ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡ್ಮಿಂಟನ್ ಲೀಗ್‌ಗೆ ಇಂದು ಚಾಲನೆ

ವಾರಿಯರ್ಸ್‌ ಹಾಗೂ ಮುಂಬೈ ತಂಡಗಳ ನಡುವೆ ಮೊದಲ ಪೈಪೋಟಿ
Last Updated 1 ಜನವರಿ 2016, 19:30 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಎರಡು ವರ್ಷಗಳ ಬಳಿಕ ಶನಿವಾರ ಇಲ್ಲಿನ ಭಾರತ ರಾಷ್ಟ್ರೀಯ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ಗೆ  ಚಾಲನೆ ದೊರೆಯಲಿದೆ.

ಈ ಟೂರ್ನಿ ಈ ಬಾರಿ ಹೊಸ ಮಾದರಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಗಮನಸೆಳೆಯಲಿದೆ. 2013ರಲ್ಲಿ ಆರಂಭವಾದ ಇಂಡಿಯನ್‌ ಬ್ಯಾಡ್ಮಿಂಟನ್‌ ಲೀಗ್‌ ಈಗ ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ ಆಗಿ ಮರುನಾಮಕರಣಗೊಂಡಿದೆ.

‘ಟ್ರಂಪ್‌ ಮ್ಯಾಚ್‌’ ಎಂಬ ವಿನೂತನ ಮಾದರಿ ಈ ಬಾರಿಯ ಹೊಸತನಗಳಲ್ಲಿ ಒಂದು. ಇದು ಚುಟುಕಿನ ಆಟಕ್ಕೆ ಒತ್ತು ನೀಡುವುದರಿಂದ ಟೂರ್ನಿಗೆ ಮತ್ತಷ್ಟು ಮೆರುಗು ಹೆಚ್ಚಿಸುವ ನಿರೀಕ್ಷೆ ಇದೆ.

ಸೈನಾ ನೆಹ್ವಾಲ್‌ ಸಾರಥ್ಯದ ಅವಧ್‌ ವಾರಿಯರ್ಸ್‌ ಹಾಗೂ ಆರ್‌.ಎಮ್‌.ವಿ ಗುರುಸಾಯಿದತ್‌ ಮತ್ತು ಎಚ್‌.ಎಸ್‌ ಪ್ರಣಯ್‌ ಅವರನ್ನು ಒಳಗೊಂಡ ಮುಂಬೈ ರಾಕೆಟ್ಸ್‌ ತಂಡಗಳು ಶನಿವಾರ ಮೊದಲ ಸವಾಲು ಸ್ವೀಕರಿಸಲು ಸಜ್ಜಾಗಿವೆ.

‘ಟೂರ್ನಿಯ ಕೊನೆಯ ಹಂತ ದವರೆಗೂ ಕುತೂಹಲ ಉಳಿಸಿಕೊಂಡು ಹೋಗುವ ‘ಟ್ರಂಪ್‌ ಮ್ಯಾಚ್‌’ ಮಾದರಿ ಈ ಟೂರ್ನಿಗೆ ವಿನೂತನ ಆಯಾಮ ನೀಡಲಿದೆ. ಒತ್ತಡದಲ್ಲೂ ಉತ್ತಮವಾಗಿ ಆಡುವ ತಂಡಗಳು ಗೆಲುವು ಒಲಿಸಿಕೊಳ್ಳಲಿವೆ’ ಎಂದು ರಾಷ್ಟ್ರೀಯ ಕೋಚ್‌ ಪುಲ್ಲೇಲ ಗೋಪಿಚಂದ್‌ ಹೇಳಿದ್ದಾರೆ.

ಒಟ್ಟು ಆರು ತಂಡಗಳು ಕಣದಲ್ಲಿವೆ. ಡೆಲ್ಲಿ ಏಸರ್ಸ್‌ ತಂಡದಲ್ಲಿ ಟಾಮಿ ಸುಗಿಯಾರ್ಟೊ ಪ್ರಮುಖ ಆಕರ್ಷಣೆಯಾಗಿದ್ದಾರೆ. ಹೈದರಾಬಾದ್‌ ಹಂಟರ್ಸ್ ತಂಡದಲ್ಲಿ ಗರಿಷ್ಠ ಮೊತ್ತ ಪಡೆದ ಮಲೇಷ್ಯಾದ ಪ್ರಮುಖ ಆಟಗಾರ ಲೀ ಚೊಂಗ್‌ ವಿ ಇದ್ದಾರೆ. ಬೆಂಗಳೂರು ಟಾಪ್‌ ಗನ್ಸ್‌ ತಂಡ ಕೆ.ಶ್ರೀಕಾಂತ್‌ ಹಾಗೂ ಡಬಲ್ಸ್ ಆಟಗಾರ್ತಿ ಅಶ್ವಿನಿ ಪೊನ್ನಪ್ಪ ಅವರನ್ನು ಹೊಂದಿದೆ.  ಪಿ.ವಿ ಸಿಂಧು ಚೆನ್ನೈ ಸ್ಮ್ಯಾಷರ್ಸ್‌ನ ಬಲ ಹೆಚ್ಚಿಸಿದ್ದಾರೆ, ಅವಧ್‌ ವಾರಿಯರ್ಸ್‌ನಲ್ಲಿ ಸೈನಾ ನೆಹ್ವಾಲ್‌ ಇದ್ದಾರೆ. ಮುಂಬೈ ರಾಕೆಟ್ಸ್‌ ತಂಡ ಎಚ್‌.ಎಸ್‌ ಪ್ರಣಯ್‌ ಅವರನ್ನು ಹೊಂದಿದೆ.

ಟೂರ್ನಿಯ ಉದ್ಘಾಟನಾ ಸಮಾ ರಂಭದಲ್ಲಿ ಬಾಲಿವುಡ್‌ ನಟಿ ಜಾಕ್ವೆಲಿನ್‌  ಫರ್ನಾಂಡಿಸ್‌ ಹಾಗೂ ಸಂಗೀತ ಸಂಯೋಜಕ ಸಲೀಮ್‌ ಸುಲೇಮಾನ್‌ ಪ್ರದರ್ಶನ ನೀಡಲಿದ್ದಾರೆ.

ಜಾಕ್ವೆಲಿನ್‌ ತಮ್ಮ ನೃತ್ಯದ ಮೂಲಕ ಗಮನಸೆಳೆಯಲಿದ್ದರೆ, ಸಲೀಮ್‌ ಪಿಬಿಎಲ್‌ ಗೀತೆಯನ್ನು ನುಡಿಸಲಿದ್ದಾರೆ. ವಿಜೇತ ತಂಡ ₹3 ಕೋಟಿ ಬಹುಮಾನ ಮೊತ್ತ ತನ್ನದಾಗಿಸಿಕೊಳ್ಳ ಲಿದೆ. ಹಾಗೂ ರನ್ನರ್ಸ್‌ ಅಪ್‌ ತಂಡಕ್ಕೆ ₹ 2 ಕೋಟಿ ಲಭಿಸಲಿದೆ. ಸೆಮಿಫೈನಲ್‌ ತಲುಪಿದ ಎರಡು ತಂಡಗಳು ತಲಾ ₹75ಲಕ್ಷ ಪಡೆದುಕೊಳ್ಳಲಿವೆ.

ಪಿಬಿಎಲ್‌ ಪಂದ್ಯಗಳು ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ  ನೇರಪ್ರಸಾರಗೊಳ್ಳಲಿದೆ. ಮುಂಬೈ ಬಳಿಕ ಜನವರಿ 4, 5 6 ರಂದು ಲಖನೌನಲ್ಲಿ ಎರಡನೇ ಹಂತದ ಪಂದ್ಯಗಳು ನಡೆಯಲಿವೆ.

ಇಂದಿನ ಪಂದ್ಯ
ಅವಧ್ ವಾರಿಯರ್ಸ್‌–ಮುಂಬೈ ರಾಕೆಟ್ಸ್‌
ಆರಂಭ: ಸಂಜೆ 6.30ಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT