ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಗಡಿ ಪ್ರವೇಶ: ಚೀನಾ ಸೇನೆ ವಿಫಲ

Last Updated 2 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಲೇಹ್‌/ನವದೆಹಲಿ (ಪಿಟಿಐ):  ಚೀನಾದ ಪೀಪಲ್ಸ್‌ ಲಿಬರೇಷನ್‌ ಆರ್ಮಿಯು (ಪಿಎಲ್‌ಎ) ಈಚೆಗೆ ಏಕ­ಕಾಲಕ್ಕೆ ಎರಡು ಕಡೆಗಳಲ್ಲಿ ಭಾರತದ ಗಡಿ­ಯೊಳಕ್ಕೆ ನುಸು­­­ಳುವ ವಿಫಲ ಯತ್ನ ಮಾಡಿದೆ.

ಪ್ಯಾಂಗಾಂಗ್‌ ಸರೋವರದಲ್ಲಿನ ಭಾರ­ತದ ಜಲಪ್ರದೇಶ ಮತ್ತು ಇದೇ ಸ್ಥಳ­ದಲ್ಲಿರುವ ನೆಲ ಮಾರ್ಗಗಳ ಮೂಲಕ  ಐದು  ಕಿ.ಮೀ.ಗಳಷ್ಟು ದೂರ ಭಾರ­ತದ ಭೂಪ್ರದೇಶ­ದೊಳಕ್ಕೆ ತನ್ನ ಪಡೆಗಳನ್ನು ಚೀನಾ ಕಳು­ಹಿಸಿರುವು­ದಾಗಿ ವರದಿಗಳು ತಿಳಿಸಿವೆ.

ಭದ್ರತಾ ಸಂಸ್ಥೆಗಳಿಂದ ಬಂದ ವರದಿ­ಗಳ ಪ್ರಕಾರ, ಚೀನಾದ ಬೋಟ್‌ಗಳು ಕಳೆದ ತಿಂಗಳ 22ರಂದು ಲಡಾಖ್‌ನ ಅತಿ­ ಎತ್ತ­ರದ ಪ್ರದೇಶದಲ್ಲಿರುವ ಪ್ಯಾಂಗಾಂಗ್‌ ಸರೋ­ವರ­ದಲ್ಲಿ ಭಾರತದ ಜಲಪ್ರದೇಶ­ವನ್ನು ಪ್ರವೇಶಿಸಿ­ದ್ದಾಗಿ ಅಧಿಕೃತ ಮೂಲ­ಗಳು ಭಾನುವಾರ ಹೇಳಿವೆ.

ಇದಲ್ಲದೆ, ಲೇಹ್‌ನಿಂದ 168 ಕಿ.ಮೀ. ದೂರ­ದಲ್ಲಿರುವ ಪ್ಯಾಂಗಾಂಗ್‌ ಸರೋ­ವರದ ಎರಡು ದಿಕ್ಕುಗಳಲ್ಲಿ, ಅಂದರೆ ಪೂರ್ವ ಲಡಾಖ್‌ ಭಾಗ ಮತ್ತು ಉತ್ತರ ದಂಡೆ ಮೇಲೆ ನಿರ್ಮಿಸಿ­ರುವ ರಸ್ತೆ­ಗಳ ಮೂಲಕ ಚೀನಾ ಪಡೆ­ಗಳು ಏಕ­ಕಾಲಕ್ಕೆ ಭಾರತದ ಗಡಿ­ಯೊ­ಳಗೆ ನುಗ್ಗಿ­ರು­ವುದಾಗಿ ಮೂಲಗಳು ತಿಳಿಸಿವೆ.

ಆದರೆ, ಚೀನಾ ಪಡೆಗಳ ಈ ನಡೆಯನ್ನು ಗಮನಿಸಿದ ಸದಾ ಜಾಗೃತವಿರುವ ಭಾರ­ತದ ಐಟಿಬಿಪಿ ಪಡೆ­ಗಳು, ಸರೋ­ವರ­ದಲ್ಲಿನ ವಾಸ್ತವಿಕ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿಯೇ ತಡೆದಿವೆ. ಜತೆಗೆ ರಸ್ತೆ ಮೂಲಕ ಪರ್ವತ ಪ್ರದೇಶ­ಗಳನ್ನೇರುವ ವಾಹನ­ಗಳಲ್ಲಿ ಎಲ್‌ಎಸಿ ದಾಟುವ ಯತ್ನ­ದಲ್ಲಿ ಬಂದ ಚೀನಾ ಪಡೆ­­ಗಳನ್ನು ಕೂಡ ಐಟಿಬಿಪಿ ಯೋಧರು ತಡೆದಿದ್ದಾರೆ.

ಈ ಸಂದರ್ಭದಲ್ಲಿ ಎರಡೂ ಕಡೆ ಸೈನಿ­ಕರು ಎದುರುಬದುರಾಗಿ, ಪ್ಯಾಂಗಾಂಗ್‌ ಸರೋವರದ ವಿವಾದಿತ ಪ್ರದೇಶಗಳು ತಮಗೆ ಸೇರಿ­ದ್ದೆಂದು ತಮ್ಮ ತಮ್ಮ ದೇಶ­ಗಳ ಬಾವುಟ­ಗಳನ್ನು ಪ್ರದರ್ಶಿಸಿ, ಪಥ­ಸಂಚಲನ ನಡೆಸಿದರು.

ಭಾರತದ ಪಡೆಗಳು ಜಲ ಅಥವಾ ಭೂ ಮಾರ್ಗಗಳ ಮೂಲಕ ದೇಶದ ಗಡಿಯೊಳಕ್ಕೆ ಒಂದಿಂಚೂ ಸಹ ಮುಂದೆ ಬಾರ­­ದಂತೆ ತಡೆದ ಕಾರಣ ಚೀನಾ ಪಡೆ­ಗಳು ವಾಪಸ್‌ ಮರಳಿದವು ಎಂದು ಮೂಲ­ಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT