ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳನಿಗೂ ಭೂಮಿಗೂ ಹೋಲಿಕೆ: ನಾಸಾ ಅಧ್ಯಯನ

Last Updated 29 ಜೂನ್ 2016, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ಮಂಗಳನ ಅಂಗಳದಲ್ಲಿ ಇಳಿದು ಅಧ್ಯಯನ ನಡೆಸುತ್ತಿರುವ ಅಮೆರಿಕದ ನಾಸಾ ನಿರ್ಮಿತ ‘ಕ್ಯೂರಿಯಾಸಿಟಿ ಗಗನ ನೌಕೆ’, ಅಲ್ಲಿನ ಶಿಲೆಗಳಲ್ಲಿ ಭಾರಿ ಪ್ರಮಾಣದ ಮ್ಯಾಂಗನೀಸ್‌ ಆಕ್ಸೈಡ್‌ ಇರುವುದನ್ನು ಪತ್ತೆ ಹಚ್ಚಿದೆ.

ಮಂಗಳ ಗ್ರಹವು ಈ ಹಿಂದೆ ಭೂಮಿಯಲ್ಲಿರುವಂತಹ ವಾತಾವರಣ ಹೊಂದಿರುವ ಸಾಧ್ಯತೆ ಇದೆ ಎಂಬ ವಾದಕ್ಕೆ ಇದು ಮತ್ತಷ್ಟು ಪುಷ್ಟಿ ನೀಡಿದೆ. 
‘ಮಂಗಳನ ನೆಲದಲ್ಲಿರುವ ಬಂಡೆಗಳಲ್ಲಿ ಮ್ಯಾಂಗನೀಸ್‌ ಆಕ್ಸೈಡ್‌ ಅಂಶ ಇರುವುದನ್ನು ಕ್ಯೂರಿಯಾಸಿಟಿ ಗಮನಿಸಿದೆ.  ಒಂದಾನೊಂದು ಕಾಲದಲ್ಲಿ ಅಂಗಾರಕನ ವಾತಾವರಣದಲ್ಲಿ ಭಾರಿ ಪ್ರಮಾಣದ ಆಮ್ಲಜನಕದ ಅಂಶ ಇದ್ದಿರಬಹುದು ಎಂಬುದನ್ನು ಇದು ಸೂಚಿಸುತ್ತದೆ’ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.

ಈ ಮೊದಲು  ಕ್ಯೂರಿಯಾಸಿಟಿ ಕಳುಹಿಸಿದ ಮಾಹಿತಿಗಳನ್ನು ಕಲೆಹಾಕಿ ವಿಶ್ಲೇಷಿಸಿದಾಗ, ಮಂಗಳನಲ್ಲಿ ಆಮ್ಲಜನಕ ಇತ್ತು ಮತ್ತು ಅಲ್ಲಿ ಸರೋವರಗಳು ಇದ್ದವು ಎಂಬ ಸೂಚನೆ ಸಿಕ್ಕಿತ್ತು. ಇದನ್ನು ನೋಡಿದರೆ ಒಂದು ಕಾಲದಲ್ಲಿ ಮಂಗಳ ಗ್ರಹ ಕೂಡ ಭೂಮಿಯಂತೆ  ಇದ್ದಿರಬಹುದು ಎಂದು ವಿಜ್ಞಾನಿಗಳು ವಿವರಿಸಿದ್ದಾರೆ.

ಕೆಂಪು ಗ್ರಹ ಎಂದೇ ಹೆಸರಾದ ಮಂಗಳನ ವಾತಾವರಣವು ಭೂಮಿಯನ್ನು ಹೋಲುತ್ತಿದ್ದ ಸಾಧ್ಯತೆ ಕಡಿಮೆ ಎಂದು ಈ ಹಿಂದೆ ಊಹಿಸಲಾಗಿತ್ತು.
ಕ್ಯೂರಿಯಾಸಿಟಿಯಲ್ಲಿ ಅಳವಡಿಸಲಾಗಿರುವ ಕೆಮ್‌ಕ್ಯಾಮ್‌ ಎಂಬ ಸಾಧನವು ಮಂಗಳನಲ್ಲಿನ ಬಂಡೆಗಳನ್ನು ಕೊರೆದು ಅವುಗಳಲ್ಲಿನ ರಾಸಾಯನಿಕ ಅಂಶಗಳನ್ನು ವಿಶ್ಲೇಷಿಸಿ ಭೂಮಿಗೆ ಮಾಹಿತಿ ರವಾನಿಸುತ್ತಿದೆ. ನಾಲ್ಕು ವರ್ಷಗಳ ಅವಧಿಯಲ್ಲಿ ಕೆಮ್‌ಕ್ಯಾಮ್‌, ಮಂಗಳ ಗ್ರಹದ 1,500 ಶಿಲೆಗಳು ಮತ್ತು ಮಣ್ಣಿನ ಮಾದರಿಗಳನ್ನು ವಿಶ್ಲೇಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT