊಹ್ಲಿ?
ಇಂಡಿಯನ್ ಪ್ರೀಮಿಯರ್‌ ಲೀಗ್‌ನ  (ಐಪಿಎಲ್) ಒಂದೇ ಟೂರ್ನಿಯಲ್ಲಿ ನಾಲ್ಕು ಶತಕಗಳನ್ನು ಗಳಿಸಿರುವ ಮತ್ತು 800 ರನ್‌ಗಳಿಗಿಂತಲೂ ಹೆಚ್ಚು ರನ್‌ ಗಳಿಸಿರುವ ಏಕೈಕ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಈಗ ಮತ್ತೊಂದು ದಾಖಲೆಯ ಅಂಚಿನಲ್ಲಿದ್ದಾರೆ.

15 ಪಂದ್ಯಗಳಿಂದ ಒಟ್ಟು 919 ರನ್‌ ಗಳಿಸಿರುವ ಅವರು  ಐಪಿಎಲ್‌ನಲ್ಲಿ ಒಂದು ಸಾವಿರ ರನ್ ಗಡಿಯ ಸನಿಹದಲ್ಲಿದ್ದಾರೆ. ಫೈನಲ್ ಪಂದ್ಯದಲ್ಲಿ 81 ರನ್ ಗಳಿಸಿದರೆ ಸಹಸ್ರ ರನ್‌ಗಳ ಸರದಾರನಾಗುವುದು ಖಚಿತ.

ಕಾಯ್ದಿಟ್ಟ ದಿನ
ಭಾನುವಾರ ಸಂಜೆ ಮಳೆ ಮಳೆ ಸುರಿದು ಪಂದ್ಯ ನಡೆಯದಿದ್ದರೆ ಸೋಮವಾರ ಪಂದ್ಯವನ್ನು ಅಯೋಜಿಸಲಾಗುವುದು.

ಒಂದೊಮ್ಮೆ ಎರಡೂ ದಿನವೂ ಮಳೆ ಬಂದು ಪಂದ್ಯ ನಡೆಯದಿದ್ದರೆ, ಲೀಗ್ ಹಂತದಲ್ಲಿ ಉತ್ತಮ ರನ್‌ರೇಟ್‌ನೊಂದಿಗೆ ಎರಡನೇ ಸ್ಥಾನದಲ್ಲಿರುವ ಆರ್‌ಸಿಬಿಯನ್ನು ವಿಜೇತ ಎಂದು ಘೋಷಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT