ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಸಂಜಾತ ಅಮೆರಿಕನ್ನರಿಗೆ ಒಬಾಮ ಮೇಲೆ ಅಭಿಮಾನ

Last Updated 24 ಮೇ 2016, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ತಮ್ಮ ಆಡಳಿತಾವಧಿಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಭಾರತ ಸಂಜಾತ ಅಮೆರಿಕನ್ನರನ್ನು ನೇಮಕ ಮಾಡಿಕೊಂಡಿರುವ ಅಧ್ಯಕ್ಷ ಬರಾಕ್‌ ಒಬಾಮ ಅವರು ಭಾರತವೂ ಸೇರಿದಂತೆ ಏಷ್ಯಾ ಮೂಲದ ಅಮೆರಿಕ ಪ್ರಜೆಗಳಿಗೆ ಅಚ್ಚುಮೆಚ್ಚು ಎಂದು ಹೇಳಲಾಗಿದೆ.

ಏಷ್ಯಾ ಮೂಲದ ಅಮೆರಿಕ ಪ್ರಜೆಗಳ ಜನಾಂಗೀಯ ಸಮುದಾಯಗಳ ಪೈಕಿ ಶೇ 84 ಜನರು ಒಬಾಮ ಆಡಳಿತಾವಧಿಯಲ್ಲಿ  ನೌಕರಿ ಪಡೆದಿದ್ದರೆ ಚೀನಾ ಸಂಜಾತ ಅಮೆರಿಕನ್ನರು ಕೇವಲ ಶೇ 56ರಷ್ಟು ನೇಮಕಗೊಂಡಿದ್ದರು. ಇದರ ಪರಿಣಾಮವಾಗಿ ಭಾರತೀಯ ಸಂಜಾತ ಅಮೆರಿಕನ್ನರು ಒಬಾಮ ಅವರ ಡೆಮಾಕ್ರಟಿಕ್‌ ಪಕ್ಷದ ಮೇಲೆಯೂ ಒಲವು ಹೊಂದಿದ್ದಾರೆ.

ಅವಿಭಜಿತ ಏಷ್ಯನ್‌ ಅಮೆರಿಕನ್‌ ಮತ್ತು ಪೆಸಿಫಿಕ್‌ ದ್ವೀಪನಿವಾಸಿಗಳ ಸಲಹಾ  ಗುಂಪುಗಳು ಸಲ್ಲಿಸಿದ ವರದಿಯೊಂದರ ಪ್ರಕಾರ, ಶೇ 58 ಏಷ್ಯಾ ಮೂಲದ ಅಮೆರಿಕನ್ನರಿಗೆ ರಿಪಬ್ಲಿಕನ್‌ ಪಕ್ಷದ ಬಗ್ಗೆ ಅಭಿಮಾನವಿಲ್ಲ. ಆದರೆ ಡೆಮಾಕ್ರಟಿಕ್‌ ಪಕ್ಷದ ಬಗ್ಗೆ ಒಲವು ಇಲ್ಲದ ಏಷ್ಯನ್‌ ಅಮೆರಿಕನ್ನರ ಪ್ರಮಾಣ ಶೇ 19 ಮಾತ್ರ.

ಇಷ್ಟಪಡದವರು: ಬರಾಕ್ ಒಬಾಮ ಅವರ ಬಗ್ಗೆ ಒಲವು ಹೊಂದಿರದ ಭಾರತ ಸಂಜಾತರ    ಸಂಖ್ಯೆ  ಶೇ ಒಂಬತ್ತು ಆಗಿದ್ದು, ಅಧ್ಯಕ್ಷೀಯ ಸ್ಥಾನಕ್ಕೆ ರಿಪಬ್ಲಿಕನ್ ಪಕ್ಷದ ಸಂಭಾವ್ಯ ಅಭ್ಯರ್ಥಿಯಾಗಿರುವ ಡೊನಾಲ್ಡ್‌ ಟ್ರಂಪ್‌ ಅವರ ಬಗ್ಗೆ ಶೇ 62 ಮಂದಿಗೆ ಅಭಿಮಾನವಿಲ್ಲ ಎಂದೂ ವರದಿ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT