ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಲೇ ಮಹಿಳಾ ಡ್ರೈವರ್

Last Updated 22 ಜನವರಿ 2015, 19:30 IST
ಅಕ್ಷರ ಗಾತ್ರ

ಇದೇ 16ರಂದು ಬೆಂಗಳೂರಿನ ಶಿವಾ­ಜಿನಗರದಿಂದ ಬೇಗೂರಿಗೆ (362) ಹೋಗುವ ಬಸ್‌ನಲ್ಲಿ  ಪ್ರಯಾಣಿಸುತ್ತಿ­ದ್ದಾಗ ನನಗೆ ಅಚ್ಚರಿ ಕಾದಿತ್ತು. ಅದೇನೆಂದರೆ ಮಹಿಳಾ ಡ್ರೈವರ್‌ ಬಸ್‌ ಓಡಿಸುತ್ತಿದ್ದರು. 

ಜನಜಂಗುಳಿಯಿಂದ ತುಂಬಿದ ಸ್ಥಳದಿಂದ ಸಾರ್ವಜನಿಕರನ್ನು ಬಸ್‌ ತುಂಬಿಸಿಕೊಂಡು ಶಿವಾಜಿನಗರ ಬಿಟ್ಟಾಗ ಯಾವುದೇ ಅಡೆತಡೆಗಳಿಲ್ಲದೆ, ಕಂಡಕ್ಟರ್‌ಗೆ ಎಂಟ್ರಿ ಮಾಡಿಕೊಳ್ಳಲು ಅವಕಾಶ ನೀಡುತ್ತಾ, ಎಲ್ಲಾ ಬಸ್‌ ನಿಲ್ದಾಣಗಳಲ್ಲಿ ಸರಿಯಾದ ಸಮಯಕ್ಕೆ ಬಸ್‌ ನಿಲ್ಲಿಸಿ ಒಬ್ಬ ಪ್ರಯಾಣಿಕರೂ ಗೊಣಗಾಟ ಮಾಡದಂತೆ ಪ್ರಯಾಣ ಮಾಡುವುದನ್ನು ನೋಡಿದಾಗ ಆನಂದವಾಯಿತು. 

ಅವರು ಪ್ರೇಮ ರಾಮಪ್ಪ ನಡುಬಟ್ಟಿ. ಸತತ 5 ವರ್ಷಗಳಿಂದ ಮಹಿಳಾ ಡ್ರೈವರ್‌ ಆಗಿ ಬಿಎಂಟಿಸಿ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಮಹಿಳೆ ಯಾವ ಪುರುಷರಿಗೂ ಕಡಿಮೆ ಇಲ್ಲ. ಎಷ್ಟೋ ಡ್ರೈವರ್‌ಗಳು ಬಸ್‌ ನಿಲ್ದಾಣಗಳಲ್ಲಿ ಬಸ್‌ ನಿಲ್ಲಿಸುವುದಿಲ್ಲ.

ನಿಲ್ಲಿಸಿದರೂ ಸಿಗ್ನಲ್‌ ಪಾಯಿಂಟ್‌ ಹತ್ತಿರ ಬಸ್‌ ನಿಲ್ಲಿಸುವುದು, ವಯಸ್ಸಾದ ನಾವು ಹಿಂದೆ ಓಡಿ ಹೋಗಿ ಬಸ್‌ ಹತ್ತುವುದು ಸರ್ವೇಸಾಮಾನ್ಯ. ಆದರೆ ಈ ಮಹಿಳಾ ಡ್ರೈವರ್‌ ಹಿರಿಯರಿಗೆ ‘ನಿಧಾನವಾಗಿ ಇಳಿಯಿರಿ. ನೀವು ಇಳಿಯುವವರೆಗೆ ಬಸ್‌ ಬಿಡುವುದಿಲ್ಲ’ ಎನ್ನುವಾಗ ಮನಸ್ಸಿಗೆ ಆನಂದವಾಗುತ್ತದೆ. ಕರ್ತವ್ಯದಲ್ಲಿ ಇಂಥ ವಾತ್ಸಲ್ಯ ಮಾತೆಯರ ಅಗತ್ಯವಿದೆ ಎನಿಸಿತು.
–ಕೆ. ರಾಜೇಶ್ವರಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT