ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಸಂಸ್ಕೃತಿ ಶ್ರೇಷ್ಠ: ಜೆರ್ರಿ ಮಿಲ್ಲರ್

ರಾಷ್ಟ್ರೀಯ ವಿಜ್ಞಾನ ದಿನಾಚರಣೆ
Last Updated 6 ಮಾರ್ಚ್ 2015, 19:41 IST
ಅಕ್ಷರ ಗಾತ್ರ

ಬೆಂಗಳೂರು: ‘ಭಾರತದ ಬಗ್ಗೆ ನನ್ನಲ್ಲಿ ಹಲವು ತಪ್ಪು ಕಲ್ಪನೆಗಳಿದ್ದವು. ಭಾರತ­ವೆಂದರೆ ಹಾವಾಡಿಗರ ದೇಶ, ರಸ್ತೆ­ಗಳಲ್ಲಿಯೇ ಹಾವುಗಳಿರುತ್ತವೆ, ಭಿಕ್ಷು­ಕರ ಸಂಖ್ಯೆ ಹೆಚ್ಚಿರುತ್ತದೆ ಎಂದೆಲ್ಲಾ ತಿಳಿದು­ಕೊಂಡಿದ್ದೆ. ಆದರೆ, ನನ್ನ ಆ ಕಲ್ಪನೆ ತಪ್ಪು ಎಂದು ಅರಿವಾಗಲು ಹೆಚ್ಚು ದಿನಬೇಕಾ­ಗಲಿಲ್ಲ’ ಎಂದು ಅಮೆರಿಕದ ವಾಯುಪಡೆಯ ಕರ್ನಲ್‌ (ನಿವೃತ್ತ) ಜೆರ್ರಿ ಮಿಲ್ಲರ್‌ ಹೇಳಿದರು.

ನ್ಯಾಷನಲ್‌ ಎಜುಕೇಷನ್‌ ಸೊಸೈಟಿ ಆಫ್‌ ಕರ್ನಾಟಕ ಹಾಗೂ ಬೆಂಗ­ಳೂರು ವಿಜ್ಞಾನ ವೇದಿಕೆಯು ಬಸವನ­ಗುಡಿ ನ್ಯಾಷನಲ್‌ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ‘ರಾಷ್ಟ್ರೀಯ ವಿಜ್ಞಾನ ದಿನಾಚರಣೆ’ ಕಾರ್ಯಕ್ರಮ­ದಲ್ಲಿ ಮಾತನಾಡಿದರು.

‘ಮಾಹಿತಿ ತಂತ್ರಜ್ಞಾನದಲ್ಲಿ ಭಾರತ ವಿಶ್ವದಲ್ಲಿಯೇ ಅಗಾಧ ಪ್ರಗತಿ ಸಾಧಿಸಿ ನಿಬ್ಬೆರಗಾಗಿಸಿದೆ. ವಿಜ್ಞಾನ ಹಾಗೂ ಉದ್ಯಮ ಕ್ಷೇತ್ರದಲ್ಲಿ ಅಭಿವೃದ್ಧಿ ಪಥ­ದಲ್ಲಿ ಸಾಗುತ್ತಿದೆ. ಎಲ್ಲಕ್ಕಿಂತ ಮುಖ್ಯ­ವಾಗಿ ಈ ದೇಶದ ಸಂಸ್ಕೃತಿ ಶ್ರೇಷ್ಠ­ವಾಗಿದೆ’ ಎಂದು ಬಣ್ಣಿಸಿದರು.

‘ಭಾರತಕ್ಕೆ ಇದೇ ಮೊದಲ ಬಾರಿ ಭೇಟಿ ನೀಡಿದ್ದೇನೆ. ಇಲ್ಲಿಯ ಜನ­ಜೀವನ ಶೈಲಿ ಅನನ್ಯವಾಗಿದೆ. ಜನರು ಕೂಡ ಇಷ್ಟವಾದರು. ಭಾರತ ಹಾವಾ­ಡಿಗರ ದೇಶ ಎಂಬ ಕಲ್ಪನೆ ಏಕೆ ಬಂತು ಎಂಬುದು ನನಗೆ ಗೊತ್ತಾಗುತ್ತಿಲ್ಲ’ ಎಂದು ಹೇಳಿದರು.

ಫ್ಲಾರಿಡಾ ವಿಶ್ವವಿದ್ಯಾಲಯದ ಪ್ರಾಧ್ಯಾ­ಪಕ ಡಾ.ಎಸ್‌.ಸೀತಾರಾಂ ಅಯ್ಯಂಗಾರ್‌, ‘ಸಿ.ವಿ.­ರಾಮನ್ ಅವರಿಗೆ ಬಾಲ್ಯದಿಂದಲೂ ವಿಜ್ಞಾನದಲ್ಲಿ ಇದ್ದ ಆಸಕ್ತಿ ಅವರನ್ನು ದೊಡ್ಡ ವಿಜ್ಞಾನಿ­ಯನ್ನಾಗಿ ಮಾಡಿತು. ಅವರು ನೀಡಿದ ಕೊಡುಗೆ ಅನೇಕ ವಿಷಯಗಳನ್ನು ಅರಿಯಲು ಅನು­ಕೂಲ ಮಾಡಿ­ಕೊಟ್ಟಿದೆ. ವಿದ್ಯಾರ್ಥಿ­ಗಳು ವಿಜ್ಞಾನದಲ್ಲಿ ಹೆಚ್ಚು ಆಸಕ್ತಿ ಬೆಳೆಸಿ­ಕೊಳ್ಳಬೇಕು. ವೈಜ್ಞಾನಿಕ ಚಿಂತನೆ ರೂಢಿಸಿ­ಕೊಳ್ಳಬೇಕು’ ಎಂದು ಸಲಹೆ ನೀಡಿದರು.

ನ್ಯಾಷನಲ್‌ ಎಜುಕೇಷನ್‌ ಸೊಸೈಟಿ ಆಫ್‌ ಕರ್ನಾಟಕ ಕಾರ್ಯದರ್ಶಿ ಹಾಗೂ ಉದ್ಯಮಿ ಡಾ.ಪಿ.ಸದಾನಂದ ಮಯ್ಯ, ‘ವಿಜ್ಞಾನದಲ್ಲಿನ ಬೆಳವಣಿಗೆ­ಗಳಿಂದ ಹಲವು ಅವಕಾಶಗಳು ಸೃಷ್ಟಿ­ಯಾಗಿವೆ. ಕಷ್ಟಕರ ಕೆಲಸಗಳನ್ನು ಸುಲಭವಾಗಿಸಿದೆ. ಹೋಟೆಲ್‌ ಉದ್ಯಮಕ್ಕೂ ನೆರವಾಗಿದೆ. ಉದಾ­ಹರಣೆಗೆ ಮೊಸರನ್ನವನ್ನು ಕೆಡದಂತೆ ಒಂದು ವರ್ಷ ಇಡಬಹು­ದಾದ ತಂತ್ರಜ್ಞಾನವಿದೆ’ ಎಂದು ಹೇಳಿದರು.

‘ಹುಟ್ಟುವಾಗ ಉಸಿರಿರುತ್ತದೆ, ಹೆಸರಿ­­ರುವುದಿಲ್ಲ. ಸತ್ತಾಗ ಉಸಿರಿ­ರು­ವು­ದಿಲ್ಲ, ಹೆಸರಿರುತ್ತದೆ. ಹಾಗಾಗಿ ಹೆಸರು ಶಾಶ್ವತವಾಗಿ ಉಳಿಯುವಂಥ ಕೆಲಸ ಮಾಡ­ಬೇಕು. ಭಿನ್ನ ಆಲೋಚನೆ ರೂಢಿಸಿ­ಕೊಳ್ಳಬೇಕು’ ಎಂದು ವಿದ್ಯಾರ್ಥಿ­­­ಗಳಿಗೆ ಕಿವಿಮಾತು ಹೇಳಿದರು.

ನ್ಯಾಷನಲ್‌ ಎಜುಕೇಷನ್‌ ಸೊಸೈಟಿ ಆಫ್‌ ಕರ್ನಾಟಕ ಅಧ್ಯಕ್ಷ ಡಾ.ಎ.­ಎಚ್‌.­­ರಾಮರಾವ್‌, ಕಾರ್ಯ­ದರ್ಶಿ ಪ್ರೊ.ಎಸ್‌.­­ಎನ್‌.ನಾಗರಾಜ ರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT