ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳನಲ್ಲಿದ್ದವು ನದಿ, ಸರೋವರ!

ಅಂಗಾರಕನಲ್ಲಿ ಜೀವಿ ಕುರುಹು ವಾದಕ್ಕೆ ಮತ್ತಷ್ಟು ಪುಷ್ಟಿ
Last Updated 9 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌(ಪಿಟಿಐ): ಸುಮಾರು 330 ರಿಂದ 380 ಕೋಟಿ ವರ್ಷಗಳ ಹಿಂದೆ ಮಂಗಳ ಗ್ರಹ ಭಾರಿ ದೊಡ್ಡ ಸರೋವರ ಮತ್ತು ನದಿಗಳ ಬೀಡಾಗಿತ್ತು. ಒಂದು ಕಾಲಕ್ಕೆ ಯಥೇಚ್ಛ ನೀರಿದ್ದ ಕಾರಣ ಈ ಗ್ರಹದಲ್ಲಿ ಜೀವಿಗಳ ಕುರುಹು ಇದ್ದಿರಬಹುದಾದ ಸಾಧ್ಯತೆ ಇದೆ ಎಂದು ನಾಸಾದ ಭಾರತೀಯ ಸಂಜಾತ ವಿಜ್ಞಾನಿ ಅಶ್ವಿನ್ ವಾಸವದಾ ತಿಳಿಸಿದ್ದಾರೆ.

ಕ್ಯೂರಿಯಾಸಿಟಿ ರೋವರ್‌ ಗಗನ ನೌಕೆಯ ದತ್ತಾಂಶಗಳ ಅಧ್ಯಯನದಿಂದ ಈ ಕುತೂಹಲಕಾರಿ ಅಂಶಗಳು ಪತ್ತೆಯಾಗಿವೆ. ಮಂಗಳ ಗ್ರಹದ ಅತಿದೊಡ್ಡ ಗೇಲ್‌ ಕುಳಿಯ ಸುತ್ತಮುತ್ತ ಸಂಗ್ರಹವಾದ  ನೀರಿನ ಪದರುಗಳು ಕಾಲಕ್ರಮೇಣ ಮೌಂಟ್‌ ಶಾರ್ಪ್‌ ಪರ್ವತ ನಿರ್ಮಾಣಕ್ಕೆ ಮೂಲ ಆಧಾರಸ್ತಂಭವಾಗಿವೆ ಎಂದು ಅಶ್ವಿನ್‌ ಅಭಿಪ್ರಾಯಪಟ್ಟಿದ್ದಾರೆ.

ಹಿಂದೆ ಮಂಗಳ ಗ್ರಹದಲ್ಲಿ ಸಾಕಷ್ಟು ನೀರು ಇದ್ದ ಕಾರಣ ಅಂಗಾರಕನ ಅಂದಿನ ವಾತಾವರಣಕ್ಕೂ ಇಂದಿನ ವಾತಾವರಣಕ್ಕೂ  ಅಜಗಜಾಂತರ ವ್ಯತ್ಯಾಸವಿದೆ. ಎಂದೂ ಬತ್ತದ ಅತಿ ದೊಡ್ಡ ನದಿ, ಸರೋವರ, ಜಲಪಾತಗಳು ಈಗ ರೋವರ್‌ ಗಗನನೌಕೆ ಇಳಿದಿರುವ ಗೇಲ್ ಕುಳಿಯ ಸುತ್ತಮುತ್ತ  ಅಸ್ತಿತ್ವದಲ್ಲಿದ್ದ ಸಾಧ್ಯತೆಗಳಿವೆ.

ಗಾಳಿಯಿಂದ ಹಾರಿಬಂದ ಅಪಾರ ಪ್ರಮಾಣದ ಧೂಳಿನ ಕಣಗಳ ಶೇಖರಣೆ ಮೌಂಟ್‌ ಶಾರ್ಪ್‌ ನಿರ್ಮಾಣಕ್ಕೆ ಕಾರಣವಾಗಿರಬಹುದು ಎಂಬ ಊಹೆ ಸುಳ್ಳಾಗಿದೆ. ಗೇಲ್ ಕುಳಿಯ ಭೂ ಸ್ಥರಗಳ ಅಧ್ಯಯನ ಮತ್ತು ಅಲ್ಲಿ ಕಂಡು ಬಂದ ಜೇಡಿಮಣ್ಣು  ಒಂದು ಕಾಲಕ್ಕೆ ಅಲ್ಲಿ ಹೇರಳ ಪ್ರಮಾಣದ ನೀರಿತ್ತು ಎಂಬುವುದನ್ನು ದೃಢಪಡಿಸಿವೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT