ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷೆ ನೆಲೆಯಲ್ಲಿ ನೋಡುವುದು ಬೇಡ

Last Updated 21 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ಮಣಿಪುರ ಮೂಲದ ಎಂಜಿನಿಯರಿಂಗ್‌  ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆಗೆ (ಪ್ರ.ವಾ., ಅ.16) ನನ್ನ ಪ್ರತಿಕ್ರಿಯೆ. ಭಾರತದ ಈಶಾನ್ಯ ರಾಜ್ಯಗಳು ಒಂದು ವಿಚಿತ್ರ ಪರಿಸ್ಥಿತಿಯನ್ನು ಎದುರಿಸುತ್ತಿವೆ. ಅಲ್ಲಿನ ನಾಗರಿ­ಕರು ರಾಷ್ಟ್ರೀಯ ಮುಖ್ಯವಾಹಿನಿಯಿಂದ  ದೂರವಿರುವುದರಲ್ಲಿ ಸರ್ಕಾರ ಹಾಗೂ ಸಾರ್ವ­ಜನಿಕರ ನೇರ ಜವಾಬ್ದಾರಿ ಇದೆ.

ಚೀನಾ ಮತ್ತು ಬಾಂಗ್ಲಾ ದೇಶಗಳ ನಿರಂತರ ಅತಿಕ್ರಮ­ಣದ ಷಡ್ಯಂತ್ರಕ್ಕೆ ಅಲ್ಲಿನ ಜನರು ಬಲಿ­ಯಾಗಿದ್ದಾರೆ. ಇದರ ಜೊತೆಗೆ ಮಿಜೋರಾಂ, ನಾಗಾಲ್ಯಾಂಡ್‌ ಮತ್ತು ತ್ರಿಪುರಗಳಲ್ಲಿ ಬಂಡುಕೋರ ಗುಂಪುಗಳ ನಡುವೆ ಸಂಘರ್ಷವೂ ನಡೆದಿದೆ. ಈ ಪರಿಸ್ಥಿತಿಯಲ್ಲಿ ಈಶಾನ್ಯ ಭಾರತ ದವರನ್ನು ಮುಖ್ಯವಾಹಿನಿಗೆ ಕರೆ ತರಲು, ದೇಶದ ಉಳಿದ ಭಾಗಗಳ ನಾಗರಿಕರು ಪೂರಕ ಮನೋಭಾವ ರೂಢಿಸಿಕೊಳ್ಳಬೇಕಾಗಿದೆ.

ಈ ತಿಂಗಳ 15ರಂದು ಪಾನಮತ್ತ  ಗುಂಪೊಂದು ಮಣಿಪುರ ವಿದ್ಯಾರ್ಥಿಗಳ ಮೇಲೆ ಯಾವುದೋ ನೆಪದಲ್ಲಿ ಹಲ್ಲೆ  ನಡೆಸಿರುವುದು  ಅಮಾನವೀಯ, ಖಂಡನಾರ್ಹ. ಈ ಘಟನೆ­ಯನ್ನು ಭಾಷೆಯ ನೆಲೆಯಲ್ಲಿ ನೋಡುವುದು ಸರಿಯಲ್ಲ. ಬೆಂಗಳೂರಿನ ಜನರು ಶಾಂತ ಸ್ವಭಾವಕ್ಕೆ ಹೆಸರಾದವರು.

ಇಲ್ಲಿ ನೌಕರಿಗಳಲ್ಲಿ ತೊಡಗಿಸಿಕೊಂಡಿರುವ ಅನ್ಯರಾಜ್ಯಗಳ ಜನರಲ್ಲಿ ಈಶಾನ್ಯ ಭಾರತೀಯರ ಸಂಖ್ಯೆ ಗಣನೀಯ­ವಾಗಿದೆ. ಅನೇಕರು ಹಿಂದಿ ಮತ್ತು ಕನ್ನಡ ಕಲಿತು ಸಹಬಾಳ್ವೆ ಮಾಡುತ್ತಿದ್ದಾರೆ. ಅವರು ಯಾರೂ  ಕರ್ನಾಟಕ ವಿರೋಧಿಗಳಾಗಲಿ, ಕನ್ನಡ ವಿರೋಧಿ­ಗ­-­ಳಾಗಲಿ ಅಲ್ಲ. ಅಪಪ್ರಚಾರದ ಗಾಳಿಸುದ್ದಿಗೆ ಹೆದರಿ  ಕಳೆದ ವರ್ಷ ಈಶಾನ್ಯ ಭಾರತೀಯರು ಬೆಂಗಳೂರಿನಿಂದ ಗುಳೆ ಹೊರಟಂಥ ಘಟನೆಗಳು ಕನ್ನಡನಾಡಿನಲ್ಲಿ ಮರುಕಳಿಸದಿರಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT