ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಬಂದ ‘ಚಿನ್ನದ ಕಾರು’

Last Updated 3 ಮೇ 2016, 19:30 IST
ಅಕ್ಷರ ಗಾತ್ರ

ಈ ಕಾರನ್ನು ಒಂದು ಕ್ಷಣ ನೋಡಿದಾಕ್ಷಣ ಚಿನ್ನ ಲೇಪಿತವೇ ಎನ್ನಿಸುತ್ತದೆ. ಆದರೆ ನಿಜವಾಗಿ ನೋಡಿದರೆ ಇದು ಚಿನ್ನದ ಬಣ್ಣದ ಲೇಪಿತ ಕಾರು ಅಷ್ಟೇ. ಆದರೆ ಇಂಥ ಕಾರನ್ನೀಗ ಭಾರತದ ಮಹಿಳೆಯೊಬ್ಬರು ಖರೀದಿಸಿದ್ದಾರೆ.

ಈ ಬಣ್ಣದ ಕಾರು ಖರೀದಿಸಿರುವುದರಲ್ಲಿ ವಿಶೇಷ ಏನು ಎಂದುಕೊಳ್ಳಬೇಡಿ. ಏಕೆಂದರೆ ಇಂಥ ಕಾರನ್ನು ಖರೀದಿಸಿರುವ ವಿಶ್ವದ ಪ್ರಥಮ ಮಹಿಳೆ ಎಂದು ಇವರು ಎನಿಸಿಕೊಂಡಿದ್ದಾರೆ.

ಅಂದಹಾಗೆ, ಇವರು ಕೋಲ್ಕತ್ತಾದವರು. ಅವರು ಖರೀದಿಸಿರುವ ‘ಚಿನ್ನದ ಕಾರು’ ಲಂಬೋರ್ಗಿನಿ ಹ್ಯುರಕನ್. ಇದಕ್ಕೆ ‘ಓರೊ ಎಲಿಯೊಸ್’ ಎಂಬ ಚಿನ್ನದ ಬಣ್ಣವನ್ನು ಲೇಪಿಸಲಾಗಿದೆ. ಇವರು ತಮ್ಮ ಬಳಿ ಇದ್ದ ಹಳೆಯ ಹಸಿರು ಬಣ್ಣದ ಲಂಬೋರ್ಗಿನಿ ಗಲರ್ಡೊ ಕಾರನ್ನು ಬದಲಾಯಿಸಿ ಇದನ್ನು ಖರೀದಿಸಿದ್ದಾರೆ.

ಈ ಕಾರು 5.2 ಲೀಟರ್ ವಿ10 ಎಂಜಿನ್‌ನಿಂದ ನಿಯಂತ್ರಿತಗೊಳ್ಳುತ್ತದೆ. 560 ಎನ್ ಎಂ ತಿರುಗು ಬಲದಲ್ಲಿ 610 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಇದು 3.2 ಸೆಕೆಂಡುಗಳಲ್ಲೇ ಗಂಟೆಗೆ ಗರಿಷ್ಟ 100 ಕಿ.ಮೀ. ವೇಗ ಚಲಿಸಬಲ್ಲ ಮತ್ತು ಗಂಟೆಗೆ ಗರಿಷ್ಟ 325 ಕಿ. ಮೀ. ವೇಗದಲ್ಲಿ ಓಡುವ ಸಾಮರ್ಥ್ಯ ಹೊಂದಿದೆ. ಇದರ ಬೆಲೆ ಸುಮಾರು ನಾಲ್ಕು ಕೋಟಿ ರೂಪಾಯಿಗಳಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT