ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೋರ್‌ವೆಲ್‌ ಸರಿಪಡಿಸಿ, ನೀರಿನ ಬವಣೆ ಪರಿಹರಿಸಿ

Last Updated 1 ಫೆಬ್ರುವರಿ 2016, 19:37 IST
ಅಕ್ಷರ ಗಾತ್ರ

ವಾರ್ಡ್‌ ನಂ. 134 ಬಾಪೂಜಿನಗರ 2ನೇ ಹಂತದಲ್ಲಿರುವ ಬಹುತೇಕ ಜನರು ಕುಡಿಯುವ ನೀರಿಗಾಗಿ ಬೋರ್‌ವೆಲ್‌ ಅವಲಂಬಿಸಿದ್ದಾರೆ. ಆದರೆ ಈ ಬೋರ್‌ವೆಲ್‌ ಕಳೆದ ಒಂದು ತಿಂಗಳಿನಿಂದ ದುರಸ್ತಿಯಲ್ಲಿದೆ.

ಅಲ್ಲದೆ ಈ ಬಡಾವಣೆಯಲ್ಲಿ ಕುಡಿಯುವ ಕಾವೇರಿ ನೀರಿನ ಪೂರೈಕೆ ಸಮಪರ್ಕವಾಗಿಲ್ಲ. ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಾಗ ತಾತ್ಕಾಲಿಕವಾಗಿ ಪರಿಹಾರ ಒದಗಿಸಿದರೆ ವಿನಾ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಿಲ್ಲ.

ಅದರಲ್ಲೂ 4ನೇ ಮುಖ್ಯರಸ್ತೆಯವರು ಸಂಬಂಧಪಟ್ಟವರ  ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಈ ಸಮಸ್ಯೆಗಳನ್ನು ಬಗೆಹರಿಸಿ ಜನಸಾಮಾನ್ಯರಿಗೆ ಬೋರ್‌ವೆಲ್‌ ಕೊಳವೆಗಳನ್ನು ಸರಿಪಡಿಸಿ ಮತ್ತು 4ನೇ ಮುಖ್ಯರಸ್ತೆಯಲ್ಲಿ ಕೊಳಾಯಿಗಳನ್ನು ಅಳವಡಿಸಬೇಕಾಗಿ ಮನವಿ.
– ತಿಮ್ಮರಾಜು. ಎಂ. ಜೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT