ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಮುಂದಾದರೆ ಮಾತುಕತೆ: ಪಾಕ್‌

Last Updated 25 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಕಠ್ಮಂಡು (ಐಎಎನ್‌ಎಸ್‌):  ಭಾರತ­ ಮುಂದಾದಲ್ಲಿ ಸ್ಥಗಿತ­ಗೊಂಡಿರುವ ಮಾತು­ಕತೆ­ ಪುನರ್‌ ಆರಂಭಿ­ಸಲು ಸಿದ್ಧವಿರುವುದಾಗಿ ಪಾಕಿಸ್ತಾನ ಮಂಗಳ­ವಾರ ಹೇಳಿದೆ. ಆದರೆ, ಮಾತುಕತೆ ಪುನರ್‌ ಆರಂಭಕ್ಕೆ ಭಾರತವೇ ಮೊದಲ ಹೆಜ್ಜೆಯನ್ನು ಇಡಬೇಕು ಎಂಬ ಷರತ್ತು ಒಡ್ಡಿದೆ.

ಇಲ್ಲಿಗೆ ಆಗಮಿಸಿದ ಪಾಕಿ­ಸ್ತಾನದ ಪ್ರಧಾನಿ ನವಾಜ್‌ ಷರೀಫ್‌, ಕಾರ್ಯದರ್ಶಿಗಳ ಮಟ್ಟದ ಮಾತುಕತೆ­­ಯನ್ನು ಭಾರತವೇ ರದ್ದುಗೊಳಿಸಿತ್ತು. ಹೀಗಾಗಿ ಸ್ಥಗಿತಗೊಂಡಿ­ರುವ  ಮಾತು­ಕತೆ ಮರಳಿ ಆರಂಭಿ­ಸಲು ಭಾರತವೇ ಮುಂದಾಗಬೇಕು ಎಂದರು.

ಇದಕ್ಕೂ ಮೊದಲು ಪಾಕಿಸ್ತಾನ ಪ್ರಧಾನಿಯ ವಿದೇಶಾಂಗ ವ್ಯವಹಾರ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಸರ್ತಾಜ್‌ ಅಜೀಜ್, ಷರೀಫ್‌– ಮೋದಿ ಭೇಟಿಯನ್ನು ಸ್ಪಷ್ಟವಾಗಿ ತಳ್ಳಿ ಹಾಕಿದರು.

ಭಾರತದ ವಿದೇಶಾಂಗ ವ್ಯವಹಾರ­ಗಳ ಸಚಿವರು ಮಾತು­ಕತೆಗೆ ಅಧಿಕೃತ ಆಹ್ವಾನ ನೀಡಿದಾಗ ಮಾತ್ರ ಉಭಯ ರಾಷ್ಟ್ರಗಳ ಮಧ್ಯೆ ದ್ವಿಪಕ್ಷೀಯ ಮಾತುಕತೆ ಸಾಧ್ಯ. ಎಲ್ಲವೂ ಭಾರತದ ನಿರ್ಧಾರದ ಮೇಲೆ ಅವ­ಲಂಬಿತ­ವಾ­ಗಿದೆ ಎಂದರು.

ಇದಕ್ಕೂ ಮೊದಲು ಮುಖಾ­ಮುಖಿ­­ಯಾದ ಸುಷ್ಮಾ ಸ್ವರಾಜ್‌ ಹಾಗೂ ಅಜೀಜ್ ಹಸ್ತಲಾಘವ ನೀಡಿ, ಶುಭಾ­ಶಯ ವಿನಿಮಯ ಮಾಡಿ­ಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT