ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಜರ್ಮನಿ ನಡುವೆ 5 ಬಿ2ಬಿ ಒಪ್ಪಂದಗಳ ವಿನಿಮಯ

ಬೆಂಗಳೂರಿನ ಬಾಷ್‌ ಕಂಪೆನಿಗೆ ಭೇಟಿ ನೀಡಿದ ಮೋದಿ, ಮರ್ಕೆಲ್‌
Last Updated 6 ಅಕ್ಟೋಬರ್ 2015, 7:39 IST
ಅಕ್ಷರ ಗಾತ್ರ

ಬೆಂಗಳೂರು: ಸಾಫ್ಟ್‌ವೇರ್ ಮತ್ತು ಸೇವಾ ಸಂಸ್ಥೆಗಳ ರಾಷ್ಟ್ರೀಯ ಒಕ್ಕೂಟ (ನಾಸ್ಕಾಂ) ಮಂಗಳವಾರ ಬೆಂಗಳೂರಿನಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಿರುವ  ಜರ್ಮನಿಯ ಛಾನ್ಸಲರ್ ಏಂಜೆಲಾ ಮರ್ಕೆಲ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು 5 ಬಿ2ಬಿ ಒಪ್ಪಂದಗಳನ್ನು ವಿನಿಮಯ ಮಾಡಿಕೊಂಡರು.

ಭಾರತ ಮತ್ತು ಜರ್ಮನಿ ನಡುವಿನ ವಾಣಿಜ್ಯ ಸಹಕಾರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಒಪ್ಪಂದಗಳನ್ನು  ವಿನಿಮಯ ಮಾಡಿಕೊಳ್ಳಲಾಗಿದೆ.  ಡಿಜಿಟಲ್‌ ಕ್ಷೇತ್ರ, ಮೂಲಸೌಕರ್ಯ ಮತ್ತು ಇಂಧನ ವಲಯದಲ್ಲಿ ಉಭಯ ದೇಶಗಳ ಹೂಡಿಕೆದಾರರಿಗೆ ವಿಪುಲ ಅವಕಾಶಗಳಿವೆ ಎಂದು ಛಾನ್ಸಲರ್ ಏಂಜೆಲಾ ಮರ್ಕೆಲ್‌ ಹೇಳಿದರು.

‘ವಿದೇಶಿ ಹೂಡಿಕೆ, ತಂತ್ರಜ್ಞಾನ ಮತ್ತು ಪ್ರತಿಭೆಯನ್ನು ಆಕರ್ಷಿಸಲು ಭಾರತ ಹಿಂದೆಂದಿಗಿಂತಲೂ ಈಗ ಉತ್ತಮವಾಗಿ ಸಿದ್ಧಗೊಂಡಿದೆ. ಜಾಗತಿಕ ಆರ್ಥಿಕ ಅಸ್ಥಿರತೆ ಸಂದರ್ಭದಲ್ಲೂ ದೇಶದ ಅರ್ಥವ್ಯವಸ್ಥೆ  ಸ್ಥಿರವಾಗಿ ನಿಂತಿದ್ದು, ಜಾಗತಿಕ ಮಟ್ಟದ ಹೂಡಿಕೆ ತಾಣವಾಗಿ ಗುರುತಿಸಿಕೊಂಡಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಸಮಾರೋಪ ಭಾಷಣದಲ್ಲಿ ಹೇಳಿದರು.

2016ರಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಜಾರಿಗೆ ತರಲಾಗುವುದು. ತೆರಿಗೆ ವ್ಯವಸ್ಥೆಯಲ್ಲಿ ಇದರಿಂದ ಪಾರದರ್ಶಕತೆ ಮೂಡಲಿದೆ ಎಂದು ಅವರು ಹೇಳಿದರು.

ಮರ್ಕೆಲ್ ಮತ್ತು ಮೋದಿ ಅವರು  ಬೆಳಿಗ್ಗೆ 11 ಗಂಟೆ ಸುಮಾರಿಗೆ ಬಾಷ್‌ ಕಂಪೆನಿಯ ಆಡುಗೋಡಿ ಘಟಕಕ್ಕೆ ಭೇಟಿ ನೀಡಿದರು.  ಉಭಯ ನಾಯಕರು ಕಂಪೆನಿಯ ತಾಂತ್ರಿಕ ಆವಿಷ್ಕಾರಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT