ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಡೊ ಉಗ್ರರಿಂದ 37 ಬುಡಕಟ್ಟು ಜನರ ಹತ್ಯೆ

Last Updated 23 ಡಿಸೆಂಬರ್ 2014, 20:09 IST
ಅಕ್ಷರ ಗಾತ್ರ

ಗುವಾಹಟಿ (ಪಿಟಿಐ): ಅಸ್ಸಾಂ ರಾಜ್ಯದ ಸೋನಿತ್‌ಪುರ ಮತ್ತು ಕೊಕ್ರಝಾರ್‌ ಜಿಲ್ಲೆ­­ಗಳ ನಾಲ್ಕು ಸ್ಥಳಗಳಲ್ಲಿ ಮಂಗಳ­ವಾರ ರಾತ್ರಿ ಶಂಕಿತ ಬೊಡೊ ಉಗ್ರ­ಗಾಮಿ­ಗಳು ಸರಣಿ ದಾಳಿ ನಡೆಸಿ, ಮುಖ್ಯವಾಗಿ ನಾಲ್ವರು ಮಹಿಳೆ­ಯರು ಸೇರಿದಂತೆ ಬುಡಕಟ್ಟು ವರ್ಗಗಳ 37 ಜನರನ್ನು ಹತ್ಯೆ ಮಾಡಿದ್ದಾರೆ.

ಶಾಂತಿ ಮಾತುಕತೆಯನ್ನು ವಿರೋಧಿ­ಸು­ತ್ತಿರುವ ಬೊಡೊಲ್ಯಾಂಡ್‌ ರಾಷ್ಟ್ರೀಯ ಪ್ರಜಾಸತ್ತಾತ್ಮಕ ರಂಗದ (ಎನ್‌ಡಿಎಫ್‌ಬಿ) ಸಾಂಗ್‌ಬಿಜಿತ್‌ ಬಣಕ್ಕೆ ಸೇರಿದ ಭಾರಿ ಶಸ್ತ್ರಸಜ್ಜಿತ ಉಗ್ರರು ನಡೆಸಿದ ಈ ದಾಳಿಯಲ್ಲಿ ಇತರ 10 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೋನಿತ್‌ಪುರ ಜಿಲ್ಲೆಯ ನಾಲ್ಕು ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ  ಕರ್ಫ್ಯೂ ವಿಧಿಸಲಾಗಿದೆ. ಕೇಂದ್ರ ಸರ್ಕಾ­ರ ಪರಿ­ಸ್ಥಿತಿ ಅಲೋಕಿಸುತ್ತಿದ್ದು, ಸ್ಥಳಕ್ಕೆ ಅರೆ­ಸೇನಾಪಡೆ­ಗಳನ್ನು ಕಳುಹಿಸಿದೆ.

ಖಂಡನೆ: ಈ ಮಧ್ಯೆ, ನಿರಪರಾಧಿ ಜನರ ಹತ್ಯೆಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಖಂಡಿಸಿದ್ದಾರೆ. ‘ಇದೊಂದು ಹೇಡಿ­ಗಳ ಕೃತ್ಯ’ ಎಂದು ಮೋದಿ ಟ್ವೀಟ್‌ ಮಾಡಿದ್ದು, ಅಸ್ಸಾಂಗೆ ಪ್ರಯಾಣ ಬೆಳೆ­ಸಿ­ರುವ  ಸಿಂಗ್‌, ‘ನಿರ­ಪ­ರಾಧಿ ಜನರ ಹತ್ಯೆ­­ಯನ್ನು ಎಂದಿಗೂ ಸಮರ್ಥಿ­ಸ­ಲಾಗದು’ ಎಂದಿದ್ದಾರೆ.  ಜತೆಗೆ ಇಬ್ಬರೂ ನಾಯಕರು ಅಸ್ಸಾಂ ಮುಖ್ಯ­­ಮಂತ್ರಿ ತರುಣ್‌ ಗೊಗೋಯ್‌ ಅವರೊಂದಿಗೆ ಮಾತ­­ನಾಡಿ, ಘಟನೆಯ ವಿವರ ಪಡೆದಿದ್ದು, ರಾಜ್ಯ ಸರ್ಕಾರಕ್ಕೆ ಎಲ್ಲ ನೆರವಿನ ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT