ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯರಿಗೆ ಇಂದಿಗೂ ಹೆಣ್ಣುಮಗು ಹೊರೆ!

ಕುಸಿಯುತ್ತಿರುವ ಲಿಂಗಾನುಪಾತ: ವಿಶ್ವಸಂಸ್ಥೆ ವರದಿ ಆತಂಕ
Last Updated 22 ಜುಲೈ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತದಲ್ಲಿ ಇಂದಿಗೂ ಹೆಣ್ಣು ಮಗುವನ್ನು ಹೊರೆ ಎಂದು ಭಾವಿಸಲಾಗುತ್ತಿದ್ದು, ಶತಮಾನಗಳ ಹಿಂದಿನ ಭಾರತೀಯರ ಮನೋಭಾವ ಇನ್ನೂ ಬದಲಾಗಿಲ್ಲ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ.

‘ಮಗಳಿಗೆ ಸೂಕ್ತ ವರನ ಹುಡುಕಾಟದ ತೊಂದರೆ ಮತ್ತು   ಮದುವೆ ವೇಳೆ ಭಾರಿ ಮೊತ್ತದ ವರದಕ್ಷಿಣೆ ನೀಡುವ ಆತಂಕದಿಂದ ಭಾರತೀಯ ಪೋಷಕರು ಹೆಣ್ಣು ಮಗುವನ್ನು ಇಂದಿಗೂ ಹೊರೆ ಎಂದೇ  ಭಾವಿಸುತ್ತಾರೆ’  ಎಂದು ಮಂಗಳವಾರ ಬಿಡುಗಡೆಯಾದ ವಿಶ್ವಸಂಸ್ಥೆಯ ವರದಿ ಹೇಳಿದೆ.

ಶಿಕ್ಷಣ, ಆರೋಗ್ಯ, ಮದುವೆ ಹೀಗೆ ಹೆಣ್ಣು ಮಕ್ಕಳನ್ನು ಸಾಕಿ, ಸಲಹುವ   ಖರ್ಚು ಹೆಚ್ಚು. ಅದೇ ಗಂಡು ಮಗು ಭವಿಷ್ಯದಲ್ಲಿ ಕುಟುಂಬಕ್ಕೆ ನೆರವಾಗುತ್ತಾನೆ  ಎನ್ನುವ ಮನೋಭಾವ ಹೆಚ್ಚಿನ ಪೋಷಕರಲ್ಲಿ ಮನೆ ಮಾಡಿದೆ.

ಇದರಿಂದಾಗಿಯೇ  ಹೆಣ್ಣು ಮಕ್ಕಳ ಸಂಖ್ಯೆ ಕುಸಿಯುತ್ತಿದ್ದು, ಗಂಡು, ಹೆಣ್ಣಿನ ಲಿಂಗಾನುಪಾತದಲ್ಲಿ ಭಾರಿ ವ್ಯತ್ಯಾಸ ಕಂಡುಬರುತ್ತಿದೆ ಎಂಬ ಆತಂಕ  ‘ಲಿಂಗಾನುಪಾತ, ಲಿಂಗ ಆಯ್ಕೆ ತಾರತಮ್ಯ ಇತಿಹಾಸ ಮತ್ತು ಸವಾಲುಗಳು’ ವರದಿಯಲ್ಲಿ  ವ್ಯಕ್ತವಾಗಿದೆ.

ಇದು ಸಮಾಜದಲ್ಲಿಯ ಹೆಣ್ಣು ಮಕ್ಕಳ ಸ್ಥಿತಿಗತಿಯ ದ್ಯೋತಕ ಎಂದು ವಿಶ್ವಸಂಸ್ಥೆ ಮಹಿಳಾ ವಿಭಾಗದ ಉಪ ಕಾರ್ಯನಿರ್ವಾಹಕ ನಿರ್ದೇಶಕಿ ಲಕ್ಷ್ಮಿ ಪುರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT