ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ಕಬಳಿಕೆಗೆ ಅಂಕುಶ ಅಗತ್ಯ

Last Updated 24 ಜುಲೈ 2014, 19:30 IST
ಅಕ್ಷರ ಗಾತ್ರ

ದೇವನಹಳ್ಳಿ ತಾಲ್ಲೂಕಿನಲ್ಲಿ ತಹಶೀಲ್ದಾ­ರರು ನೂರಾರು ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಜಮೀನನ್ನು, ನಕಲಿ ದಾಖಲೆ ಸೃಷ್ಟಿಸಿ, ಖಾಸಗಿ ವ್ಯಕ್ತಿಗಳಿಗೆ ಹಸ್ತಾಂ­ತ­ರಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಅಧಿಕಾ­ರವೇ ಹಾಗೆ. ಆಕ್ಟೋಪಸ್‌ ತರಹ, ತನ್ನ ಹಿಡಿತಕ್ಕೆ ಸಿಕ್ಕಿದ್ದನ್ನು ಕಬಳಿಸುತ್ತದೆ.

ಅಧಿಕಾರ­ವನ್ನು ಕೆಲವರು ಒಳ್ಳೆಯದಕ್ಕೆ ಬಳಸಿದರೆ, ಕೆಲವರು ಕೆಟ್ಟದ್ದಕ್ಕೂ ಬಳಸುತ್ತಾರೆ. ಪೋಡಿ ಪ್ರಕರಣವನ್ನು ಶೀಘ್ರವಾಗಿ ವಿಲೇವಾರಿ ಮಾಡ­­­ಬೇಕೆಂಬ ಸರ್ಕಾರದ ಸೂಚನೆಯನ್ನು ನೆಪವಾಗಿಟ್ಟು ಕೊಂಡು, ಅಧಿಕಾರಿಗಳು ಇಂಥ ಅಕ್ರಮ ಗಳನ್ನು ಎಸಗುತ್ತಾರೆ. ಇಂಥ ಅಕ್ರಮ­ಗಳಿಗೆ  ಸರ್ಕಾರದ ಆತುರ (ಅವಿವೇಕ)ವೂ ಕಾರಣ.

ಇನ್ನು ಮುಂದೆ ಪೋಡಿ ಪ್ರಕರಣಗಳನ್ನು ಮಂಜೂರು ಮಾಡಲು, ತಹಶೀಲ್ದಾರ ಒಬ್ಬ­ರಿಗೇ ಅಧಿಕಾರ ಕೊಡಬಾರದು. ಅವರು ಪ್ರಕರಣಗಳನ್ನು ಅಸಿಸ್ಟಂಟ್‌ ಕಮಿಷನರ್ ಕಚೇರಿಗೆ, ಅಂತಿಮ ಮಂಜೂರಾತಿಗಾಗಿ, ಶಿಫಾ­­ರಸು ಮಾಡಿ ಸಲ್ಲಿಸುವಂತಾಗಬೇಕು. ಬಳಿಕ ಅಸಿಸ್ಟಂಟ್‌ ಕಮಿಷನರ್‌ ಖುದ್ದು ಸ್ಥಳ­ಪರಿ­ಶೀಲನೆ ಮಾಡಿ, ಅಂತಿಮ ಮಂಜೂರಾತಿ ನೀಡುವಂತಾಗಬೇಕು.

ಅಧಿಕಾರ  ವಿಕೇಂದ್ರೀ­ಕರ­ಣ­ವಾಗಬೇಕು. ಅಲ್ಲದೆ, ಅಕ್ರಮವೆಂದು ಕಂಡು­ಬಂದಲ್ಲಿ, ಅಧಿಕಾರಿಗಳಿಗೆ ಕಠಿಣ ಶಿಕ್ಷೆ­ಯಾ­ಗಬೇಕು. ಇಂಥ ಮುಂಜಾಗ್ರತಾ ಕ್ರಮ­ಗಳಿಂದ, ಭೂಕಬಳಿಕೆಗಳನ್ನು ತಡೆಗಟ್ಟ­ಬಹುದು.
– ಕೆ.ಜಿ. ಭದ್ರಣ್ಣವರ, ಮುದ್ದೇಬಿಹಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT