ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂ ಹಗರಣ: ಜಾಮೀನು ಪಡೆದ ಜಗನ್ ಮಿತ್ರರು

Last Updated 19 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಹೈದರಾಬಾದ್ (ಪಿಟಿಐ): ಪರಸ್ಪರ ಹೊಂದಾಣಿಕೆಯ ಬಂಡವಾಳ ಹೂಡಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಗೊಲೆ ಸಂಸದ ವೈ.ವಿ. ಸುಬ್ಬಾರೆಡ್ಡಿ, ಐಎಎಸ್‌ ಅಧಿಕಾರಿ ಎಸ್‌.ಎನ್. ಮೊಹಂತಿ ಮತ್ತು ಇತರರು ಶುಕ್ರವಾರ ಇಲ್ಲಿಯ ಸಿಬಿಐ ವಿಶೇಷ ನ್ಯಾಯಾಲಯದ ಎದುರು ಹಾಜರಾದರು.

ಇಂದೂ–ಆಂಧ್ರಪ್ರದೇಶ ವಸತಿ ಮಂಡ­ಳಿಯ ಭೂ ಹಗರಣಕ್ಕೆ ಸಂಬಂಧಿಸಿ­ದಂತೆ ಸಲ್ಲಿಸಿರುವ 11ನೇ ದೋಷಾ­ರೋಪಟ್ಟಿಯನ್ನು ಪರಿಗಣಿಸಿ ನ್ಯಾಯಾ­ಲಯವು  ಸಮನ್ಸ್ ಜಾರಿ ಮಾಡಿತ್ತು.

ವೈ.ವಿ. ಸುಬ್ಬಾರೆಡ್ಡಿ, ಎಸ್‌.ಎನ್. ಮೊಹಂತಿ ಅವರಲ್ಲದೆ, ಜಗನ್ ಮೋಹನ್ ರೆಡ್ಡಿ ಅವರ ಹಣಕಾಸು ಸಲಹೆಗಾರ ವಿಜಯ್ ಸಾಯಿ ರೆಡ್ಡಿ, ಕೈಗಾರಿಕೋದ್ಯಮಿ ಐ. ಶಾಂಪ್ರಸಾದ್ ಹಾಗೂ ಕೆಲವು ಕಂಪೆನಿಗಳ ಪ್ರತಿನಿಧಿ­ಗಳು ನ್ಯಾಯಾಲಯಕ್ಕೆ ಹಾಜರಾಗಿ ₨25 ಸಾವಿರಗಳ ಭದ್ರತಾ ಠೇವಣಿ ಮತ್ತು ಇಬ್ಬರು ವ್ಯಕ್ತಿಗಳ ಭದ್ರತೆ­ಒದಗಿಸಿ ಜಾಮೀನು ಪಡೆದಿದ್ದಾರೆ. ಜಗನ್‌ಮೋಹನ್ ರೆಡ್ಡಿ ಸೇರಿದಂತೆ ಒಟ್ಟು 14 ಜನರನ್ನು 11ನೇ ದೋಷಾ­ರೋಪ ಪಟ್ಟಿಯಲ್ಲಿ ಆಪಾದಿತರು ಎಂದು ಸೇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT