ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ14 ಚಿನ್ನ

ದಕ್ಷಿಣ ಏಷ್ಯಾ ಕ್ರೀಡಾಕೂಟ:ಆತಿಥೇಯರ ಶುಭಾರಂಭ
Last Updated 6 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಶಿಲ್ಲಾಂಗ್‌/ಗುವಾಹಟಿ : ಭಾರತ ದಕ್ಷಿಣ ಏಷ್ಯಾ ಕ್ರೀಡಾಕೂಟದ ಮೊದಲ ದಿನ ಶುಭಾರಂಭ ಮಾಡಿದ್ದು, ಪದಕ ಭೇಟೆ ಪ್ರಾರಂಭಿಸಿದೆ. ಟೂರ್ನಿಯ ಮೊದಲ ದಿನ ಶನಿವಾರ ಭಾರತ 14ಚಿನ್ನ, 5 ಬೆಳ್ಳಿ ಸೇರಿದಂತೆ ಒಟ್ಟು 19 ಪದಕ ಜಯಿಸಿದೆ.

ಸೈಕ್ಲಿಂಗ್‌ನಲ್ಲಿ ಒಂದು ಚಿನ್ನ, ಒಂದು ಬೆಳ್ಳಿ: ಭಾರತದ ಟಿ. ವಿಜಯಲಕ್ಷ್ಮಿ ಹಾಗೂ ಚವೋಬಾದೇವಿ ದಕ್ಷಿಣ ಏಷ್ಯಾ ಕ್ರೀಡಾ ಕೂಟದ ಸೈಕ್ಲಿಂಗ್‌ ವಿಭಾಗದಲ್ಲಿ ಕ್ರಮ ವಾಗಿ ಚಿನ್ನ ಹಾಗೂ ಬೆಳ್ಳಿಯ ಪದಕ ಗೆದ್ದುಕೊಂಡು ಶುಭಾರಂಭ ಮಾಡಿ ದ್ದಾರೆ. ಮಹಿಳೆಯರ 30ಕಿ.ಮೀ ವೈಯ ಕ್ತಿಕ ವಿಭಾಗದ ಫೈನಲ್‌ನಲ್ಲಿ ವಿಜಯಲಕ್ಷ್ಮಿ ಚಿನ್ನದ ಸಾಧನೆ ಮಾಡಿದ್ದಾರೆ.

ಮಣಿಪುರದ ಆಟಗಾರ್ತಿ 49ನಿಮಿಷ 24ಸೆಕೆಂಡುಗಳಲ್ಲಿ ಗುರಿ ತಲುಪಿದರು. ಭಾರತದ ಚವೋಬಾ ದೇವಿ ಇದೇ ವಿಭಾಗದ ಬೆಳ್ಳಿ ಗೆದ್ದರು. ಗುರಿ ತಲುಪಲು ಅವರು 49ನಿಮಿಷ 31ಸೆಕೆಂಡ್‌ ತೆಗೆದುಕೊಂಡರು.

ಆರ್ಚರಿಯಲ್ಲಿ ನಾಲ್ಕು ಚಿನ್ನ ಖಚಿತ: ಭಾರತ ತಂಡ ಆರ್ಚರಿ ವಿಭಾಗದಲ್ಲಿ ನಾಲ್ಕು ಚಿನ್ನ ಹಾಗೂ ನಾಲ್ಕು ಬೆಳ್ಳಿ ಪದಕವನ್ನು ಖಚಿತಪಡಿಸಿದೆ.
ಏಷ್ಯಾ ಕ್ರೀಡಾಕೂಟದ ಚಾಂಪಿ ಯನ್‌ ಭಾರತದ ತರುಣ್‌ದೀಪ್‌ ರೈ, ಗುರುಚರಣ್‌ ಬಸ್ರಾ, ದೀಪಿಕಾ ಕುಮಾರಿ, ಬಂಬೈಲಾ ದೇವಿ ಲೈಶ್ರಮ್‌  ರಿಕರ್ವ್‌ ಸ್ಫರ್ಧೆಯ ಪುರುಷರ ಹಾಗೂ ಮಹಿಳೆ ಯರ ವಿಭಾಗಗಳಲ್ಲಿ ಫೈನಲ್ ತಲುಪಿದ್ದಾರೆ.

ಕಾಂಪೌಂಡ್‌ ವಿಭಾಗದಲ್ಲಿ ಅಭಿ ಷೇಕ್‌ ವರ್ಮಾ, ರಜತ್ ಚೌಹಾಣ್‌,  ಪೂರ್ವಶಾ ಶಿಂಧೆ, ಜ್ಯೋತಿ ಸುರೇಖಾ ಸೆಮಿಫೈನಲ್‌ನಲ್ಲಿ ಮಹಿಳೆ ಹಾಗೂ ಪುರುಷರ ವಿಭಾಗದ ಫೈನಲ್‌ ತಲುಪಿ ದ್ದಾರೆ. ಫೆಬ್ರುವರಿ 8ರಂದು ವೈಯಕ್ತಿಕ ಕಾಂಪೌಂಡ್‌ ಹಾಗೂ ರಿಕರ್ವ್‌ ವಿಭಾಗ ಗಳ ಫೈನಲ್‌ ಪಂದ್ಯಗಳು ನಡೆಯಲಿವೆ.

ವೇಟ್‌ಲಿಫ್ಟಿಂಗ್‌ನಲ್ಲಿ ಮೂರು ಚಿನ್ನ: ಮಹಿಳೆಯರ 48ಕೆ.ಜಿ ವಿಭಾಗದಲ್ಲಿ ಸೈಕೊಮ್‌ ಮಿರಬಿ ಚಾನು ಒಟ್ಟು 169 ಕೆ.ಜಿ ಭಾರ ಎತ್ತುವ ಮೂಲಕ ಮೊದಲ ಸ್ಥಾನ ಖಚಿತಪಡಿಸಿಕೊಂಡರು. ಸ್ನ್ಯಾಚ್‌ ವಿಭಾಗದಲ್ಲಿ 70 ಹಾಗೂ ಕ್ಲೀನ್‌ ಮತ್ತು ಜೆರ್ಕ್‌ನಲ್ಲಿ ಅವರು 90ಕೆ.ಜಿ ಎತ್ತಿದರು.

ಮಹಿಳೆಯರ ಸ್ನ್ಯಾಚ್‌, ಕ್ಲೀನ್‌ ಮತ್ತು ಜೆರ್ಕ್ ವಿಭಾಗದಲ್ಲಿ ಅವರು ದಕ್ಷಿಣ ಏಷ್ಯಾ ಕ್ರೀಡಾಕೂಟದ ಈ ಹಿಂದಿನ ದಾಖಲೆಯನ್ನು ಸರಿಗಟ್ಟಿದ್ದಾರೆ.
ಗುರುರಾಜಗೆ ಚಿನ್ನ: ಭಾರತದ ಸ್ಪರ್ಧಿ ಗುರುರಾಜ ಪುರುಷರ 56ಕೆ.ಜಿ ವಿಭಾಗ ದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಒಟ್ಟು 241ಕೆ.ಜಿ ಭಾರ ಎತ್ತಿದ ಅವರು ಸ್ನಾಚ್‌ ವಿಭಾಗದಲ್ಲಿ 104ಕೆ.ಜಿ ಹಾಗೂ ಕ್ಲೀನ್‌ ಎಂಡ್‌ ಜರ್ಕ್‌ನಲ್ಲಿ 137ಕೆ.ಜಿ ಎತ್ತಿದರು.

ಈ ಹಿಂದೆ ಢಾಕಾದಲ್ಲಿ  ನಡೆದ ಟೂರ್ನಿಯಲ್ಲಿ ಭಾರತ ಪುರುಷರ ತಂಡ ಮೂರು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಗೆದ್ದುಕೊಂಡಿತ್ತು.
ಮಹಿಳೆಯರ 53ಕೆ.ಜಿ ವಿಭಾಗದಲ್ಲಿ ಹರ್ಷದೀಪ್‌ ಕೌರ್‌ 171ಕೆ.ಜಿ ಎತ್ತುವ ಮೂಲಕ ಚಿನ್ನ ಗೆದ್ದರು.

ಕುಸ್ತಿಯಲ್ಲಿ ಐದು ಚಿನ್ನ: ಮೊದಲ ದಿನ ಭಾರತ ಕುಸ್ತಿಯಲ್ಲಿ ಐದು ಚಿನ್ನ ಗೆದ್ದು ಪ್ರಾಬಲ್ಯ ಮೆರೆಯಿತು. ಮಹಿಳೆಯರ 48ಕೆ.ಜಿ ಫ್ರೀಸ್ಟೈಲ್‌ ವಿಭಾಗದಲ್ಲಿ ಪ್ರಿಯಾಂಕಾ ಸಿಂಗ್‌, ಅರ್ಚನಾ ತೋಮರ್‌ 55ಕೆ.ಜಿ ಫ್ರೀಸ್ಟೈಲ್‌, ಮನೀಶಾ 60 ಕೆ.ಜಿ ಫ್ರೀಸ್ಟೈಲ್‌, ಪುರುಷರ 57ಕೆ.ಜಿ ವಿಭಾಗದಲ್ಲಿ ರವೀಂದ್ರ ಮತ್ತು ರಜನೀಶ್‌ 65ಕೆ.ಜಿ ಫ್ರೀಸ್ಟೈಲ್ ವಿಭಾಗದಲ್ಲಿ ಚಿನ್ನ ಗೆದ್ದರು.

ಈಜು: 3 ಚಿನ್ನ, ಐದು ಬೆಳ್ಳಿ, ಮೂರು ಕಂಚು: ಶ್ರೀಲಂಕಾದ ಕಠಿಣ ಪೈಪೋಟಿ ನಡುವೆಯೂ ಈಜು ಸ್ಪರ್ಧೆಗಳಲ್ಲಿ ಭಾರತ ಪ್ರಾಬಲ್ಯ ಮೆರೆದಿದೆ.
200ಮೀ ಬ್ರೆಸ್ಟ್‌ಸ್ಟ್ರೋಕ್‌ ವಿಭಾಗ ದಲ್ಲಿ ಸಂದೀಪ್‌ ಸೆಜ್ವಾಲ್‌, ಶಿವಾನಿ ಕಠಾರಿಯಾ ಮಹಿಳೆಯರ 200ಮೀ ಫ್ರೀಸ್ಟೈಲ್‌, 100ಮೀ ಫ್ರೀಸ್ಟೈಲ್‌ ರಿಲೇ ತಂಡ ಚಿನ್ನ ಗೆದ್ದುಕೊಂಡಿತು.

100ಮೀ ಬಟರ್‌ಫ್ಲೈ ವಿಭಾಗದಲ್ಲಿ ದಾಮಿನಿ ಗೌಡ ಕಂಚು ಗೆದ್ದರು.
ಸಂದೀಪ್‌ ಸೆಜ್ವಾಲ್‌ 200ಮೀ ಬ್ರೆಸ್ಟ್‌ಸ್ಟ್ರೋಕ್‌ ವಿಭಾಗದಲ್ಲಿ 2 ನಿಮಿಷ 20.66ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಅವರದೇ ಹೆಸರಿನಲ್ಲಿದ್ದ ದಾಖಲೆ ಉತ್ತಮಪಡಿಸಿಕೊಂಡರು.

ಭಾರತದ ಸೌರಭ್‌ ಸಾಂಗ್ವೇಕರ್‌ ಪುರುಷರ 200ಮೀ ಫ್ರೀಸ್ಟೈಲ್‌ (ಕಾಲ: 1ನಿ.53.03ಸೆ) ವಿಭಾಗದಲ್ಲಿ ಬೆಳ್ಳಿ ಗೆದ್ದರು. ಪುರುಷರ 100ಮೀ ಬಟರ್‌ಫ್ಲೈ ವಿಭಾಗದಲ್ಲಿ ಸುಪ್ರಿಯೊ ಮೊಂಡಲ್‌ ಬೆಳ್ಳಿ ಜಯಿಸಿದರು.

ಬ್ಯಾಡ್ಮಿಂಟನ್‌ನಲ್ಲಿ ಭಾರತ ಸೆಮಿಫೈನಲ್‌ಗೆ: ಗುಂಪು ಹಂತದ ಪಂದ್ಯದಲ್ಲಿ ಭಾರತದ ಪುರುಷರ ತಂಡ ಮಾಲ್ಡೀವ್ಸ್‌ ಹಾಗೂ ಬಾಂಗ್ಲಾದೇಶ ತಂಡವನ್ನು ಮಣಿಸಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ.

ಮಾಲ್ಡೀವ್ಸ್‌ ವಿರುದ್ಧದ ಪಂದ್ಯದಲ್ಲಿ ಶ್ರೀಕಾಂತ್‌, ಅಜಯ್‌ ಜಯರಾಮ್‌ ಸಿಂಗಲ್ಸ್‌ನಲ್ಲಿ ಗೆದ್ದರು. ಮನು ಅತ್ರಿ ಮತ್ತು ಸುಮೀತ್ ರೆಡ್ಡಿ ಜೋಡಿ ಪುರುಷರ ಡಬಲ್ಸ್ ವಿಭಾಗದಲ್ಲಿ ಜಯಗಳಿಸಿದೆ.

ಟಿ.ಟಿ: ಸೆಮಿಫೈನಲ್‌ಗೆ ಲಗ್ಗೆ: ಭಾರತದ ಪುರುಷರ ಹಾಗೂ ಮಹಿಳೆ ಯರ ಟೇಬಲ್‌ ಟೆನಿಸ್ ತಂಡಗಳೆರಡೂ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT