ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್‌: ಐಬಿಎಲ್‌ ಟೂರ್ನಿ ಮುಂದೂಡಿಕೆ

Last Updated 22 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತ ಬ್ಯಾಡ್ಮಿಂಟನ್‌ ಸಂಸ್ಥೆ (ಬಿಎಐ) ಸೆಪ್ಟೆಂಬರ್‌ನಲ್ಲಿ  ನಡೆಯಬೇಕಿದ್ದ  ಎರಡನೇ ಆವೃತ್ತಿಯ  ಇಂಡಿಯನ್‌ ಬ್ಯಾಡ್ಮಿಂಟನ್‌ ಲೀಗ್‌ (ಐಬಿಎಲ್‌) ಟೂರ್ನಿಯನ್ನು 2015ರ  ಆರಂಭದಲ್ಲಿ ನಡೆಸಲು ನಿರ್ಧರಿಸಿದೆ.

ಈ ಮೊದಲು ಸೆಪ್ಟೆಂಬರ್‌ 30 ರಿಂದ ಅಕ್ಟೋಬರ್‌  15ರವರೆಗೆ ಟೂರ್ನಿಯ ದಿನಾಂಕ ನಿಗದಿಯಾ ಗಿತ್ತು. ಆದರೆ ಜುಲೈನಲ್ಲಿ ಕಾಮನ್‌ ವೆಲ್ತ್‌ ಮತ್ತು ಸೆಪ್ಟೆಂಬರ್‌ನಲ್ಲಿ ಏಷ್ಯನ್‌ ಕ್ರೀಡಾಕೂಟ  ನಡೆಯಲಿದ್ದು, ವಿಶ್ವದ ಅಗ್ರಮಾನ್ಯ ಆಟಗಾರರು  ಟೂರ್ನಿಗೆ ಅಲಭ್ಯರಾಗುವ ಸಾಧ್ಯತೆ ಇದೆ. ಹೀಗಾಗಿ  ಬಿಎಐ  ಈ ಬಾರಿ ನಡೆಯಬೇಕಿದ್ದ ಟೂರ್ನಿಯನ್ನು ಮುಂದೂಡಿದೆ.

‘ಕಾಮನ್‌ವೆಲ್ತ್‌ ಹಾಗೂ ಏಷ್ಯನ್‌ ಕ್ರೀಡಾಕೂಟಗಳು  ಇರುವುದರಿಂದ ಐಬಿಎಲ್‌ ಟೂರ್ನಿಯನ್ನು 2015ಕ್ಕೆ ಮುಂದೂಡ ಬೇಕಾಯಿತು’ ಎಂದು ಬಿಎಐ ಆಡಳಿತ ವಿಭಾಗದ ಉಪಾ ಧ್ಯಕ್ಷ ಟಿ.ಪಿ.ಎಸ್‌. ಪುರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT