ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಮ್ಯಾಗಿ ಕೆನಡಾದಲ್ಲಿ ಸುರಕ್ಷಿತ

Last Updated 3 ಜುಲೈ 2015, 9:31 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್‌): ನೆಸ್ಲೆ ಇಂಡಿಯಾದ ಮ್ಯಾಗಿ ನೂಡಲ್ಸ್‌ ಸುರಕ್ಷಿತ ಮತ್ತು ಬಳಕೆಗೆ ಯೋಗ್ಯ ಎಂದು ಕೆನಡಾದ ಆಹಾರ ನಿಯಂತ್ರಣ ಇಲಾಖೆ ಹೇಳಿದೆ.

ಜೂನ್‌ 5ರಿಂದ ಮ್ಯಾಗಿ ನೂಡಲ್ಸ್‌ ಮೇಲೆ ಭಾರತದಲ್ಲಿ ನಿಷೇಧ ಹೇರಲಾಗಿದೆ. ಆದರೆ, ರಫ್ತಿಗೆ ಅವಕಾಶ ನೀಡಲಾಗಿದೆ. ನೆಸ್ಲೆ ಇಂಡಿಯಾ ಕಂಪೆನಿ ಭಾರತದಲ್ಲಿ ತಯಾರಿಸಿದ  ಮ್ಯಾಗಿ ನೂಡಲ್ಸ್‌ ಮಾದರಿಗಳನ್ನು ಪರೀಕ್ಷಿಸಿದ ಕೆನಡಾದ ಆಹಾರ ತಪಾಸಣೆ ಸಂಸ್ಥೆ (ಸಿಎಫ್‌ಐಎ), ಈ ಆಹಾರ ಪದಾರ್ಥದಲ್ಲಿ ಯಾವುದೇ ಹಾನಿಕಾರಕ ಅಂಶಗಳು ಇಲ್ಲ, ಸೇವನೆಗೆ ಯೋಗ್ಯ ಎಂದು ವರದಿ  ನೀಡಿದೆ.

‘ಭಾರತದಲ್ಲಿನ ಪರಿಸ್ಥಿತಿಯನ್ನು ನಾವು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದೇವೆ. ಕೆನಡಾದಲ್ಲಿ ಪರೀಕ್ಷೆಗೆ ಒಳಪಡಿಸಿದ ನೆಸ್ಲೆ ನೂಡಲ್ಸ್‌ನಲ್ಲಿ ಯಾವುದೇ ಹಾನಿಕಾರಕ ಅಂಶಗಳು ಇದುವರೆಗೂ ಪತ್ತೆಯಾಗಿಲ್ಲ . ಹೀಗಾಗಿ ಮಾರಾಟದ ಮೇಲೆ ಯಾವುದೇ ನಿಯಂತ್ರಣ ಹೇರಲಾಗಿಲ್ಲ ಎಂದು ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ.

‘ಭಾರತದಿಂದ ಆಮದಾಗುವ ನೆಸ್ಲೆ ಕಂಪೆನಿಯ ಮ್ಯಾಗಿ ನೂಡಲ್ಸ್‌ ಬಳಕೆಗೆ ಯೋಗ್ಯ ಇದರಲ್ಲಿ ಯಾವುದೇ ಹಾನಿಕಾರಕ ಅಂಶಗಳು ಇಲ್ಲ’ ಎಂದು ಕಳೆದ ತಿಂಗಳು ಸಿಂಗಪುರದ ಆಹಾರ ತಪಾಸಣೆ ಇಲಾಖೆ ಕೂಡ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT