ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯೋತ್ಪಾದನೆ ಬೆಂಬಲಿಸಿಲ್ಲ

Last Updated 11 ಜುಲೈ 2016, 19:30 IST
ಅಕ್ಷರ ಗಾತ್ರ

‘ಸುಶಿಕ್ಷಿತ ಮುಸ್ಲಿಮರು ಹಾದಿ ತಪ್ಪುತ್ತಿರುವರೇ?’ ಎಂದು ಶೇಖರ್ ಗುಪ್ತ ಅವರು ರಾಷ್ಟ್ರಕಾರಣ ಅಂಕಣದ ಲ್ಲಿ ಬರೆದಿದ್ದಾರೆ (ಪ್ರ.ವಾ., ಜುಲೈ 10).‘ಸತ್ಯ ಮರೆಮಾಚಲು  ಸಂದಿಗ್ಧ ಭಾಷೆ ಬಳಸುವ ಝಕೀರ್ ನಾಯ್ಕ್‌ ಅವರ ವರ್ತನೆಯು ಅವರ ವ್ಯಕ್ತಿತ್ವದಲ್ಲಿನ ದೋಷ, ಅವರಲ್ಲಿರುವ ಅಪಾಯಕಾರಿ ಗುಣಕ್ಕೆ ಕನ್ನಡಿ ಹಿಡಿಯುತ್ತದೆ’ ಎಂಬ ಲೇಖಕರ ಹೇಳಿಕೆ ಅಸಂಬದ್ಧವಾಗಿದೆ. ಝಕೀರ್‌ ಅವರ ಹಲವಾರು ಸಿ.ಡಿ.ಗಳು ಮಾರುಕಟ್ಟೆಯಲ್ಲಿವೆ.

ಅವರು ಯಾವ ಸತ್ಯವನ್ನು ಮರೆಮಾಚಲು ಪ್ರಯತ್ನಿಸಿದ್ದಾರೆ ಎಂಬುದನ್ನು ಲೇಖಕರು ಬಹಿರಂಗಪಡಿಸಬೇಕಿತ್ತು. ಅವರ ಉಪನ್ಯಾಸಗಳು ನನಗೆ ತಿಳಿದ ಮಟ್ಟಿಗೆ ಯಾವತ್ತೂ ಭಯೋತ್ಪಾದನೆಯನ್ನು ಬೆಂಬಲಿಸಿಲ್ಲ. ಐಎಸ್‌ನಂತಹ ಉಗ್ರರನ್ನು ಖಂಡಿಸಿದ ಭಾಷಣಗಳು ಟಿ.ವಿ.ಗಳಲ್ಲಿ ಪ್ರಸಾರವಾಗಿವೆ.

ಹೀಗಿರುವಾಗ ಬಾಂಗ್ಲಾದ ಭಯೋತ್ಪಾದಕನೊಬ್ಬ ನನಗೆ ಝಕೀರ್ ಅವರ ಭಾಷಣವೇ ಪ್ರೇರಣೆ ಎಂದು ಹೇಳಿದ್ದರೆ, ಅದು ಯಾವ ಭಾಷಣ ಎಂಬುದನ್ನು ಆತನಿಂದಲೇ ಬಾಯಿಬಿಡಿಸಬೇಕೇ ಹೊರತು, ಆತ ಹೇಳಿದ ಕೂಡಲೇ ಸಾಕ್ಷ್ಯಾಧಾರವಿಲ್ಲದೆ ಅವರ ವಿರುದ್ಧ ಕ್ರಮ ಕೈಗೊಳ್ಳುವುದು ಸಮಂಜಸವಲ್ಲ.

ನಾಳೆ ಬಂಧಿತನಾದ ಉಗ್ರನೊಬ್ಬ ನನಗೆ ಬಿರಿಯಾನಿ ಎಂದರೆ ತುಂಬಾ ಇಷ್ಟದ ಖಾದ್ಯ ಎಂದ ಕೂಡಲೇ ಬಿರಿಯಾನಿಗೆ ನಿಷೇಧ ಹೇರುವಂತಹ ಮೂರ್ಖತನದ ಕಾರ್ಯವಾಗುತ್ತದೆ ಇದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT