ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ಗಳಿಗೆ ತಿಂಗಳಲ್ಲಿ ಸಾಲುಸಾಲು ರಜೆ

ಶನಿವಾರ ಭಾನುವಾರಗಳ ಜತೆಗೆ ನೌಕರರ ಪ್ರತಿಭಟನೆ
Last Updated 30 ಜೂನ್ 2016, 19:30 IST
ಅಕ್ಷರ ಗಾತ್ರ

ಮುಂಬೈ: ಈ ತಿಂಗಳಲ್ಲಿ ಸಾಲು ಸಾಲು ರಜೆಗಳು ಬಂದಿರುವುದರಿಂದ ಬ್ಯಾಂಕುಗಳು, ಅದರಲ್ಲೂ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ವ್ಯವಹಾರಗಳ ಮೇಲೆ ವ್ಯತಿರಿಕ್ತ ಪರಿಣಾಮವಾಗಲಿದೆ. ಎರಡು ಮತ್ತು ನಾಲ್ಕನೇ ಶನಿವಾರ, ಭಾನುವಾರ ಮತ್ತು ಬ್ಯಾಂಕ್‌ ನೌಕರರ ಮುಷ್ಕರ ಸೇರಿದಂತೆ ಈ ತಿಂಗಳಲ್ಲಿ ಒಟ್ಟು 11 ದಿನ ಬ್ಯಾಂಕುಗಳಿಗೆ ರಜೆ ಇದೆ.

ಭಾರತೀಯ ಸ್ಟೇಟ್‌ ಬ್ಯಾಂಕ್‌ ನೊಂದಿಗೆ(ಎಸ್‌ಬಿಐ) ವಿಲೀನ ಪ್ರಕ್ರಿಯೆ ವಿರೋಧಿಸಿ ಎಸ್‌ಬಿಐನ ಐದು ಸಹವರ್ತಿ ಬ್ಯಾಂಕುಗಳ 45 ಸಾವಿರ ನೌಕರರು ಜುಲೈ 12 ರಂದು ಸರ್ಕಾರದ ವಿರುದ್ಧ ಪ್ರತಿಭಟನೆ  ನಡೆಸಲಿದ್ದಾರೆ. ಇದಲ್ಲದೆ ಐದು ಲಕ್ಷ ಬ್ಯಾಂಕ್‌ ಸಿಬ್ಬಂದಿ ಸದಸ್ಯತ್ವ ಹೊಂದಿರುವ ಅಖಿಲ ಭಾರತ ಬ್ಯಾಂಕ್‌ ನೌಕರರ ಸಂಘ ಮತ್ತು ಒಂದು ಲಕ್ಷ ನೌಕರರ ಸದಸ್ಯತ್ವ ಪಡೆದಿರುವ ಅಖಿಲ ಭಾರತ ಬ್ಯಾಂಕ್‌ ಅಧಿಕಾರಿಗಳ ಸಂಘಗಳೂ ದೇಶದಾದ್ಯಂತ ಮುಷ್ಕರ ನಡೆಸಲಿವೆ.

ಸುಧಾರಣೆಗಳ ವಿರುದ್ಧ ಪ್ರತಿಭಟನೆ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳನ್ನು ಮುಚ್ಚುವುದು ಮತ್ತು ವಿಲೀನಗೊಳಿಸುವ ಸರ್ಕಾರದ ‘ಬ್ಯಾಂಕ್‌ಗಳ ಸುಧಾರಣೆ ನೀತಿ’ ವಿರೋಧಿಸಿ ದಿ ಯುನೈಟೆಡ್‌ ಪೋರಂ ಆಫ್‌ ಬ್ಯಾಂಕ್‌ ಯೂನಿಯನ್‌ ಜುಲೈ 29 ರಂದು ಪ್ರತಿಭಟನೆಗೆ ಕರೆ ನೀಡಿದೆ.

ಪ್ರತಿಭಟನೆ ಮುಷ್ಕರಗಳನ್ನು ಬಿಟ್ಟು ಈದ್‌ ರಜೆ ಸೇರಿದಂತೆ ಎರಡು ಮತ್ತು ನಾಲ್ಕನೇ ಶನಿವಾರ ಹಾಗೂ ಐದು ಭಾನುವಾರಗಳು ಗ್ರಾಹಕರ ಬ್ಯಾಂಕ್‌ ವ್ಯವಹಾರಗಳ ಮೇಲೆ ಪರಿಣಾಮ ಬೀರಲಿವೆ. ನೌಕರರ ಮುಷ್ಕರದಿಂದಾಗಿ ಚೆಕ್‌ ಕ್ಲಿಯರಿಂಗ್‌, ಹಣ ಠೇವಣಿ ಮಾಡುವುದೂ ಸೇರಿದಂತೆ ಬ್ಯಾಂಕ್‌ಗಳ ವ್ಯವಹಾರಗಳಿಗೆ ತೊಂದರೆ ಆಗಲಿದೆ ಎನ್ನುತ್ತಾರೆ ಪರಿಣಿತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT