ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷಾಂತರ ಕಲೆ

ಇಂಗ್ಲಿಷ್‌ ವ್ಯಾಕರಣ
Last Updated 26 ಜುಲೈ 2015, 19:30 IST
ಅಕ್ಷರ ಗಾತ್ರ

ಅಭ್ಯಾಸ/Exercise-1
ಭಾಷಾಂತರ ಪಾಠ–1  ಕನ್ನಡದಿಂದ ಇಂಗ್ಲಿಷ್‌ಗೆ ಭಾಷಾಂತರಿಸಿ.

1. ನೀನು ಓಡುತ್ತೀಯ, 2. ನೀವು ಓಡುತ್ತೀರಿ, 3. ನಾವು ಮಲಗುತ್ತೇವೆ, 4. ನಾನು ಬರುತ್ತೇನೆ, 5. ಅವರು ಕೊಡುತ್ತಾರೆ, 6. ನೀನು ಓದುತ್ತೀಯ, 7. ನೀವು ಬರೆಯುತ್ತೀರಿ, 8. ನಾವು ನೋಡುತ್ತೇವೆ, 9. ಅವು ಓಡುತ್ತವೆ, 10. ನೀವು ನಿಲ್ಲುತ್ತೀರಿ. 

ಭಾಷಾಂತರ ಪಾಠ –2 ಇಂಗ್ಲಿಷ್‌ನಿಂದ ಕನ್ನಡಕ್ಕೆ ಭಾಷಾಂತರಿಸಿ.
11. I pat, 12. We patch, 13. You perturb, 14. They prove, 15. You intimate, 16. I introduce, 17. We play, 18. You ask, 19. You believe, 20.I earn. 

ನಿಮಗೆ ಗೊತ್ತಿರುವ ಕ್ರಿಯಾಪದವನ್ನು ಆಯ್ಕೆಮಾಡಿ ಮೇಲಿನ ಮಾದರಿಯ ವಾಕ್ಯಗಳನ್ನು ರಚಿಸಿಕೊಂಡು ಕನ್ನಡದಿಂದ ಇಂಗ್ಲಿಷ್‌ಗೂ ಮತ್ತು ಇಂಗ್ಲಿಷ್‌ನಿಂದ ಕನ್ನಡಕ್ಕೂ ಭಾಷಾಂತರಿಸಿ.

ನಿಯಮ 2: ವಾಕ್ಯದಲ್ಲಿ ಕರ್ತೃ(Subject)ವು ತೃತೀಯ ಪುರುಷ/Third person  ಏಕವಚನ/ Singular ವಾಗಿದ್ದು ಅಥವ ಯಾವುದೇ ನಾಮಪದ(Noun)ದ ಏಕವಚನ ರೂಪವಾಗಿದ್ದು ಕ್ರಿಯಾಪದ(Verb)ದ ಕಾಲ/Tenseವು ಸರಳ/ಅನಿಶ್ಚಿತ ವರ್ತಮಾನ ಕಾಲ/Simple/Indefinite present tense ದಲ್ಲಿದ್ದರೆ ಆಗ ಮೂರು ಪ್ರಕಾರದ ನಿಯಮಗಳನ್ನು ವಿಶೇಷವಾಗಿ ಗಮನಿಸಬೇಕು.

ನಿಯಮ 2A: ಕ್ರಿಯಾಪದದ ಕೊನೆಗೆ ‘S’ ಎಂಬ ಪ್ರತ್ಯಯವನ್ನು ಸೇರಿಸಿ ಕರ್ತೃವಿನ ಮುಂದೆ ಇಡಬೇಕು.
ಉದಾಹರಣೆಗಳು
1. ಅವನು ಕುಡಿಯುತ್ತಾನೆ He drinks
2. ಅವಳು ತಿನ್ನುತ್ತಾಳೆ She eats
3. ಅದು ಓಡುತ್ತದೆ It runs
4. ರಾಮನು ಓದುತ್ತಾನೆ a reads

ಕಲಿಯುವ ಪದಗಳು/Learning words-2
*ಸೂಚನೆ ಕೊಡು Instruct   
*ಆಗ್ರಹ ಪಡಿಸು  Importune
*ಹೊಗಳು  Praise 
*ಪ್ರತೀಕಾರ ಮಾಡು Retaliate
*ಉಗುಳು  Spit 
*ಕಾನೂನು ಬದ್ಧವಾಗಿ ಅಪಾದಿಸು Indict  
*ಉಳಿಸಿಕೊ  ‌Retain 
*ಶಂಕಿಸು  Surmise
*ಬಿಚ್ಚು  Open 
*ಬುಡಮೇಲಾಗು Turn turtle
*ಚಿಮುಕಿಸು Sprinkle  
*ಚುಚ್ಚಿ ಮಾತಾಡು Gibe
*ಸುತ್ತುಗಟ್ಟು Surround 
*ಗ್ರಹಿಸು  Perceive
*ಶರಣಾಗು  Surrender
*ಅರ್ಧಬೇಯಿಸು Paraboil
*ಹರಡು  Spread 
*ಕಿಸಿ ಕಿಸಿ ನಗು  Giggle
*ಮಾರ್ಗ ಸೂಚಿಸು Guide 
*ಅಸಹ್ಯ ಪಡು Loathe

ಅಭ್ಯಾಸ/Exercise–2
ಭಾಷಾಂತರ ಪಾಠ –3 ಕನ್ನಡದಿಂದ ಇಂಗ್ಲಿಷ್‌ಗೆ ಭಾಷಾಂತರಿಸಿ.

21. ನೀನು ಸೂಚನೆ ಕೊಡು, 22. ನೀವು ಹೊಗಳುತ್ತೀರಿ,23. ನಾವು ಉಗುಳುತ್ತೇವೆ, 24. ನಾನು ಉಳಿಸಿಕೊಳ್ಳುತ್ತೇನೆ, 25. ಅವರು ಬಿಚ್ಚುತ್ತಾರೆ, 26.ನೀನು ಚಿಮುಕಿಸುತ್ತೀಯೆ, 27.ನೀವು ಸುತ್ತುಗಟ್ಟುತ್ತೀರ, 28. ನಾವು ಶರಣಾಗುತ್ತೇವೆ, 29.ಅವು ಹರಡುತ್ತವೆ, 30.ನೀವು ಮಾರ್ಗ ಸೂಚಿಸುತ್ತೀರಿ. 

ಭಾಷಾಂತರ ಪಾಠ–4 ಇಂಗ್ಲಿಷ್‌ನಿಂದ ಕನ್ನಡಕ್ಕೆ ಭಾಷಾಂತರಿಸಿ.
31. He importunes, 32. She retaliates, 33. Krishna indicts, 34.Seethe surmises, 35.She turnturtles, 36.Duryodhana gibes, 37.He perceives, 38.She parboils, 39.She giggles, 40.Rama loathes.

ನಿಯಮ 2B: ಕ್ರಿಯಾಪದ (Verb) ದ ಕೊನೆಯ ಅಕ್ಷರಗಳು S,Sh,Ch,X,Z,O ಆಗಿದ್ದಲ್ಲಿ ಕ್ರಿಯಾಪದಕ್ಕೆ ‘es’ ಪ್ರತ್ಯಯವನ್ನು ಸೇರಿಸಿ ಕರ್ತೃ(Subject)ವಿನ ಮುಂದೆ ಇಡಬೇಕು.
ಉದಾಹರಣೆಗಳು 
1.ಅವಳು ಮುದ್ದಿಸುತ್ತಾಳೆ  She kisses
2.ಅವನು ತಳ್ಳುತ್ತಾನೆ  He pushes
3.ಶ್ರೀನಿವಾಸ್ ಕಲಿಸುತ್ತಾನೆ  Srinivas teaches
4.ಅವನು ಕಲೆಸುತ್ತಾನೆ.  He mixes
5.ಅವನು ಹೋಗುತ್ತಾನೆ.  He goes
6.ಅದು ಝೇಂಕರಿಸುತ್ತದೆ.  It buzzes

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT