ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾರೀಸ್‌ ಶಿಕ್ಷಣ ಸಮೂಹಕ್ಕೆ 110ರ ಸಂಭ್ರಮ

Last Updated 26 ಜೂನ್ 2016, 19:30 IST
ಅಕ್ಷರ ಗಾತ್ರ

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಡಿಯಲ್ಲಿರುವ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಧ್ಯೇಯವಾಕ್ಯ ‘ಮೈ ಲಾರ್ಡ್‌! ಅಡ್ವಾನ್ಸ್‌ ಮಿ ಇನ್ ನಾಲೇಜ್’. ವಿದ್ಯಾರ್ಥಿಗಳಿಗೆ ಪರಿಪೂರ್ಣ ವೃತ್ತಿಪರ ಶಿಕ್ಷಣ ನೀಡುವುದು. 

ವಿಶ್ವಮಟ್ಟದಲ್ಲಿ ಉನ್ನತ ಶಿಕ್ಷಣ ಸಂಸ್ಥೆಯನ್ನಾಗಿ ಬೆಳೆಸುವುದು. ವಿದ್ಯಾರ್ಥಿಗಳನ್ನು ಎಲ್ಲ ಕ್ಷೇತ್ರಗಳಲ್ಲೂ ಸಮರ್ಥ ನಾಯಕರನ್ನಾಗಿ ಮಾಡುವುದರ ಜೊತೆಗೆ ಶಾಂತಿಯುತ ಸಮಾಜ ನಿರ್ಮಾಣ ಸಂಸ್ಥೆಯ ಗುರಿ.

ಬ್ಯಾರೀಸ್‌ ಎಜುಕೇಷನ್‌ ಗ್ರೂಪ್‌ ಈಗ 110ನೇ ವರ್ಷದ ಸಂಭ್ರಮದಲ್ಲಿದೆ. ಸದ್ಯ 22ಕ್ಕೂ ಹೆಚ್ಚು ಸಂಸ್ಥೆಗಳನ್ನು ಹೊಂದಿದ್ದು, 5,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಜ್ಞಾನದ ದೀವಿಗೆ ಹಚ್ಚುತ್ತಿದೆ.

ಇದರಲ್ಲಿ ಒಂದು ಎಂಜಿನಿಯರ್ ಹಾಗೂ ಆರ್ಕಿಟೆಕ್ಟ್ ಕಾಲೇಜನ್ನು ಬಿಟ್ಟರೆ ಉಳಿದವು, ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢ, ಪಿಯು, ಪದವಿ ಹಾಗೂ ಶಿಕ್ಷಣ ತರಬೇತಿ ಸಂಸ್ಥೆಗಳಿವೆ.
 
1906ರಲ್ಲಿ ಒಂದು ಗುಡಿಸಿಲಿನಲ್ಲಿ ಆರಂಭವಾದ ಈ ಸಂಸ್ಥೆ 1948ರಲ್ಲಿ ಸೈಯದ್ ಮಹಮದ್ ಬ್ಯಾರಿ ಅವರ ಅಜ್ಜ ಸೂಫಿ ಸಾಹೇಬರು ಹೆಂಚಿನ ಶಾಲೆಯನ್ನಾಗಿ ಮಾರ್ಪಡಿಸಿದರು.

ಇವರ ತಂದೆ ಮೊಹಿದಿನ್ ಬ್ಯಾರಿ ಅವರು ಈ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರಿಗೆ ಮಾರ್ಕ್ ಡಿಸೋಜ ಹಾಗೂ ತಿಮ್ಮಪ್ಪ ಶೇರಿಗಾರ್ ಬೆಂಬಲವಾಗಿ ನಿಂತರು.

ಶಾಲೆಯಲ್ಲಿ ಯಾವುದೇ ಜಾತಿ, ಧರ್ಮ ಎಂಬ ಭೇದಭಾವ ಇರಲಿಲ್ಲ. 1986ರಲ್ಲಿ ಕೇವಲ ನಾಲ್ಕು ವಿದ್ಯಾರ್ಥಿಗಳಿದ್ದಾರೆ ಎಂಬ ಕಾರಣಕ್ಕಾಗಿ ಶಾಲೆಯನ್ನು ಮುಚ್ಚಲು ಡಿಡಿಪಿಐ ಆದೇಶ ನೀಡಿದಾಗ. ಸೈಯದ್ ಮಹಮದ್ ಬ್ಯಾರಿ ಹಾಗೂ ಅವರ ಸಹೋದರರು ಶಾಲೆಯನ್ನು ಉಳಿಸಿಕೊಂಡು ಬೆಳೆಸಿದರು.

ಮಂಗಳೂರು ವಿಶ್ವವಿದ್ಯಾಲಯದ ಸಮೀಪದ ನಿಸರ್ಗ ರಮಣೀಯ ಪ್ರದೇಶದಲ್ಲಿ ಸ್ಥಾಪನೆಯಾಗಿರುವ ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (Bearys Institute Of Technology - BIT) ಆರಂಭಿಕ ದಿನಗಳಿಂದಲೇ ಶ್ರೇಷ್ಠ ಸಂಸ್ಥೆ ಎಂಬ ಮನ್ನಣೆಗೆ ಪಾತ್ರವಾಗಿದೆ.

ಮೆಕ್ಯಾನಿಕಲ್ ಎಂಜಿನಿಯರಿಂಗ್, ಸಿವಿಲ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್, ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಕೋರ್ಸುಗಳಿವೆ.

ಸ್ನಾತಕೋತ್ತರ ಕೋರ್ಸುಗಳು: ಎಂ.ಟೆಕ್. ಪ್ರೊಗ್ರಾಂ ಇನ್ ಮೆಕ್ಯಾನಿಕಲ್ ಎಂಜಿನಿಯರಿಂಗ್, ಎಂ.ಟೆಕ್.ಇನ್ ಎನರ್ಜಿ ಸಿಸ್ಟಂ ಎಂಜಿನಿಯರಿಂಗ್ ಹಾಗೂ ಎಂ.ಟೆಕ್ ಇನ್ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಇದ್ದು, ಡಾಕ್ಟರಲ್ ಪಿಎಚ್‌.ಡಿ ಪ್ರೋಗ್ರ್ಯಾಂ ಇನ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ಹಾಗೂ ಡಾಕ್ಟರಲ್ ಪಿಎಚ್.ಡಿ ಪ್ರೋಗ್ರಾಂ ಇನ್ ಫಿಸಿಕ್ಸ್ ಕೋರ್ಸುಗಳಿವೆ.

ಪಾಲಿಟೆಕ್ನಿಕ್‌ನಿಂದ ಸಿವಿಲ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್, ಉದ್ಯಮ ಮತ್ತು ಕಲಿಕೆಯ ಔನ್ಯತ್ಯಕ್ಕೆ ಬ್ಯಾರೀಸ್ ಶಿಕ್ಷಣ ಸಂಸ್ಥೆಗಳು ಆದ್ಯತೆ ನೀಡುತ್ತಿವೆ.

ಮೆಕ್ಯಾನಿಕಲ್ ಎಂಜಿನಿಯರ್ ರಿಸರ್ಚ್ ಸೆಂಟರ್, ರಿನ್ಯೂವೆಬಲ್ ಎನರ್ಜಿ ಅಂಡ್ ಏರೊಡೈನಮಿಕ್ಸ್‌ ಇಂಟರ್‌ ನ್ಯಾಷನಲ್ ನ್ಯೂಕ್ಲಿಯರ್ ಸ್ಟ್ರಕ್ಚರ್ ಅಂಡ್ ಡಿಕೇ ಡಾಟಾ ನೆಟ್ ವರ್ಕ್, ಫಿಸಿಕ್ಸ್ ರಿಸರ್ಚ್‌ ಸೆಂಟರ್‌ಗಳಿವೆ.

ಬೀಡ್ಸ್ ಬ್ಯಾರೀಸ್ ಶಿಕ್ಷಣ ಸಮೂಹ ಸಂಸ್ಥೆಗಳ ಬ್ಯಾರೀಸ್ ಎನ್ವಿರೊ–ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್ (BEADS) ಸಂಸ್ಥೆಯು ಭಾರತದ ಭವಿಷ್ಯದ ವಿನ್ಯಾಸ ಮತ್ತು ನಿರ್ಮಾಣಕ್ಕೆ ನೂತನ ತಲೆಮಾರಿನ ಆರ್ಕಿಟೆಕ್ಚರ್ ಸ್ಕೂಲ್ ಎಂಬ ಗೌರವ ಗಳಿಸಿದೆ.

ಬೀಡ್ಸ್‌ನಲ್ಲಿ ಬಿ.ಆರ್ಕ್. ಕೋರ್ಸ್‌ ಇದೆ. ಬಿಐಟಿ ಮತ್ತು ಬೀಡ್ಸ್‌ ಮೂಲಕ ಮಹತ್ವದ ತಾಂತ್ರಿಕ ಶೈಕ್ಷಣಿಕ ಅಭಿಯಾನ ನಡೆಯುತ್ತಿದೆ. ಮಂಗಳೂರಿನಲ್ಲಿ ಸ್ಥಾಪನೆಯ ದಿನದಿಂದಲೇ ಅಂತರರಾಷ್ಟ್ರೀಯ ಪ್ರಸಿದ್ಧಿಗೆ ಪಾತ್ರವಾಗಿದೆ.

ಸಿಇಟಿಯಲ್ಲಿ 10,000 ರ್‍್ಯಾಂಕ್‌ನೊಳಗಿನ ಸಾಧಕರಿಗೆ ಶೇ. 100ರಷ್ಟು ವಿದ್ಯಾರ್ಥಿವೇತನ, 20,000ದೊಳಗಿನ ಸಾಧಕರಿಗೆ ಶೇ. 50ರಷ್ಟು ವಿದ್ಯಾರ್ಥಿವೇತನವನ್ನು ಬಿಐಟಿ ನೀಡುತ್ತಿದೆ.

ಮಹತ್ವದ ಒಪ್ಪಂದ: ಬಿಐಟಿಯು ನಾರ್ತ್ ಡಕೋಟ ಸ್ಟೇಟ್ ವಿಶ್ವವಿದ್ಯಾಲಯ (NDSU-USA) ಮೆಕ್ಯಾನಿಕಲ್, ಎಂಜಿನಿಯರಿಂಗ್, ರಿಸರ್ಚ್‌ ಸೆಂಟರ್ ಇಂಟರ್‌ನ್ಯಾಷನಲ್ ನೆಟ್ ವರ್ಕ್‌ (NSDD)ಗಳ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದು, ಈ ಮೂಲಕ ಬಿಐಟಿ ಮತ್ತು ವಿವಿಯ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಸಂಶೋಧನೆ ಅಧ್ಯಯನದ ವಿನಿಮಯ ಸಾಧ್ಯವಾಗಲಿದೆ.

‘ನಮ್ಮ ಸಂಸ್ಥೆಯಲ್ಲಿ ಜಾತಿ ಭೇದ ಎಂಬುದಿಲ್ಲ. ನಾವು ಡೊನೇಷನ್ ತೆಗೆದುಕೊಳ್ಳುವುದಿಲ್ಲ. ಕರಾವಳಿಯಲ್ಲಿ ಇರುವ ನಮ್ಮ ಸಂಸ್ಥೆಗಳನ್ನು ಎಲ್ಲಾ ಕಡೆಗೂ ವಿಸ್ತರಿಸಬೇಕು ಎನ್ನುವ ಆಕಾಂಕ್ಷೆ ಇದೆ’ ಎನ್ನುತ್ತಾರೆ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸೈಯದ್ ಮಹಮದ್ ಬ್ಯಾರಿ.

ಮಾಹಿತಿಗೆ 9739887899 ಸಂಪರ್ಕಿಸಬಹುದು. ವೆಬ್‌ಸೈಟ್ ವಿಳಾಸ– www.bitmangalore.edu.in.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT