ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ವನಿತೆಯರ ತಂಡಕ್ಕೆ ಏಳನೇ ಸ್ಥಾನ

ಹೌಕೀಸ್‌ ಬೇ ಕಪ್‌ ಹಾಕಿ ಟೂರ್ನಿ
Last Updated 19 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಹೇಸ್ಟಿಂಗ್ಸ್ (ನ್ಯೂಜಿಲೆಂಡ್, ಐಎಎನ್‌ಎಸ್): ಭಾರತದ ಮಹಿಳೆಯರ ಹಾಕಿ ತಂಡ ಭಾನುವಾರ ಹೌಕೀಸ್ ಬೇ ಕಪ್ ಟೂರ್ನಿಯಲ್ಲಿ ಜಪಾನ್ ತಂಡವನ್ನು ಸೋಲಿಸಿ ಏಳನೇ ಸ್ಥಾನ ಪಡೆಯಿತು.

ಹೇಸ್ಟಿಂಗ್ಸ್ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ 3–2 ಗೋಲುಗ ಳಿಂದ ಜಪಾನ್ ತಂಡವನ್ನು ಸೋಲಿಸಿತು.
ಪಂದ್ಯದ ಆರಂಭದಲ್ಲಿ ಜಪಾನ್ ತಂಡವು ಮುನ್ನಡೆ ಸಾಧಿಸಿತ್ತು. ಆಕ್ರಮಣಕಾರಿ ಆಟ ಆಡಿದ ಜಪಾನ್ ತಂಡದ ಮೀ ನಕಾಶಿಮಾ ನಾಲ್ಕನೇ ನಿಮಿಷದಲ್ಲಿಯೇ ಗೋಲಿನ ಖಾತೆ ತೆರೆದರು.

ನಂತರ ಪೆನಾಲ್ಟಿ ಕಾರ್ನರ್ ಅನ್ನು ಗೋಲಿನಲ್ಲಿ ಪರಿವರ್ತಿಸಿದ  ಯುಕಾರಿ ಯಮಾಮೊಟೊ ತಮ್ಮ ತಂಡಕ್ಕೆ 2–0 ರ ಮುನ್ನಡೆ ನೀಡಿದರು.

28ನೇ ನಿಮಿಷದಲ್ಲಿ ಗೋಲು ಗಳಿಸಿದ ಸುಶೀಲಾ ಪುಕ್ರಾಂಬಮ್ ಭಾರತ ತಂಡಕ್ಕೆ ಮತ್ತೆ ಉತ್ಸಾಹ ತುಂಬಿದರು.
ದ್ವಿತಿಯಾರ್ಧದಲ್ಲಿ ದೀಪಿಕಾ ಮತ್ತು ರಾಣಿ ತಲಾ ಒಂದು ಗೋಲು ಗಳಿಸಿ ತಂಡಕ್ಕೆ ಗೆಲುವಿನ ಕಾಣಿಕೆ ನೀಡಿದರು. ಈ ಹಂತದಲ್ಲಿ ಭಾರತ ತಂಡದ ಆಟಗಾರ್ತಿಯರಿಂದ ಸಂಘಟಿತ ಹೋರಾಟ ಕಂಡು ಬಂತು.

ಭಾರತ ತಂಡಕ್ಕೆ ಜಪಾನ್ ವಿರುದ್ದ ಇದು ಎರಡನೇ ಜಯ. ಕಳೆದ ಬಾರಿ 17ನೇ ಏಷ್ಯನ್‌ ಕ್ರೀಡಾಕೂಟದಲ್ಲಿ ಜಪಾನ್ ತಂಡವನ್ನು ಸೋಲಿಸಿ ಕಂಚಿನ ಪದಕ ಪಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT