ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀತಿ: ಮಹಿಳೆಯರು ಗುಳೆ

Last Updated 6 ಜೂನ್ 2014, 19:30 IST
ಅಕ್ಷರ ಗಾತ್ರ

ಲಖನೌ: ಸೋದರ ಸಂಬಂಧಿಗಳಾದ ದಲಿತ ಬಾಲಕಿಯರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಬರ್ಬರ ಕೊಲೆ ಪ್ರಕರಣದಿಂದ ದಿಗಿಲುಗೊಂಡಿರುವ ಬದಾಯೂಂ ಜಿಲ್ಲೆಯ ಕಟರಾ ಸಾದತ್‌ಗಂಜ್‌ ಗ್ರಾಮದ ಬಹುತೇಕ ಮಹಿಳೆಯರು ಗುಳೆ ಹೋಗುತ್ತಿದ್ದಾರೆ.

ಈ ಮಧ್ಯೆ, ಬೆದರಿಕೆಯ ಹಿನ್ನೆಲೆಯಲ್ಲಿ ಬಾಲಕಿಯರ ಕುಟುಂಬದವರೂ ಗ್ರಾಮ ತೊರೆಯಲು ಮುಂದಾಗಿದ್ದಾರೆ ಎನ್ನಲಾಗಿದೆ. ಈ ಕುಟುಂಬದವರಿಗೆ ಭದ್ರತೆಯ ಒದಗಿಸುವ ಭರವಸೆ ನೀಡಿರುವ ರಾಜ್ಯ ಸರ್ಕಾರ, ಅವರ ಮನೆಗಳ ಸುತ್ತ ಸಶಸ್ತ್ರ ಪೊಲೀಸರ ಪಹರೆಯನ್ನು ನಿಯೋಜಿಸಿದೆ.

ಆದರೂ ಬೆದರಿಕೆ ನಿಂತಿಲ್ಲದ ಕಾರಣ ಈ ಕುಟುಂಬದವರು ಊರು ತೊರೆಯಲು ಚಿಂತಿಸಿದ್ದಾರೆ. ಜಿಲ್ಲಾಡಳಿತ ಬಾಲಕಿಯರ ಕುಟುಂಬದವರ ಮನವೊಲಿಸುವ ಪ್ರಯತ್ನ ಮುಂದುವರಿಸಿದೆ ಎಂದು ತಿಳಿದುಬಂದಿದೆ.

ಬೇರೆ ಊರುಗಳಿಗೆ ಮದುವೆಯಾಗಿ ಹೋಗಿರುವ ಮಹಿಳೆಯರು ತಮ್ಮ ಮಕ್ಕಳೊಂದಿಗೆ ಬೇಸಿಗೆ ರಜೆಗೆಂದು ತವರಿಗೆ ಬಂದಿದ್ದರು. ಆದರೆ, ಈ ಘಟನೆಯ ನಂತರ ದಿಗಿಲುಗೊಂಡಿರುವ ಅವರು ಕೂಡಲೇ ಗಂಡನ ಮನೆಗೆ ವಾಪಸು ಹೋಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT