ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡದ ಮಾತು ನಿಲ್ಲಲಿ

Last Updated 7 ಅಕ್ಟೋಬರ್ 2015, 19:54 IST
ಅಕ್ಷರ ಗಾತ್ರ

ಶಾಸಕ ಎ.ಎಸ್‌. ಪಾಟೀಲ್‌ ನಡಹಳ್ಳಿಯವರು ಪ್ರತ್ಯೇಕ ರಾಜ್ಯ ಬೇಡಿಕೆಯ ಮತ್ತದೇ ರಾಗವನ್ನು ತೆಗೆದಿದ್ದಾರೆ. ಈ ಬಾರಿ ಐಐಟಿಯು ರಾಯಚೂರಿಗೆ ಬರದೇ ಹೋದ ಕಾರಣ ಮುಂದಿಟ್ಟುಕೊಂಡು ಬೇರೆ ರಾಜ್ಯ ಕೊಡಿ ಎನ್ನುತ್ತಿದ್ದಾರೆ. ಕರ್ನಾಟಕದ ಉತ್ತರದ ಭಾಗದಲ್ಲೇ ಇರುವ ಧಾರವಾಡಕ್ಕೆ ಐಐಟಿ ಬಂದಿದೆ, ರಾಯಚೂರಿಗೆ ಬಂದಿಲ್ಲ ಎಂದು ಮತ್ತೆ ನಾಡನ್ನು ಒಡೆಯುವ ಮಾತನ್ನು ಆಡುತ್ತಿದ್ದಾರೆ. ಇದನ್ನು ನೋಡಿದರೆ ‘ನನಗೆ ಏಕೋ ತಲೆನೋವು ಅದಕ್ಕೆ ಬೇರೆ ರಾಜ್ಯ ಕೊಡಿ’, ‘ನಡೆಯುವಾಗ ಎಡವಿಬಿದ್ದೆ, ಬೇರೆ ರಾಜ್ಯ ಕೊಡಿ’ ಎಂದು ಕೇಳುವಂತೆ ನಡಹಳ್ಳಿಯವರು ನಾಡನ್ನು ಒಡೆಯಲು ಹುರುಳಿಲ್ಲದ ಕಾರಣಗಳನ್ನು ಹುಡುಕುತ್ತಿರುವ ಹಾಗಿದೆ.

ಕಳಸಾ-ಬಂಡೂರಿ ಹೋರಾಟದ ಹೊತ್ತಿನಲ್ಲಿ ನಡಹಳ್ಳಿಯವರು ಹುಡುಕಿದರೂ ಸಿಗುತ್ತಿರಲಿಲ್ಲ. ಆದರೆ ಬೀದರ್‌ನಿಂದ ಹಿಡಿದು ಚಾಮರಾಜನಗರದವರೆಗೂ ಕನ್ನಡಿಗರು ಈ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ನಾಡೊಡೆಯುವ ಪೊಳ್ಳು ಮಾತುಗಳಿಗೆ ಚಾಟಿ ಏಟು ಬೀಸಿ, ಕನ್ನಡಿಗರೆಲ್ಲ ಒಂದೇ ಎಂದು ತೋರಿಸಿಕೊಟ್ಟಿದ್ದಾರೆ.

ಇಂತಹ ಹೊತ್ತಿನಲ್ಲಿ ಮತ್ತದೇ ನಂಜಿನ ಬೀಜ ಬಿತ್ತುವ ಕೆಲಸವನ್ನು ಶಾಸಕರು ನಿಲ್ಲಿಸಲಿ. ಇವರ ಜೊತೆಗೆ ಶಾಸಕ ಅಶೋಕ್ ಖೇಣಿಯವರೂ ದನಿಗೂಡಿಸಿದ್ದಾರೆ. ತಮ್ಮ ಕ್ಷೇತ್ರದ ಏಳಿಗೆಗೆ ಖೇಣಿಯವರು ಇಲ್ಲಿಯವರೆಗೆ ಮಾಡಿರುವ ಕೆಲಸಗಳೇನು? ರೈತರ ತೊಂದರೆಗಳಿಗೆ ಸರಿಯಾಗಿ ಕಿವಿಗೊಟ್ಟು ಬಗೆಹರಿಸುವ ಕೆಲಸವನ್ನು ಈ ಶಾಸಕರು ಮಾಡಬೇಕಿದೆ. ಬೇಡದ ಮಾತು ಮತ್ತು ಮೊಸಳೆ ಕಣ್ಣೀರನ್ನು ನಿಲ್ಲಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT