ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ತಯಾರಿಸಿ: ಅಮೆರಿಕದ ಕಂಪೆನಿಗಳಿಗೆ ಆಹ್ವಾನ

Last Updated 27 ಜನವರಿ 2015, 13:19 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ):  ದೇಶದಲ್ಲಿ ಎಲೆಕ್ಟ್ರಾನಿಕ್ಸ್‌ ಉಪಕರಣ ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಹೀಗಾಗಿ ಅಮೆರಿಕದ ತಂತ್ರ ಜ್ಞಾನ ಕಂಪೆನಿಗಳು ಭಾರತದಲ್ಲಿ ತಯಾರಿಕೆ ಮಾಡುವ ಮೂಲಕ ಹೆಚ್ಚಿನ ಲಾಭ ಗಳಿಸಬಹುದು ಎಂದು ಕೇಂದ್ರ ದೂರಸಂಪರ್ಕ ಸಚಿವ ರವಿಶಂಕರ್ ಪ್ರಸಾದ್‌ ಹೇಳಿದರು.

ಇಲ್ಲಿ ಭಾನುವಾರ ಆಯೋಜಿಸಿದ್ದ ಭಾರತ–ಅಮೆರಿಕ ಮಾತುಕತೆ  ಸಂದರ್ಭದಲ್ಲಿ ಭಾರತದಲ್ಲಿ ತಯಾರಿಕೆ ಆರಂಭಿಸುವಂತೆ ಅಮೆರಿಕದ ತಂತ್ರಜ್ಞಾನ ಕಂಪೆನಿಗಳಿಗೆ ಆಹ್ವಾನ ನೀಡಿದರು. ಭಾರತದಲ್ಲಿ ತಯಾರಿಸಿ ಕಾರ್ಯಕ್ರಮದಡಿ, ದೇಶದಲ್ಲಿ ತಯಾರಿಸಲು ಅಮೆರಿಕದ ಕಂಪೆನಿಗಳಿಗೆ ಆಹ್ವಾನ ನೀಡುತ್ತೇನೆ. ನಮ್ಮ ಕಂಪೆನಿಗಳಿಗೆ ನೀಡುತ್ತಿರುವ ಎಲ್ಲಾ ಅನುಕೂಲಗಳನ್ನೂ ನೀಡಲಾಗುವುದು. ಭಾರತದಲ್ಲಿ ತಯಾರಿಸಿ ಮತ್ತು ರಫ್ತಿಗಾಗಿ ತಯಾರಿಸಿ ಎಂದರು.

ದೇಶದಲ್ಲಿ ಎಲೆಕ್ಟ್ರಾನಿಕ್ಸ್‌ ತಯಾರಿಕೆಗೆ ಉತ್ತೇಜನ ನೀಡಲು ನಿರ್ಧರಿಸಲಾಗಿದೆ. 2013–14ರಲ್ಲಿ 69,516 ಕೋಟಿ ಮೌಲ್ಯದ ದೂರಸಂಪರ್ಕ ಉಪಕರಣಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಆದರೆ ರಫ್ತು ಮಾಡಿರುವ ಪ್ರಮಾಣ ₨20,475ರಷ್ಟಿದೆ. ಇದರಿಂದ ಆಮದು ರಫ್ತು ಅಂತರ 49,041 ಕೋಟಿಯಷ್ಟಾಗಿದೆ.

ಈ ವಲಯದಲ್ಲಿ ಆಮದು–ರಫ್ತು ಅಂತರ ತಗ್ಗಿಸಲು, ದೇಶದಲ್ಲಿ ಎಲೆಕ್ಟ್ರಾನಿಕ್ಸ್‌ ತಯಾರಿಕೆ ಬೆಂಬಲ ನೀಡಲು ಎಲೆಕ್ಟ್ರಾನಿಕ್‌ ಅಭಿವೃದ್ಧಿ ನಿಧಿ ಸ್ಥಾಪಿಸಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT