ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಅಭಿವೃದ್ಧಿ ಮೊದಲು : ಮೋದಿ

‘ಮೇಕ್‌ ಇನ್‌ ಇಂಡಿಯಾ’ ಅಭಿಯಾನಕ್ಕೆ ಚಾಲನೆ
Last Updated 25 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶವನ್ನು ವಿಶ್ವಮಟ್ಟದಲ್ಲಿ ತಯಾ­ರಿಕಾ ತಾಣ­ವ­ನ್ನಾಗಿ­­ಸುವ ಮಹತ್ವಾ­ಕಾಂಕ್ಷೆಯ ‘ಭಾರತ­ದಲ್ಲಿ ಸೃಷ್ಟಿಸಿ’ (ಮೇಕ್‌ ಇನ್‌ ಇಂಡಿಯಾ) ಅಭಿ­ಯಾನಕ್ಕೆ ಗುರುವಾರ ವಿಜ್ಞಾನ ಭವನದಲ್ಲಿ ಅದ್ಧೂರಿಯಾಗಿ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ, ‘ಪರಿಣಾಮಕಾರಿ ಆಡಳಿತದ ಮೂಲಕ ವಾಣಿಜ್ಯ ವ್ಯವಹಾರವನ್ನು ಉತ್ತೇ­ಜಿ­ಸ­­ಲಾಗುತ್ತದೆ’ ಎಂದು ಉದ್ಯಮಿಗಳಿಗೆ ಅಭಯ ನೀಡಿದರು.

‘ಎಫ್‌ಡಿಐ’ (ವಿದೇಶಿ ನೇರ ಬಂಡ­ವಾಳ ಹೂಡಿಕೆಗೆ) ಶಬ್ದಕ್ಕೆ ಹೊಸ ಅರ್ಥ ನೀಡಿದ ಪ್ರಧಾನಿ, ‘ಮೊದಲು ಭಾರತವನ್ನು ಅಭಿವೃದ್ಧಿ ಮಾಡಿ. ( ಫಸ್ಟ್‌ ಡೆವಲಪ್‌ ಇಂಡಿಯಾ) ದೇಶವನ್ನು ಕೇವಲ ಮಾರುಕಟ್ಟೆಯಾಗಿ ನೋಡದೇ ಒಂದು ಅವಕಾಶ ಎಂದು ಭಾವಿಸಿ’ ಎಂದು ಕರೆ ನೀಡಿದರು.

‘ಉದ್ಯಮ ಹಾಗೂ ಕೈಗಾರಿಕಾ ವಲಯದಲ್ಲಿ ಕಳೆದ ೨೩ ವರ್ಷಗಳಿಂದ ಕಾಣುತ್ತಿದ್ದ ಆತಂಕದ ವಾತಾವರಣ ಮರೆಯಾಗಿದೆ. ಭಾರತೀಯ ಕಂಪೆನಿ­ಗಳು ವಿದೇಶಕ್ಕೆ ಪಲಾಯನ ಮಾಡುವ ಅನಿವಾರ್ಯತೆ ಇಲ್ಲ’ ಎಂದು ಪ್ರಧಾನಿ ಮನದಟ್ಟು ಮಾಡಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT