ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್‍ಗೆ ಕಾಲಾವಕಾಶ ನೀಡಲು ಒಕ್ಕೂಟ ಸಮ್ಮತಿ

Last Updated 29 ಜೂನ್ 2016, 20:08 IST
ಅಕ್ಷರ ಗಾತ್ರ

ಬ್ರಸಲ್ಸ್‌(ಎಎಫ್‌ಪಿ): ನಿರ್ಗಮನ ಪ್ರಕ್ರಿಯೆ ಪ್ರಾರಂಭಿಸಲು ಕಾಲಾವಕಾಶ ಬೇಕು ಎಂಬ ಬ್ರಿಟನ್‌ನ ಕೋರಿಕೆಯನ್ನು ಐರೋಪ್ಯ ಒಕ್ಕೂಟ ಒಪ್ಪಿಕೊಂಡಿದೆ. ಆದರೆ, ಇದಕ್ಕಾಗಿ ಹೆಚ್ಚು ಕಾಲ ಕಾಯಲು ಸಾಧ್ಯವಿಲ್ಲ ಎಂದು ಹೇಳಿದೆ.

ಜನಮತಾಭಿಪ್ರಾಯದ ಫಲಿತಾಂಶದ ಬಳಿಕ ಮೊದಲ ಬಾರಿಗೆ ಒಕ್ಕೂಟದ ಸದಸ್ಯರನ್ನು ಭೇಟಿ ಮಾಡಿದ ಬ್ರಿಟನ್ ಪ್ರಧಾನಿ ಡೇವಿಡ್‌ ಕ್ಯಾಮರೂನ್ ಅವರು ಸಮಾಲೋಚನೆ ನಡೆಸಿದರು. ಸಭೆಯ ಬಳಿಕ ಮಾತನಾಡಿದ ಐರೋಪ್ಯ ಒಕ್ಕೂಟದ ಅಧ್ಯಕ್ಷ ಡೊನಾಲ್ಡ್‌ ಟಸ್ಕ್‌, ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲು ಸಮಯಾವಕಾಶದ ಅಗತ್ಯವಿದೆ ಎಂಬ ಬ್ರಿಟನ್‌ನ ಕೋರಿಕೆಯನ್ನು ಅರ್ಥಮಾಡಿಕೊಂಡಿರುವುದಾಗಿ ಹೇಳಿದರು.

ಆದರೆ, ಬ್ರೆಕ್ಸಿಟ್‌ ಫಲಿತಾಂಶವು  ಒಕ್ಕೂಟದ ಇತರೆ ದೇಶಗಳ ಮೇಲೂ ವ್ಯಾಪಕ ಪರಿಣಾಮ ಬೀರುತ್ತಿದೆ. ಇದರಿಂದ ಇತರೆ ದೇಶಗಳೂ ಒಕ್ಕೂಟ ತೊರೆಯುವ ಅಪಾಯ ಉಂಟಾಗಬಹುದು ಎಂಬ ಕಳವಳವಿದೆ. ಹೀಗಾಗಿ ತನ್ನ ಮುಂದಿನ ನಡೆಯ ಬಗ್ಗೆ ಆಲೋಚಿಸಲು ಬ್ರಿಟನ್‌ಗೆ ಹೆಚ್ಚು ಸಮಯವಿಲ್ಲ ಎಂದು ಐರೋಪ್ಯ ಕಮಿಷನ್‌ನ ಅಧ್ಯಕ್ಷ ಜೀನ್‌ ಕ್ಲಾಡ್‌ ಜಂಕರ್‌ ಹೇಳಿದ್ದಾರೆ. ನೂತನ ಪ್ರಧಾನಿ ನೇಮಕವಾದ ಎರಡು ವಾರದಲ್ಲಿಯೇ ಕಲಂ 50ಕ್ಕೆ ಚಾಲನೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಮೊದಲ ಸಭೆ ನಡೆಸಿದ ಒಕ್ಕೂಟ: ಬ್ರೆಕ್ಸಿಟ್‌ ಪರ ಜನರು ಮತಚಲಾಯಿಸಿದ ಬಳಿಕ ಯುರೋಪಿನ ಮುಖಂಡರು 40 ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಬ್ರಿಟನ್‌  ಪಾಲ್ಗೊಳ್ಳುವಿಕೆ ಇಲ್ಲದೆಯೇ ಬುಧವಾರ ಸಭೆ ನಡೆಸಿದರು.

‘ಮಾರುಕಟ್ಟೆ ಇಲ್ಲ’
ಸರಕುಗಳ ಅನಿರ್ಬಂಧಿತ ಸಾಗಾಟಕ್ಕೆ ಅವಕಾಶ ಕೊಡುವ ನಿಯಮ ಒಪ್ಪದೆಯೇ   ಐರೋಪ್ಯ ಒಕ್ಕೂಟದ ಏಕಮಾರುಕಟ್ಟೆಯಲ್ಲಿ ವಹಿವಾಟು ನಡೆಸಲು ಬ್ರಿಟನ್‌ಗೆ ಅವಕಾಶ ನೀಡದಿರಲು  ಒಕ್ಕೂಟದ ಮುಖಂಡರು ನಿರ್ಧರಿಸಿದ್ದಾರೆ.  ಮುಕ್ತ ಸರಕು ಸಾಗಾಟ ಸೇರಿದಂತೆ ಎಲ್ಲ ನಾಲ್ಕು ಸ್ವಾತಂತ್ರ್ಯದ ನಿಯಮಗಳನ್ನು ಒಪ್ಪಿಕೊಂಡರೆ ಮಾತ್ರ ಏಕೀಕೃತ ಮಾರುಕಟ್ಟೆಗೆ ಪ್ರವೇಶ ನೀಡಲು ಸಾಧ್ಯ ಎಂಬುದನ್ನು ಮುಖಂಡರು ಸ್ಪಷ್ಟಪಡಿಸಿದ್ದಾರೆ ಎಂದು ಒಕ್ಕೂಟದ ಅಧ್ಯಕ್ಷ ಡೊನಾಲ್ಡ್‌ ಟಸ್ಕ್‌ ತಿಳಿಸಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT