ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಚೀನಾ ಗಡಿ ಕಾಯಲು 12 ತುಕಡಿ

Last Updated 27 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತ–ಚೀನಾ ಗಡಿಯಲ್ಲಿ ಕಾವಲನ್ನು ಭದ್ರ­ಪಡಿಸುವ ಸಲುವಾಗಿ ಇಂಡೋ–ಟಿಬೆಟ್‌ ಗಡಿ ಪೊಲೀಸ್ ಪಡೆಗೆ  (ಐಟಿಬಿಪಿ) 12 ಹೊಸ ತುಕಡಿ­ಗಳನ್ನು ಸೇರಿಸಲು ಸೇನೆ ಸಲ್ಲಿಸಿದ್ದ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ.

ಅರುಣಾಚಲ ಪ್ರದೇಶದಲ್ಲಿ ಭಾರತ–ಚೀನಾ ಗಡಿಯ ಕಣ್ಗಾ­ವಲನ್ನು ಹೆಚ್ಚಿಸುವ ಸಲುವಾಗಿ 12 ಹೊಸ ತುಕಡಿಗಳ ಅವಶ್ಯಕತೆ­ಯಿದೆ ಎಂದು ಸೇನೆಯು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿ­ಕೊಟ್ಟಿತ್ತು. ಕಳೆದ ವಾರ ನಡೆದ ಸಂಸ್ಥಾಪನಾ ದಿನಾ­ಚರಣೆ­ಯಲ್ಲಿ ಗೃಹ ಸಚಿವ ರಾಜ­ನಾಥ್ ಸಿಂಗ್ 54 ಹೊಸ ಗಡಿ ಠಾಣೆಗಳನ್ನು ಸ್ಥಾಪಿಸುವು­ದಾಗಿ ಹೇಳಿ­ದ್ದರು.ಗಡಿಯಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ₨ 175 ಕೋಟಿಯ ಯೋಜನೆ ಘೋಷಿಸಿದ್ದರು.

ಹೊಸದಾಗಿ ನಿರ್ಮಿಸಲಾಗುವ 54 ಗಡಿ ಠಾಣೆಗಳಲ್ಲಿ ನಿಯೋಜಿ­ಸಲು 12 ಸಾವಿರ ಯೋಧರ ನೇಮಕಕ್ಕೆ ತಾತ್ವಿಕ ಒಪ್ಪಿಗೆ ದೊರೆತಿದೆ.
ನೇಮಕಾತಿ ಪ್ರಕ್ರಿಯೆ ಆರಂಭಿಸಲು ಅಂತಿಮ ಅನುಮೋದನೆಗಾಗಿ ಸೇನೆ ಕಾಯುತ್ತಿದೆ. 12 ತುಕಡಿಗಳ ನೇಮಕ ಮತ್ತು ನಿಯೋಜನೆಯು ವಿವಿಧ ಹಂತಗಳಲ್ಲಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT