ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ 8 ಪ್ರಭಾವಿ ಮಹಿಳೆಯರು

Last Updated 21 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್‌ (ಪಿಟಿಐ):  ಏಷ್ಯಾ ಪೆಸಿ­ಫಿಕ್‌ ವಲಯದ ಆರ್ಥಿಕ ಸ್ಥಿತಿ­ಯನ್ನು ಬದ­­ಲಾ­­ಯಿ­ಸಲು ಕಾರಣರಾದ 25 ಪ್ರಭಾ­ವಿ ಮಹಿಳೆಯರ ಪಟ್ಟಿ­ಯನ್ನು ಫಾರ್ಚೂನ್‌ ನಿಯತಕಾಲಿಕೆ ಬಿಡು­ಗಡೆ ಮಾಡಿದ್ದು ಐಸಿಐಸಿಐ ಬ್ಯಾಂಕಿನ ಮುಖ್ಯಸ್ಥೆ ಚಂದಾ ಕೊಚ್ಚಾರ್‌ ಸೇರಿದ­ಂತೆ ಭಾರತದ ಎಂಟು ಮಹಿಳೆ­ಯರು ಸ್ಥಾನ ಪಡೆದಿದ್ದಾರೆ.

ಈ ಪೈಕಿ ಚಂದಾ ಕೊಚ್ಚಾರ್‌ 2ನೇ ಸ್ಥಾನದಲ್ಲಿದ್ದರೆ, ಎಸ್‌ಬಿಐನ ಅರುಂಧತಿ ಭಟ್ಟಾಚಾರ್ಯ 4ನೇ ಸ್ಥಾನ, ಎಚ್‌ಪಿಸಿ­ಎಲ್‌ನ ನಿಷಿ ವಾಸುದೇವ 5ನೇ ಸ್ಥಾನ ಹಾಗೂ ಆಕ್ಸಿಸ್‌ ಬ್ಯಾಂಕಿನ ಶಿಖಾ ಶರ್ಮ 10ನೇ  ಸ್ಥಾನ ಪಡೆದಿದ್ದಾರೆ. ಪಟ್ಟಿಯಲ್ಲಿ ಆಸ್ಟ್ರೇಲಿಯಾದ ವೆಸ್ಟ್‌­ಪಕ್‌ ಬ್ಯಾಂಕಿನ ಮುಖ್ಯಸ್ಥೆ ಗೇಲ್‌ ಕೆಲ್ಲಿ ಅವರು ಮೊದಲ ಸ್ಥಾನ ಪಡೆದಿದ್ದಾರೆ.

25ರೊಳಗೆ ಸ್ಥಾನ ಪಡೆದ ಇತರ ಭಾರ­ತೀಯರು: ಬಯೋ­ಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂ­ದಾರ್‌­ಷಾ (19), ರಾಷ್ಟ್ರೀಯ ಷೇರು ಮಾರು­ಕಟ್ಟೆ ಕಾರ್ಯ­ನಿರ್ವಹಣಾ­ಧಿಕಾರಿ ಚಿತ್ರಾ ರಾಮಕೃಷ್ಣ (22), ಎಚ್‌ಎಸ್‌ಬಿಸಿಯ ನೈನಾ ಲಾಲ್‌ ಕಿದ್ವಾಯಿ(23), ಟೇಫ್‌ ಅಧ್ಯಕ್ಷೆ ಮಲ್ಲಿಕಾ ಶ್ರೀನಿವಾಸನ್‌ (25).

ಏಷ್ಯಾ ಪೆಸಿಫಿಕ್‌ ಪ್ರದೇಶದ ಮಹಿಳೆ­ಯರ ಪಟ್ಟಿಯಲ್ಲಿ ಸ್ಥಾನ ಪಡೆದ ಮಹಿಳೆ­ಯರು ಜಾಗತಿಕ ಮಟ್ಟ­ದಲ್ಲಿ ಅತ್ಯು­­ನ್ನತ ಸ್ಥಾನ­ದಲ್ಲಿ­ದ್ದಾರೆ. ಭಾರ­ತದ ಭಟ್ಟಾ­ಚಾರ್ಯ ಹಾಗೂ ವಾಸು­ದೇವ ಸೇರಿ ಮೂರನೇ ಒಂದು ಭಾಗ­ದಷ್ಟು ಮಹಿಳೆ­ಯರು ಹೊಸದಾಗಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ ಎಂದು ಫಾರ್ಚೂನ್‌ ನಿಯತಕಾಲಿಕೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT