ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೋಧಗಯಾ ಯಾತ್ರೆಗೆ ವಿಶೇಷ ರೈಲು

ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಹೇಳಿಕೆ
Last Updated 1 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಬೋಧಗಯಾ ಮತ್ತು ನಾಗಪುರದ ದೀಕ್ಷಾ ಭೂಮಿಗೆ ಯಾತ್ರೆ ಕೈಗೊಳ್ಳುವ ಅಂಬೇಡ್ಕರ್‌ ಅನುಯಾಯಿ­ಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮುಂದಿನ ವರ್ಷದಿಂದ ರಾಜ್ಯ ಸರ್ಕಾರದ ವತಿಯಿಂದ ವಿಶೇಷ ರೈಲು­ಗಳ ವ್ಯವಸ್ಥೆ ಮಾಡಲಾಗುತ್ತದೆ’ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತಿಳಿಸಿದರು.

ನಗರದ ದಂಡು ಪ್ರದೇಶದ ರೈಲು ನಿಲ್ದಾಣದಿಂದ ಬುಧವಾರ ನಾಗಪುರದ ದೀಕ್ಷಾಭೂಮಿಗೆ ತೆರಳಿದ ಯಾತ್ರಾರ್ಥಿ­ಗಳಿಗೆ ಬೀಳ್ಕೊಟ್ಟ ಅವರು ನಂತರ ಸುದ್ದಿಗಾರರೊಂದಿಗೆ  ಮಾತನಾಡಿದರು.

‘ಹಜ್‌ ಯಾತ್ರಿಗಳಿಗೆ ನೀಡುವ ಸೌಲಭ್ಯದ ಮಾದರಿಯಲ್ಲಿ ಬೌದ್ಧ ಅನುಯಾಯಿ ಅಲ್ಪಸಂಖ್ಯಾತರು ಕೈಗೊಳ್ಳುವ ಯಾತ್ರೆಗಳಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮುಂದಿನ ವರ್ಷದಿಂದ ವಿಶೇಷ ರೈಲುಗಳನ್ನು ವ್ಯವಸ್ಥೆ ಮಾಡಲಾಗುತ್ತದೆ. ಯಾತ್ರಿಗ­ಳನ್ನು ಅರ್ಜಿ ಆಹ್ವಾನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಪ್ರಯಾಣ ಉಚಿತವಾಗಿರುತ್ತದೆ’ ಎಂದು ತಿಳಿಸಿದರು.

ದಂಡುಪ್ರದೇಶದಿಂದ ಬುಧವಾರ ವಿಶೇಷ ರೈಲಿನಲ್ಲಿ ಸಾವಿರಕ್ಕೂ ಅಧಿಕ ಅಂಬೇಡ್ಕರ್‌ ಅನುಯಾಯಿಗಳು ನಾಗಪುರದ ದೀಕ್ಷಾಭೂಮಿಗೆ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT