ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಯೋಜನೆಗೆ ಚೀನಾ ಆಕ್ಷೇಪ

Last Updated 30 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬೀಜಿಂಗ್‌ (ಪಿಟಿಐ): ಅರುಣಾಚಲ ಪ್ರದೇ­­ಶದಲ್ಲಿ 54 ಹೊಸ ಗಡಿ ಠಾಣೆ­ಗಳನ್ನು ನಿರ್ಮಿಸಲು ಹೊರಟಿರುವ ಭಾರ­ತದ ಯೋಜನೆಗೆ ಚೀನಾ ಸೇನೆ ಗುರುವಾರ ಆಕ್ಷೇಪ ವ್ಯಕ್ತಪಡಿಸಿದೆ.

‘ಭಾರತವು ಪರಿಸ್ಥಿತಿಯನ್ನು ಇನ್ನಷ್ಟು ಜಟಿ­ಲಗೊಳಿಸಬಾರದು. ಇದೊಂದು ವಿವಾದಿತ ಪ್ರದೇಶವಾಗಿ­ರು­ವುದರಿಂದ ಶಾಂತಿ ಕಾಪಾಡಲು ಹೆಚ್ಚಿನ ಪ್ರಯತ್ನ ಮಾಡಬೇಕು’ ಎಂದು ಅದು ಹೇಳಿದೆ.

ಅರುಣಾಚಲ ಪ್ರದೇಶದ ಗಡಿಯಲ್ಲಿ 54 ಹೊಸ ಠಾಣೆಗಳ ನಿರ್ಮಾಣ ಮತ್ತು ಮೂಲಸೌಲಭ್ಯ ಕಲ್ಪಿಸಲು ₨175 ಕೋಟಿ­ಗಳ ವೆಚ್ಚದ ಪ್ಯಾಕೇಜ್‌ನ್ನು ಕೇಂದ್ರ ಗೃಹ ಸಚಿ­ವಾ­ಲಯ ಪ್ರಕಟಿಸಿ­ರುವ ಬಗ್ಗೆ ಪತ್ರ­ಕರ್ತರ ಪ್ರಶ್ನೆಗೆ ಚೀನಾ ರಕ್ಷಣಾ ಸಚಿ­ವಾ­ಲಯ ವಕ್ತಾರ ಯಾಂಗ್‌ ಯುಜಿನ್‌ ಮೇಲಿನಂತೆ ಪ್ರತಿಕ್ರಿಯಿಸಿದರು.

ಚೀನಾ–ಭಾರತ ಗಡಿಯ ಪೂರ್ವ ಭಾಗ­ದಲ್ಲಿ ಈಗಲೂ ವಿವಾದ ಇದ್ದು, ಇಂತಹ ಪ್ರದೇಶದಲ್ಲಿ ಗಡಿ ಠಾಣೆ ನಿರ್ಮಿ­ಸುವ ಯೋಜನೆ ಬಗೆಗಿನ ನಿರ್ದಿಷ್ಟ ವರದಿಯನ್ನು ಗಮನಿಸಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT