ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆ ಧಗೆ ತಂಪಾಗಿಸಿದ ಮಳೆ

Last Updated 1 ಮಾರ್ಚ್ 2015, 19:31 IST
ಅಕ್ಷರ ಗಾತ್ರ

ಬೆಂಗಳೂರು: ಬೇಸಿಗೆಯ ಬೇಗೆಯಿಂದ ಬಸವಳಿದಿದ್ದ ನಗರ ವಾಸಿಗಳಿಗೆ ಭಾನುವಾರ ಸುರಿದ ಮಳೆಯು ತಂಪೆರೆದಿದೆ. ಸಂಜೆಯಿಂದ ತುಂತುರು ಮಳೆ­ಯಿಂದ ಶುರುವಾದ ಮಳೆ ರಾತ್ರಿ­ವ­ರೆಗೂ ಸುರಿದಿದೆ. ಇಂದಿರಾನಗರ, ಮಹಾತ್ಮಗಾಂಧಿ ರಸ್ತೆ, ಬ್ರಿಗೇಡ್‌ ರಸ್ತೆ, ಕಬ್ಬನ್‌ ರಸ್ತೆ, ರೆಸಿಡೆನ್ಸಿ ರಸ್ತೆ ಸೇರಿದಂತೆ ನಗರದ ಬಹುತೇಕ ಕಡೆ ಮಳೆ ಸುರಿದಿದೆ. ನಗರದಲ್ಲಿ 0.1 ಮಿ.ಮೀ. ಮಳೆ­ಯಾಗಿದ್ದು, ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ರಾತ್ರಿ 8.30 ರವರೆಗೆ 2.4 ಮಿ.ಮೀ. ಮಳೆಯಾಗಿದೆ. ನಗರದಲ್ಲಿ ಗರಿಷ್ಠ ಉಷ್ಣಾಂಶ 32.6 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

‘ನೈರುತ್ಯ ಭಾಗದಲ್ಲಿ ಮೇಲ್ಮೈ ಸುಳಿಗಾಳಿ ಬೀಸುತ್ತಿದೆ ಹಾಗೂ ಬೀಸು­ತ್ತಿರುವ ಗಾಳಿಯು ತೇವಾಂಶ ಹೊಂದಿ­ರುವುದರಿಂದ ಮಳೆ­ಯಾಗು­ತ್ತಿದೆ’ ಎಂದು ಹವಾಮಾನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು. ‘ಕಳೆದ ವರ್ಷ ಫೆ.27 ಮತ್ತು 28 ರಂದು ಇದೇ ರೀತಿ ತುಂತುರು ಮಳೆ­ಯಾ­ಗಿತ್ತು. ಮುಂದಿನ ಎರಡು ದಿನ­ಗಳಲ್ಲಿ ಮೋಡ ಕವಿದ ವಾತಾ­ವರ­ಣ­ವಿರಲಿದ್ದು, ತುಂತುರು ಮಳೆಯಾಗುವ ಸಾಧ್ಯತೆಯಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT