ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷಾವಾರು ಪ್ರಾಂತ್ಯ ರಚಿಸಿದ್ದೇಕೆ?

Last Updated 18 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಭಾರತ ಸ್ವತಂತ್ರವಾದ ಮೇಲೆ ಭಾಷಾ ಪ್ರಾಂತ್ಯಗಳ ರಚನೆಯಾಯಿತು. ಅದಕ್ಕೆ ಮೂಲ ಕಾರಣ ಆಂಧ್ರದ ಪೊಟ್ಟಿ ಶ್ರೀರಾಮುಲು. ಈ ರಚನೆಯ ಉದ್ದೇಶ ಪ್ರಾದೇಶಿಕ ಭಾಷೆಗಳು ಉಳಿಯಬೇಕು, ಬೆಳೆಯ­ಬೇಕು ಮತ್ತು ಅಭಿವೃದ್ಧಿ  ಹೊಂದಬೇಕು ಎಂಬುದು. ಮಕ್ಕಳು ಯಾವ ಭಾಷೆಯನ್ನಾದರೂ ಕಲಿಯಲಿ, ಎಷ್ಟು ಭಾಷೆಗಳನ್ನಾದರೂ ಕಲಿಯಲಿ, ಆದರೆ ಪ್ರಾದೇ­ಶಿಕ  ಭಾಷೆಗೆ ಆದ್ಯತೆ ಇರಲಿ. ಮೊದಲ ಸ್ಥಾನ ಅದಕ್ಕೇ ಇರಲಿ.

ರಾಜ್ಯ ಸರ್ಕಾರದ ತಪ್ಪಿನಿಂದ, ಕನ್ನಡಿಗರ ನಿರಭಿ­ಮಾನ ಹಾಗೂ ತಾತ್ಸಾರದಿಂದ ಕನ್ನಡ ಈಗಾಗಲೇ ಅರ್ಧನಾಶವಾಗಿದೆ. ಇದು ಹೀಗೆಯೇ ಮುಂದುವರಿ­ದರೆ ಪೂರ್ತಿ ನಾಶವಾಗುವ ಕಾಲ ಬಹುದೂರ ಇರ­ಲಾರದು.  ಕನ್ನಡದ ಹೆಸರಿನಲ್ಲಿ ಇಂಗ್ಲಿಷ್‌ ಸ್ಕೂಲ್‌ ನಡೆಸು­ತ್ತಿದ್ದರೂ ಸರ್ಕಾರ ಕಣ್ಣುಮುಚ್ಚಿ ಕುಳಿತಿತ್ತು. ಅವು ನಾಯಿಕೊಡೆಗಳಂತೆ ಈಗ ಬೃಹದಾಕಾರವಾಗಿ ಬೆಳೆದು ನಿಂತಿವೆ.

ಸುಪ್ರೀಂಕೋರ್ಟು ಮೊದಲು ಮಾತೃ­­ಭಾಷೆ ಕಡೆಗೆ ಗಮನ ಹರಿಸಿತ್ತು. ಈಗ ಅದು ಭಾಷೆ ಆಯ್ಕೆಯ ಜವಾಬ್ದಾರಿಯನ್ನು ಮಕ್ಕಳು ಹಾಗೂ ಪೋಷಕರ ವಿವೇಚನೆಗೆ ಬಿಟ್ಟಿದೆ. ಇದು ಸಮಂಜ­ಸವಲ್ಲ. ಕಲಿಸಿದ್ದನ್ನು ಕಲಿಯುತ್ತವೆ ಮಕ್ಕಳು. ಅವರಿಗೆ ಜವಾಬ್ದಾರಿ ಸಲ್ಲದು. ಇನ್ನು ಪೋಷಕರು ಅನ್ನ ಕೊಡುವ ಭಾಷೆಯ ಕಡೆಗೆ ಗಮನ ಹರಿಸುತ್ತಾರೆ. ಹಾಗಾದರೆ ಪ್ರಾದೇಶಿಕ ಭಾಷೆಗಳು ಉಳಿಯಲು ಸಾಧ್ಯವೇ?

ಸುಪ್ರೀಂಕೋರ್ಟು ಆದೇಶದಿಂದ ಎಲ್ಲಾ ಪ್ರಾದೇಶಿಕ ಭಾಷೆಗಳಿಗೆ ಉಳಿವಿನ ಪ್ರಶ್ನೆ ಎದುರಾಗಿದೆ. ಈ ಕುರಿತು ಸುಪ್ರೀಂಕೋರ್ಟು ಮರು ಪರಿಶೀಲಿ­ಸಲೇ­ಬೇಕು. ಆಯ್ಕೆಯ ಜವಾಬ್ದಾರಿಯನ್ನು ರಾಜ್ಯ ಸರ್ಕಾ­ರ­ಗಳಿಗೆ ವಹಿಸಬೇಕು. ಕೊಡದಿದ್ದರೆ ಎಲ್ಲಾ ರಾಜ್ಯಗಳು ಒಟ್ಟಿಗೆ ಸೇರಿ ಈ ಗಂಡಾಂತರದಿಂದ ಪಾರಾಗುವುದರ ಬಗ್ಗೆ ಯೋಚಿಸಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT