ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್‌ನಿಂದ ಸ್ಕಾಟ್ಲೆಂಡ್‌ ಪ್ರತ್ಯೇಕ ಇಲ್ಲ

Last Updated 19 ಸೆಪ್ಟೆಂಬರ್ 2014, 9:49 IST
ಅಕ್ಷರ ಗಾತ್ರ

ಎಡಿನ್‌ಬರ್ಗ್‌ (ಪಿಟಿಐ): ಬ್ರಿಟನ್‌ನಿಂದ  ಪ್ರತ್ಯೇಕವಾಗಲು ಬಯಸಿದ್ದ ಕೆಲ ಸ್ಕಾಟ್ಲೆಂಡ್‌ ಜನರಿಗೆ ನಿರಾಸೆಯಾಗಿದ್ದು ಸ್ಕಾಟ್ಲೆಂಡ್‌ ಬ್ರಿಟನ್‌(ಯುಕೆ)ನಲ್ಲೇ ಉಳಿಯಲಿದೆ.

ಸ್ಕಾಟ್ಲೆಂಡ್‌ ಸ್ಥಳೀಯ ಸರ್ಕಾರ  ಬ್ರಿಟನ್‌ನಲ್ಲೇ ಉಳಿಯಬೇಕೇ ಅಥವಾ ಪ್ರತ್ಯೇಕ ರಾಷ್ಟ್ರವಾಗಿ  ಹೊರ ಹೋಗಬೇಕೇ ಎಂದು ನಿರ್ಧರಿಸಲು ಮತದಾನದ ವ್ಯವಸ್ಥೆ ಮಾಡಲಾಗಿತ್ತು.

ಸುಮಾರು 36 ಕೌನ್ಸಿಲ್‌ಗಳಲ್ಲಿ ಜನರು ಮತದಾನ ಮಾಡುವ ಮೂಲಕ ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ.

ಬ್ರಿಟನ್‌ ಜೊತೆಗೆ ಇರಬೇಕೆಂದು ಬಯಸಿ 1,877,252 ಜನರ ಮತ ಚಲಾಯಿಸಿದ್ದಾರೆ. ಜನರ ತೀರ್ಪಿನಿಂದಾಗಿ 1707ರಲ್ಲಿ ಬ್ರಿಟನ್‌ ಸೇರಿದ್ದ ಸ್ಕಾಟ್ಲೆಂಡ್‌ ಹಾಗೆಯೇ ಮುಂದುವರೆಯಲಿದೆ ಎಂದು ಅಲ್ಲಿನ ಸ್ಥಳೀಯ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ಎರಡು ವರ್ಷಗಳಿಂದ ಸ್ಕಾಟ್ಲೆಂಡ್‌ನಲ್ಲಿ ನಡೆದಿದ್ದ ಪ್ರತ್ಯೇಕತೆಯ ಅಭಿಯಾನಕ್ಕೆ ಹಿನ್ನಡೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT