ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೋಧನೆ ಜೀವನ ಧರ್ಮ: ಮೋದಿ

Last Updated 4 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್‌):  ಬೋಧನೆ ‘ಜೀವನ ಧರ್ಮವೇ’ ಹೊರತು ವೃತ್ತಿ ಅಥವಾ ಉದ್ಯೋಗ ಅಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಾಖ್ಯಾನಿಸಿದ್ದಾರೆ. ತಮ್ಮ ನಿವಾಸದಲ್ಲಿ ಗುರುವಾರ ನಡೆದ ಕಾರ್ಯಕ್ರ­ಮದಲ್ಲಿ ರಾಷ್ಟ್ರ­ಪ್ರಶಸ್ತಿ ಪುರಸ್ಕೃತ 350 ಶಿಕ್ಷಕರನ್ನು ಉದ್ದೇಶಿಸಿ ಅವರು ಮಾತ­ನಾಡಿದರು.

‘ಶಿಕ್ಷಕರಾದವರು ಯಾವತ್ತೂ ನಿವೃತ್ತಿ ಹೊಂದುವುದಿಲ್ಲ. ಹೊಸ ತಲೆಮಾರಿಗೆ ಶಿಕ್ಷಣ ನೀಡಲು ಅವರು ಸಕ್ರಿಯರಾ­ಗಿರುತ್ತಾರೆ’ ಎಂದರು.
‘ನಾನು ಗುಜ­ರಾತ್‌ ಮುಖ್ಯ­ಮಂತ್ರಿ­ಯಾಗಿ­ದ್ದಾಗ ಶಾಲೆಯಲ್ಲಿದ್ದ ನನ್ನ ಸಹಪಾಠಿ­ಗಳನ್ನು ಮತ್ತು ಶಿಕ್ಷಕರನ್ನು ನನ್ನ ಮನೆಗೆ ಕರೆದು ಸನ್ಮಾನಿಸಿದ್ದೆ.  ಇದು ನನ್ನ ಇಚ್ಛೆ ಆಗಿತ್ತು’ ಎಂದು ನುಡಿದರು.

‘ಸಮಾಜ ಅಭಿವೃದ್ಧಿ ಹೊಂದಬೇಕಾ­ದರೆ  ಶಿಕ್ಷಕರು ಸ್ಪಷ್ಟವಾದ ಮುನ್ನೋಟ ಹೊಂದಿರಬೇಕು’ ಎಂದೂ ಪ್ರಧಾನಿ ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ಪ್ರಧಾನಿ­ಯೊಂ­ದಿಗೆ ಸಂವಾದ ನಡೆಸಿದ ಶಿಕ್ಷಕರು ಕಲಿಕೆಯ ಹಲವಾರು ಮಜಲುಗಳ ಬಗ್ಗೆ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT