ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಗ್ಯ ಇಲ್ಲದವರು

Last Updated 26 ಜುಲೈ 2016, 19:30 IST
ಅಕ್ಷರ ಗಾತ್ರ

ರಾಜ್ಯ ಸರ್ಕಾರಿ ನೌಕರರಿಗೆ ಆರೋಗ್ಯ ಭಾಗ್ಯ ಕಲ್ಪಿಸಲಾಗಿದೆ. ಆದರೆ ನಿವೃತ್ತ ನೌಕರರಿಗೆ ಇಂತಹ ಭಾಗ್ಯ ಇಲ್ಲ. ನಿವೃತ್ತಿ ನಂತರ ವಯೋಸಹಜ ಕಾಯಿಲೆಗಳು ಶುರುವಿಟ್ಟುಕೊಳ್ಳುತ್ತವೆ. ಒಂದು ದವಡೆ ಹಲ್ಲಿಗೆ ₹ 25 ಸಾವಿರದವರೆಗೆ ದಂತ ಚಿಕಿತ್ಸೆಗಳಿವೆ. ನಾಲ್ಕು ದವಡೆ ಹಲ್ಲುಗಳನ್ನು ಕಟ್ಟಿಸಲು ₹ 1 ಲಕ್ಷ ಬೇಕು. ಮಂಡಿ ನೋವು, ಮಧುಮೇಹವಂತೂ ಸಾಮಾನ್ಯ. ಬಿ.ಪಿ.ಗೂ ಮಧುಮೇಹಕ್ಕೂ ನಂಟಿರುತ್ತದೆ.

ಅಲೋಪಥಿಯಲ್ಲಿ ಈ ಚಿಕಿತ್ಸೆಗೆ ತಿಂಗಳಿಗೆ ನಾಲ್ಕೈದು ಸಾವಿರ ಖರ್ಚಾಗುತ್ತದೆ. ಆಯುರ್ವೇದದಲ್ಲಿ ದುಬಾರಿ ಔಷಧಗಳಿವೆ. ಸಕ್ಕರೆ ಪ್ರಮಾಣವನ್ನು ನಿಯಂತ್ರಿಸದಿದ್ದರೆ ಕಾಯಿಲೆ ಉಲ್ಬಣಿಸಿ ಆಸ್ಪತ್ರೆ ಸೇರಿದರೆ ಒಂದು ಸಲಕ್ಕೆ ₹ 30 ಸಾವಿರದಿಂದ ₹ 50 ಸಾವಿರದವರೆಗೂ ಖರ್ಚು ಮಾಡಿದವರಿದ್ದಾರೆ.

ಮೂರು ಮತ್ತು ನಾಲ್ಕನೇ ದರ್ಜೆ ನಿವೃತ್ತ ನೌಕರರಿಗೆ ಊಟಕ್ಕೆ ತೊಂದರೆಯಿಲ್ಲದಷ್ಟು  ಪಿಂಚಣಿ ಸಿಗುತ್ತದೆ. ಆದರೆ ಈ ದುಬಾರಿ ದಿನಗಳಲ್ಲಿ ಆಸ್ಪತ್ರೆ ಖರ್ಚು ಸೇರಿದರೆ ಈ ಹಣ ಸಾಕಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಕೂಡಿಟ್ಟ ಒಂದಿಷ್ಟು ಪಿಂಚಣಿ ಹಣವೂ ಖರ್ಚಾಗುತ್ತಾ ಹೋಗಿ ಬರಿಗೈಯಾದ ಪಿಂಚಣಿದಾರರು ಬಹಳಷ್ಟಿದ್ದಾರೆ. ಮಕ್ಕಳು ಸರಿಯಾಗಿ ನೋಡಿಕೊಳ್ಳದೇ ಇರುವ ನಿವೃತ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದ್ದರಿಂದ ಆರೋಗ್ಯ ಭಾಗ್ಯದ ಮೊದಲ ಆದ್ಯತೆ ನಿವೃತ್ತರಿಗೇ ಸಿಗಬೇಕು.
-ಜಿ.ಬಿ.ಕಂಬಾಳಿಮಠ, ಹುನಗುಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT