ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರೂಣದ ಹೃದಯಕ್ಕೆ ಶಸ್ತ್ರಚಿಕಿತ್ಸೆ

ಹೈದರಾಬಾದ್‌ ವೈದ್ಯರ ಸಾಧನೆ
Last Updated 30 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಹೈದರಾಬಾದ್‌ (ಐಎಎನ್‌ಎಸ್‌): ಇಲ್ಲಿನ ‘ಕೇರ್‌’ ಆಸ್ಪತ್ರೆ ವೈದ್ಯರು ತಾಯಿಯ ಗರ್ಭದಲ್ಲಿರುವ ಭ್ರೂಣಕ್ಕೆ ಹೃದಯ ಶಸ್ತ್ರಚಿಕಿತ್ಸೆ ನಡೆಸಿದ್ದು, ದೇಶದಲ್ಲೇ ಇದು ಇಂತಹ ಪ್ರಥಮ ಪ್ರಯತ್ನ ಎನ್ನಲಾಗಿದೆ. 27 ವಾರ ತುಂಬಿದ್ದ ಭ್ರೂಣದ ಹೃದಯದ ಕವಾಟದಲ್ಲಿರುವ ದೋಷವನ್ನು ಈ ಮೂಲಕ ಸರಿಪಡಿಸಲಾಗಿದೆ.

25 ವರ್ಷದ ಸಿರಿಷಾ ಎಂಬ ಮಹಿಳೆಯ ಗರ್ಭದಲ್ಲಿರುವ ಮಗುವಿನ ಮೇಲೆ ಈ ಚಿಕಿತ್ಸೆ ನಡೆಸಲಾಗಿದೆ. ಮಕ್ಕಳ ಹೃದ್ರೋಗದಲ್ಲಿ ತಜ್ಞರಾಗಿರುವ  ಕೆ. ನಾಗೇಶ್ವರ ರಾವ್‌ ನೇತೃತ್ವದ ಎಂಟು ವೈದ್ಯರ ತಂಡ ಎರಡೂವರೆ ಗಂಟೆಗಳ ಕಾಲ ಈ ವಿಶೇಷ ಶಸ್ತ್ರಚಿಕಿತ್ಸೆ ನಡೆಸಿತು.

ಇದರಿಂದಾಗಿ ಮಗು ಆರೋಗ್ಯವಂತವಾಗಿ ಬೆಳೆಯಲಿದೆ. ಅಗತ್ಯ ಬಿದ್ದಲ್ಲಿ ಮಗು ಜನಿಸಿದ ನಂತರ ಮತ್ತೊಂದು ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT